Darshan Case: ಪಟ್ಟಣಗೆರೆ ಶೆಡ್ ಮಾಲೀಕರಿಗೆ ಸಂಕಷ್ಟ: ಬಿಬಿಎಂಪಿಯಿಂದ ನೋಟಿಸ್, ಕಾರಣವೇನು?
ಬೆಂಗಳೂರು, ಜೂನ್ 20: ರಾಜ್ಯವಾಪಿ ಖಂಡನೆಗೆ ವ್ಯಕ್ತವಾದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಟ ದರ್ಶನ್ ಬಂಧನವಾಗಿ ಇಂದು ಗುರುವಾರ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಈ ಹತ್ಯೆ ನಡೆಸಿದ ಸ್ಥಳವಾದ ಆರ್‌ಆರ್‌ನಗರದ ಪಟ್ಟಣಗೆರೆ ಶೆಡ್ ಮಾಲೀಕರೀಗೆ ಇದೀಗ ಸಂಕಷ್ಟ ಎದುರಾಗಿದೆ.
ಸದ್ಯ ದರ್ಶನ್ ಅನ್ನು ಶುಕ್ರವಾರ ಮೂರನೇ ಭಾರಿಗೆ ಪೊಲೀಸ್ ಕಸ್ಟಡಿಗೆ ಪಡೆಯುವ ಕಾರ್ಯ ನಡೆದಿದೆ. ಹತ್ತು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೊಲೆ ಆರೋಪಿ ದರ್ಶನ್ ಸೇರಿ ಕೆಲವರನ್ನು ಮತ್ತೆ ಎರಡು ದಿನ ಕಸ್ಟಡಿಗೆ ಪಡೆಯಲಾಗಿದೆ.

ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್
ಈ ದರ್ಶನ್ ಮತ್ತವನ ಗ್ಯಾಂಗ್ ಕೈಯಿಂದ ರೇಣುಕಾಸ್ವಾಮಿಯು ಆರ್‌ಆರ್ ನಗರದ ಪಟ್ಟಣೆಗೆರೆಯ ಶೆಡ್‌ನಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಶೆಡ್ ಮಾಲೀಕರು ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸದ ಕಾರಣ ಬಿಬಿಎಂಪಿ ಶೆಡ್ ಮಾಲೀಕ ಕೆ.ಜಯಣ್ಣಗೆ ನೋಟಿಸ್ ನೀಡಿದೆ.
ಕಂತು ಪಾವತಿಸದ ವಾಹನಗಳನ್ನು ತಂದು ನಿಲ್ಲಿಸುವ ಶೆಡ್ ಇದಾಗಿತ್ತು. ಈ ಶೇಡ್ ಜಯಣ್ಣ ಎಂಬುವವರಿಗೆ ಸೇರಿದ್ದು, ಅವರ 2008 ರಿಂದ ಶೇಡ್ ಸ್ವತ್ತಿಗೆ ಆಸ್ತಿ ತೆರಿಗೆ ಪಾವತಿಸಿಲ್ಲ. ಹೀಗಾಗಿ ರಾಜರಾಜೇಶ್ವರಿ ನಗರ ವಲಯದ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಎರಡು ವಾರಗಳಲ್ಲಿ ದಾಖಲೆ ನೀಡಲು ಸೂಚನೆ
ಮುಂದಿನ 15 ದಿನಗಳ ಒಳಗಾಗಿ ಸ್ವತ್ತಿನ ದಾಖಲೆಗಳನ್ನು ಒದಗಿಸುವಂತೆ ಖಡಕ್ ಸೂಚನೆ ನೀಡಲಾಗಿದೆ. ದರ್ಶನ್ ಪ್ರಕರಣದಿಂದ ಈ ಸ್ವತ್ತಿನ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಆಸ್ತಿ, ಬಾಡಿಗೆ, ವಿಸ್ತೀರ್ಣ, ಕೊನೆ ಬಾರಿಗೆ ತೆರಿಗೆ ಕಟ್ಟಿದ್ದರೆ ಅದರ ರಶೀದಿ ಸೇರಿದಂತೆ ಹಲವು ದಾಖಲೆಗಳನ್ನು ಬಿಬಿಎಂಪಿ ಕೇಳಿದೆ.
ನಾನು ಈ ಶೆಡ್ ಅನ್ನು ನನ್ನ ಸಹೋದರಿಯ ಮಗ ಕಿಶೋರ್‌ಗೆ ಬಾಡಿಗೆ ನೀಡಿದ್ದೆ. ಇಲ್ಲಿ ಇಂತಹ ಘಟನೆಗಳು ನಡೆದಿರುವುದು ನನಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಬಳಿಕವೇ ಗೊತ್ತಾಗಿದೆ. ಪೊಲೀಸರು ಕರೆದರೆ ನಾನು ವಿಚಾರಣೆಗೆ ಹಾಜರಗುತ್ತೇನೆ ಎಂದು ಹತ್ಯೆ ಕೃತ್ಯ ಬಳಿಕ ಜಯಣ್ಣ ಮಾತನಾಡಿದ್ದರು.












Click it and Unblock the Notifications