ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ: ಪರಿಸರ ಪರಿಹಾರ ಠೇವಣಿ ಇಡದ ಬಿಬಿಎಂಪಿ
ಬಿಬಿಎಂಪಿಯು ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪರಿಹಾರವಾಗಿ ಎರಡು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪರಿಹಾರವಾಗಿ ಇಡುವಲ್ಲಿ ವಿಫಲವಾಗಿದೆ. ಇಷ್ಟು ದಂಡ ವಿಧಿಸಿದ್ದು, ಯಾರು?, ಯಾಕೆ? ತಿಳಿಯಿರಿ.
ಬೆಂಗಳೂರು, ಫೆಬ್ರವರಿ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪರಿಹಾರವಾಗಿ ಎರಡು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪರಿಹಾರವಾಗಿ ಇಡುವಲ್ಲಿ ವಿಫಲವಾಗಿದೆ.
ಹೌದು, ನಗರದಲ್ಲಿನ ಘನತ್ಯಾಜ ನಿರ್ವಹಣೆಗೆ ನಿಯಮಗಳನ್ನು ಬಿಬಿಎಂಪಿ ಉಲ್ಲಂಘಿಸಿದೆ. ಈ ಸಂಬಂಧ ಪರಿಸರದ ಪರಿಹಾರ 2.40 ರೂಪಾಯಿ ಠೇವಣಿ ಇಡಬೇಕಿತ್ತು. ಆದರೆ ಬಿಬಿಎಂಪಿ ಪರಿಹಾರ ಠೇವಣಿಹಣ ಇಟ್ಟಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತಿಳಿಸಿದೆ.
ಬೆಂಗಳೂರು ವ್ಯಾಪ್ತಿಯಲ್ಲಿರುವ ಕೆಆರ್ ಪುರಂ ಹೋಬಳಿಯ ಬಸವನಪುರ ಗ್ರಾಮದ ಕೆರೆಯೊಂದರಲ್ಲಿ ಸ್ವಚ್ಛತೆ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ನ್ಯಾಯಾಧೀಕರಣಕ್ಕೆ ವಾಸ್ತವ ಸ್ಥಿತಿ ಬಗ್ಗೆ ವರದಿ ಸಲ್ಲಿಸಿತ್ತು. ಬಿಬಿಎಂಪಿ ಮತ್ತು ಮಹದೇವಪುರ ವಲಯ ಕಚೇರಿಗೆ ಜ್ಞಾಪನೆ ಪತ್ರ ಕಳುಹಿಸಿದರೆ ಪರಿಹಾರ ಹಣ ಠೇವಣಿ ಇಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಜಿಟಿ ಸ್ವಚ್ಛತೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಘನತ್ಯಾಜ್ಯ ನಿಯಮ ಉಲ್ಲಂಘನೆಗಾಗಿ ಮಹದೇವಪುರ ವಲಯದ ಕಚೇರಿಗೆ 2.40 ಕೋಟಿ ಮತ್ತು 2020 ರಿಂದ 2022ರ ಎರಡುಆರ್ಥಿಕ ವರ್ಷದಲ್ಲಿ ವಿರುದ್ಧ 15.36 ಕೋಟಿ ಪರಿಸರ ಪರಿಹಾರ ವಿಧಿಸಿತ್ತು.
ಬಸವನಪುರ ಗ್ರಾಮದ ಕೆರೆ ಅಕ್ರಮ ಕೊಳಚನೆ ನೀರು ಬಿಡುವುದನ್ನು ತಡೆಯಲು ಜಲಮೂಲದ ಜಲಾನಯನ ಪ್ರದೇಶದಲ್ಲಿ ನಿತ್ಯ ತಪಾಸಣೆ ನಡೆಸಬೇಕು. ಈ ಬಗ್ಗೆ ಅಕ್ರಮ ಎಸಗಿದವರನ್ನು ಗುರುತಿಸಿ ಕ್ರಮವಹಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿತ್ತು. ಈ ಎಲ್ಲ ಕಾರ್ಯ ನಿರ್ವಹಣೆಗೆಂದು ಮಂಡಳಿಯು ಕೆರೆ ಸುತ್ತ ಗಸ್ತು ತಿರುಗಲು ಹಾಗೂ ದಿಢೀರ್ ಭೇಟಿಗೆಂದು ಮಾರ್ಷಲ್‌ಗಳನ್ನು ನಿಯೋಜಿಸಿದೆ.
ಅಷ್ಟೇ ಅಲ್ಲದೇ ಕೆರೆಗೆ ಸಂಸ್ಕರಿಸದ ಕೊಳಚೆ ನೀರು ಸೇರ್ಪಡೆ ತಡೆಗೆ ಹಳೇ ಮದ್ರಾಸ್ ರಸ್ತೆ- ಬಸವನಪುರ ಮುಖ್ಯ ರಸ್ತೆ ಉದ್ದಕ್ಕೂ ಒಳಚರಂಡಿ ಮಾರ್ಗ ವ್ಯವಸ್ಥೆ ಮಾಡುವ ಕೆಲಸ ನಡೆಯುತ್ತಿದೆ.

ಇನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ 110 ಗ್ರಾಮಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳು ಮತ್ತು ಮಧ್ಯಂತರ ಕೊಳಚೆ ನೀರು ಪಂಪಿಂಗ್ ಸ್ಟೇಷನ್ ನಿರ್ಮಾಣ ಕೆರೆಯ ಸುತ್ತಲೂ ನಡೆಯುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿ ಕೆಲಸಗಳು ಮುಗಿದ ಬಳಿಕವೇ ಮಳೆನೀರು ಚರಂಡಿಗಳಲ್ಲಿ ಹರಿಯುವುದು ಕಡಿಮೆ ಆಗಲಿದೆ. ಇದೇ ರೀತಿ ಹೆಬ್ಬಾಳ ಹಾಗೂ ಹೊರಮಾವು ಗಳಲ್ಲಿ ಪ್ರಸ್ತಾವಿತ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಾಜ್ಯ ವಾಯು ಮಾಲಿನ್ಯ ಮಂಡಳಿ ತಿಳಿಸಿದೆ.












Click it and Unblock the Notifications