Bengaluru: ಬೆಂಗಳೂರಿನ ಗಾಜಿನ ಕಟ್ಟಡಗಳು ಸುರಕ್ಷಿತವಲ್ಲ: ಆತಂಕಕಾರಿ ವರದಿ

ಕಟ್ಟಡಗಳ ಸೌಂದರ್ಯ ಹೆಚ್ಚಿಸಲು ಅವುಗಳ ನಿರ್ಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಜನ್ನು ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಗಾಜಿನ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿವೆ, ಆದರೆ ಯಾವುದೇ ಅಹಿತಕರ ಘಟನೆ ನಡೆದಾಗ ಅದರಲ್ಲೂ ಬೆಂಕಿ ದುರಂತಗಳು ಸಂಭವಿಸಿದಾಗ ಈ ರೀತಿಯ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂದು ವರದಿಯಾಗಿದೆ.

ಗಾಜಿನ ಕಟ್ಟಡಗಳ ನಿರ್ಮಾಣದ ಯೋಜನೆಗಳಿಗೆ ಅನುಮತಿ ನೀಡುವಾಗ, ಬೆಂಕಿ ದುರಂತಗಳ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

 BBMP Official Raises Concerns About Safety of Glass Buildings in Bengaluru

ಬುಧವಾರ ನಗರದ ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್‌ಪೈಪ್ ಕೆಫೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಬ್ಬ ವ್ಯಕ್ತಿ ಕಟ್ಟಡದ ಮೇಲಿನಿಂದ ಬಿದ್ದು ಗಾಯಗೊಂಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೇ ಇದ್ದರೂ, ಇದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಎಚ್ಚರಿಕೆಯ ಗಂಟೆಯಾಗಿದೆ.

ಬೆಂಕಿಯಿಂದಾಗಿ ಕಟ್ಟಡದ ಗಾಜುಗಳು ಒಡೆದುಹೋದವು, ಕೆಫೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು ಇದರ ವಿಡಿಯೋ ಕೂಡ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಗಾಜಿನ ಕಟ್ಟಡಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಈಗಾಗಲೇ ನಗರದಲ್ಲಿರುವ ಗಾಜಿನ ಕಟ್ಟಡಗಳ ಬಗ್ಗೆ ವಿವರವಾದ ಸಮೀಕ್ಷೆ ನಡೆಸಲು ಯೋಜಿಸುತ್ತಿದೆ.

ಪರಿಸರಕ್ಕೂ ಒಳ್ಳೆಯದಲ್ಲ

"ಗಾಜಿನ ಕಟ್ಟಡಗಳು ಸುರಕ್ಷಿತವಲ್ಲ. ಅವು ಪರಿಸರಕ್ಕೂ ಒಳ್ಳೆಯದಲ್ಲ. ಗಾಜಿನ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಗಳನ್ನು ಕೊಡದೆ ತಡೆಹಿಡಿಯಲು ನಮಗೆ ಯಾವುದೇ ನಿಯಮವಿಲ್ಲ. ಕಾಂಕ್ರೀಟ್ ರಚನೆಗಳಲ್ಲಿ, ಬೆಂಕಿಯ ಸಂದರ್ಭದಲ್ಲಿ ಕಿಟಕಿ ಗಾಜುಗಳು ಒಡೆದು ಹೋಗುತ್ತವೆ. ಆದರೆ ಗಾಜಿನ ಕಟ್ಟಡಗಳಲ್ಲಿ, ಸಂಪೂರ್ಣ ರಚನೆಯೆ ಕುಸಿಯುವ ಅಪಾಯ ಇದೆ, ಇದು ಜನರಿಗೆ ಅಪಾಯ ಹೆಚ್ಚಿಸುತ್ತದೆ. ಗಾಜುಗಳು ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ, ಇದರಿಂದ ಜನರು ತಪ್ಪಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ" ಎಂದು ಬಿಬಿಎಂಪಿ ಅಧಿಕಾರಿ ಹೇಳಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಬಳಸುವ ಗಾಜುಗಳು 232 ಡಿಗ್ರಿ ಸೆಲ್ಸಿಯಸ್ ವರೆಗಿನ ಬೆಂಕಿಯನ್ನು ನಿಭಾಯಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಯೋಮ್ ಎನ್ವಿರಾನ್ಮೆಂಟಲ್‌ನ ನಿರ್ದೇಶಕ ಮತ್ತು ವಾಸ್ತುಶಿಲ್ಪಿ ಶರತ್ ನಾಯಕ್ ಹೇಳಿದರು. ಬೆಂಕಿಯಿಂದಾಗಿ ಗಾಜಿನಲ್ಲಿ ಬಿರುಕುಗಳು ಉಂಟಾಗುತ್ತವೆ, ಆದ್ದರಿಂದ ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಗಾಜು ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ನಿರೋಧಕ ಎಂದು ಹೇಳಿದ್ದರೂ, ಅವುಗಳ ಗುಣಮಟ್ಟದ ಬಗ್ಗೆ ಯಾವುದೇ ಪರಿಶೀಲನೆ ಮಾಡಿಲ್ಲ. ಗಾಜಿನ ಕಟ್ಟಡಗಳು ದೀರ್ಘಕಾಲದವರೆಗೆ ವಿಪತ್ತನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ ಅವುಗಳನ್ನು ಸೂಕ್ತವಾಗಿ ಮತ್ತು ಬಾಹ್ಯ ಸೌಂದರ್ಯಕ್ಕಾಗಿ ಮಾತ್ರ ಬಳಸಬೇಕು. ಇಡೀ ಕಟ್ಟಡವನ್ನು ಗಾಜಿನಿಂದಲೇ ನಿರ್ಮಿಸಿದ ಹಲವು ನಿದರ್ಶನಗಳಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+