ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು
ಬೆಂಗಳೂರು, ಆಗಸ್ಟ್ 9: ಬಿಬಿಎಂಪಿಯು ಸ್ವಚ್ಛ ಭಾರತ ಅಭಿಯಾನದಡಿ ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಬಿಬಿಎಂಪಿ ದುರ್ಬಳಕೆ ಮಾಡಿಕೊಂಡಿದೆ.
ಕೇಂದ್ರವು ಸ್ವಚ್ಛ ಭಾರತ ಅಭಿಯಾನದಡಿ ಮೀಸಲಿಟ್ಟಿರುವ 153 ಕೋಟಿ ರೂ. ಹಣದಲ್ಲಿ 23 ಕೋಟಿ ರೂ. ಹಣವನ್ನು ಬೆಂಗಳೂರು ಸ್ವಚ್ಛತೆಗಾಗಿ ಮೀಸಲಿಡಲಾಗಿದೆ. ಈ ಅನುದಾನವನ್ನು ಬಿಬಿಎಂಪಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.

ಕೇಂದ್ರ ಮೀಸಲಿಟ್ಟಿರುವ ಹಣ ಬೆಂಗಳೂರನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ವಿನಿಯೋಗಿಸಬೇಕಿತ್ತು. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ನಿವಾರೊಸಬಹುದಿತ್ತು, ಆದರ ಬದಲು ಆ ಹಣದಲ್ಲಿ ಕಟ್ಟಡ ಕಾಮಗಾರಿ,ಶಾಲಾ ಆಟದ ಮೈದಾನ, ಚರಂಡಿ ರಿಪೇರಿಕೆ ಹಣವನ್ನು ಬಳಕೆ ಮಾಡಿದೆ. ಈ ಕುರಿತು ಸಾಮಾಜಿಕ ಹೋರಾಟಗಾರರಾದ ಅಮರೇಶ್ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.












Click it and Unblock the Notifications