• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ: 225 ಕೋಟಿ ರೂಪಾಯಿ ಆರ್ಥಿಕ ಹೊರೆ!

|
Google Oneindia Kannada News

ಬೆಂಗಳೂರು, ಜುಲೈ 17: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿರುವ ಬಿಬಿಎಂಪಿ ವಾರ್ಡ್ ವಿಂಗಡಣೆಗೆ ಈಗಾಗಲೇ ಆಕ್ಷೇಪಣೆಗಳು ಎದುರಾಗಿವೆ. ಇದರ ಬೆನ್ನಲ್ಲೇ ಈ 45 ನೂತನ ವಾರ್ಡ್‌ಗಳಿಂದ 225 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಪುನರ್ ವಿಂಗಡಿಸಿದ್ದ 243 ನೂತನ ವಾರ್ಡ್‌ಗಳಿಗೆ ರಾಜ್ಯ ಸರ್ಕಾರ ಗುರುವಾರ (ಜುಲೈ 14) ಅಧಿಕೃತ ಮುದ್ರೆ ಹಾಕಿದೆ. ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದಲ್ಲಿ ಪ್ರತಿ ವಾರ್ಡ್‌ಗೆ 35 ಸಾವಿರ ಜನರು ಬರುವಂತೆ ವಿಂಗಡಿಸಿ 243ಕ್ಕೆ ಹೆಚ್ಚಿಸಿದೆ.

ಇದನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿ ಕರಡು ಅಧಿಸೂಚನೆ ಹೊರಡಿಸಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನೂತನ ವಾರ್ಡ್ ಕುರಿತು ಸಾರ್ವಜನಿಕ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸುವಂತೆ ಕೋರಿತ್ತು. ಈಗ ರಚನೆ ಮಾಡಲಾಗಿರುವ ಪ್ರತಿ ಹೊಸ ವಾರ್ಡ್‌ಗೆ ಸರಾಸರಿ 5 ಕೋಟಿ ರೂಪಾಯಿ ಎಂದು ಅಂದಾಜಿಸಿದರೂ 225 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ.

"2011 ರ ಜನಗಣತಿಯ ಆಧಾರದ ಮೇಲೆ ಗಡಿ ನಿರ್ಣಯ ಮಾಡಲಾಗಿದೆ. ಅದರ ಪ್ರಕಾರ ಬೆಂಗಳೂರು 88 ಲಕ್ಷ ಜನರನ್ನು ಹೊಂದಿದೆ. 198 ವಾರ್ಡ್‌ಗಳಲ್ಲಿ ಪ್ರತಿಯೊಂದೂ ವಾರ್ಡ್ ನಲ್ಲಿ 40,000-45,000 ಜನರಿದ್ದಾರೆ. ಆದರೆ, ಬೆಂಗಳೂರು ನಗರವು ಅಂದಿನಿಂದಲೂ ಮತ್ತಷ್ಟು ಬೆಳೆದಿದೆ. ಆದರೂ ಹಳೆಯ ಅಂಕಿ ಅಂಶಗಳ ಮೇಲೆಯೆ ವಿಂಗಡಣೆ ಮಾಡಲಾಗಿದೆ" ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ.

ಬೊಮ್ಮನಹಳ್ಳಿ, ಮಹದೇವಪುರ ಮತ್ತು ಬ್ಯಾಟರಾಯನಪುರದಂತಹ ಪ್ರದೇಶಗಳ ಹೊಸ ವಾರ್ಡ್‌ಗಳಲ್ಲಿ ಆಡಳಿತ ವ್ಯವಸ್ಥೆಗಳನ್ನು ಜಾರಿಗೆ ತರಲು ವೆಚ್ಚವು 5 ಕೋಟಿ ರೂಪಾಯಿಗಳಾಗಬಹುದು, ಏಕೆಂದರೆ ಈ ವಾರ್ಡ್‌ ದೊಡ್ಡದಾಗಿದ್ದು, ಅಲ್ಲಿ ಹೆಚ್ಚು ಜನಸಂಖ್ಯೆಯಿದೆ.

BBMP New Ward Delimitation Will Cause Financial Burden of Rs 225 Crore

"ಹೊಸ ಕಚೇರಿಗಳನ್ನು ಸ್ಥಾಪಿಸುವ ಕೆಲಸ ಈಗಾಗಲೇ ಆರಂಭವಾಗಿದೆ. ಪ್ರತಿ ಹೊಸ ವಾರ್ಡ್‌ಗೆ ಹೆಚ್ಚುವರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಪೌರಕಾರ್ಮಿಕರು, ಘನತ್ಯಾಜ್ಯ ನಿರ್ವಹಣಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಿಬ್ಬಂದಿ ಅಗತ್ಯವಿದೆ. ಸಿವಿಲ್ ಕಾಮಗಾರಿಗಳಲ್ಲಿ ತೊಡಗಿರುವ ಎಂಜಿನಿಯರಿಂಗ್ ವಿಭಾಗಗಳನ್ನೂ ನಾವು ಸುಗಮಗೊಳಿಸಬೇಕಾಗಿದೆ. ಇನ್ನೂ ಹೊರ ವಾರ್ಡ್‌ಗಳಿಗೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಸ ವಾರ್ಡ್‌ಗಳಿಂದ ಆದಾಯವಿದೆಯೇ?; ವಾರ್ಡ್‌ ವಿಂಗಡಣೆಯಿಂದ ಸರ್ಕಾರಕ್ಕೆ ಯಾವ ರೀತಿಯ ಆದಾಯವಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, "ಹೊಸ ವಾರ್ಡ್‌ಗಳು ಅಸ್ತಿತ್ವದಲ್ಲಿರುವ ವಾರ್ಡ್‌ಗಳ ಉಪವಿಭಾಗವಾಗಿರುತ್ತವೆ. ಆದ್ದರಿಂದ ತೆರಿಗೆ ಪಾವತಿಸುವ ಆಸ್ತಿಗಳು ಒಂದೇ ಆಗಿರುವುದರಿಂದ ಯಾವುದೇ ಹೆಚ್ಚುವರಿ ಆದಾಯವನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಆಡಳಿತಾತ್ಮಕ ದಕ್ಷತೆ ಉತ್ತಮವಾಗಬೇಕು" ಎಂದು ಹೇಳಿದ್ದಾರೆ.

11 ವರ್ಷಗಳಷ್ಟು ಹಳೆಯದಾದ ಜನಗಣತಿಯ ಆಧಾರದ ಮೇಲೆ ಈಗ ಮಾಡಲಾಗಿರುವ ವಾಡ್‌ ವಿಂಗಡಣೆ ಮೇಲೆ ಅನೇಕ ಪ್ರಶ್ನೆಗಳು ಬರುತ್ತಿವೆ.

ಇನ್ನು "ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದ್ದು, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಿಕೊಂಡಿದ್ದಾರೆ. ವಾರ್ಡ್‌ ಮರು ವಿಂಗಡಣೆಗೆ 3 ಸಾವಿರಕ್ಕೂ ಹೆಚ್ಚು ಆಕ್ಷೆಪಗಳು ವ್ಯಕ್ತವಾಗಿವೆ. ಹೆಸರು ಬದಲಾವಣೆ ಮಾಡಿದ್ದಾರೆಯೇ ಹೊರತು ಯಾವುದೇ ವಾರ್ಡ್‌ಗಳಲ್ಲಿ ಬದಲಾವಣೆ ತಂದಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

Recommended Video

   President Election 2022: ದೇಶಾದ್ಯಂತ ಶಾಸಕರು ,ಸಂಸದರಿಂದ ಮತ ಚಲಾವಣೆ ! | Politice | Oneindia Kannada

   " ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ ಈಗ ಮರುವಿಂಗಡಣೆಯಾದ ವಾರ್ಡ್‌ಗಳಿಗೆ ಆಕಾರವೇ ಇಲ್ಲದಂತಾಗಿದೆ" ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.

   English summary
   The Bruhat Bengaluru Mahanagara Palike (BBMP) new ward delimitation will cause financial burden of Rs 225 crore, new wards only be a subset of the existing wards, no additional revenue.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X