ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ

ಬೆಂಗಳೂರು, ಜುಲೈ 28 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಸೋಮವಾರ 46,923ಕ್ಕೆ ಏರಿಕೆಯಾಗಿದೆ.

Recommended Video

      India and Nepal border dispute explained | Oneindia Kannada

      ಬೆಂಗಳೂರು ನಗರದ ಜನ ನಿಬೀಡ ಪ್ರದೇಶಗಳಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಆದ್ದರಿಂದ ವಾಣಿಜ್ಯ ಮಳಿಗೆಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

      ಟೌನ್ ಹಾಲ್ ಸರ್ಕಲ್‌ನಿಂದ ಎಸ್‌ಪಿಜೆ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಬಿಬಿಎಂಪಿ ಸೂಚನೆ ನೀಡಿದೆ. ಅಲ್ಲದೇ ದಿನಬಿಟ್ಟು ದಿನ ಅಂಗಡಿಗಳನ್ನು ತೆರೆಯುವಂತೆ ಆದೇಶ ನೀಡಿದೆ.

      BBMP New Rules For Commercial Areas

      ಒಂದು ದಿನ ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಣಿಜ್ಯ ಚಟುವಟಿಕೆ ನಡೆಯಲಿದೆ. ಮತ್ತೊಂದು ದಿನ ಮತ್ತೊಂದು ಭಾಗದಲ್ಲಿ ಅಂಗಡಿಗಳು ತೆರೆದಿರಲಿವೆ. ಈ ನಿರ್ವಹಣೆಯನ್ನು ನೋಡಿಕೊಳ್ಳುವ ಹೊಣೆಯನ್ನು ಟ್ರೇಡರ್ಸ್ ಯೂನಿಯನ್‌ಗೆ ನೀಡಲಾಗಿದೆ.

      ಈ ಮೂಲಕ ಟೌನ್‌ ಹಾಲ್‌ ಸರ್ಕಲ್‌ನಿಂದ ಎಸ್‌ಪಿಜೆ ರಸ್ತೆಯ ತನಕ ಆಗುವ ಜನರ ದಟ್ಟಣೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಮುಂದಾಗಿದೆ. ಹೆಚ್ಚು ಜನರು ಸೇರುವುದರಿಂದ ಕೊರೊನಾ ವೈರಸ್ ಸೋಂಕು ಬೇಗ ಸಮುದಾಯದಲ್ಲಿ ಹಬ್ಬಲಿದೆ.

      ಯಾವ-ಯಾವ ರಸ್ತೆ?: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಆದೇಶ ಟೌನ್ ಹಾಲ್ ಸರ್ಕಲ್, ಜೆ. ಸಿ. ರಸ್ತೆ, ಎ. ಎಂ. ರಸ್ತೆ, ಕಲಾಸಿಪಾಳ್ಯ ಮುಖ್ಯ ರಸ್ತೆ, ಕೆ. ಅರ್. ಮಾರುಕಟ್ಟೆ ಜಂಕ್ಷನ್, ಟಿಪ್ಪುಸುಲ್ತಾನ್ ಅರಮನೆ ರಸ್ತೆ, ಬಾಷ್ಯಾಂ ರಸ್ತೆ, ಶ್ರೀನಿವಾಸ ಮಂದಿರ ರಸ್ತೆ, ಆಂಜನೇಯ ದೇವಸ್ಥಾನ ರಸ್ತೆ, ಎಸ್‌ಪಿಜೆ ರಸ್ತೆಗೆ ಅನ್ವಯವಾಗುತ್ತದೆ.

      ಎಸ್‌ಆರ್‌ಕೆ ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಯಾವುದೇ ಅಂಗಡಿಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+