ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಿಸ್ಟ್ ಕೆನಾನ್ ಸ್ಪ್ರೇಯರ್' ಯಂತ್ರಕ್ಕೆ ಚಾಲನೆ ನೀಡಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜೂನ್ 29: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ದೊಡ್ಡಮಟ್ಟದಲ್ಲಿ ಏರಿಕೆ ಕಂಡಿದೆ. ರಾಜಧಾನಿಯಲ್ಲಿ ಹೇಗಾದರೂ ಮಾಡಿ ಕೊವಿಡ್ ನಿಯಂತ್ರಿಸಬೇಕು ಎಂದು ರಾಜ್ಯಸರ್ಕಾರ ಹಾಗೂ ಬಿಬಿಎಂಪಿ ಎಲ್ಲ ರೀತಿಯ ಪ್ರಯತ್ನ ಮಾಡ್ತಿದೆ.

Recommended Video

HD Deve Gowda has withdrawn protest : ದೇವೇಗೌಡರ ಬೇಡಿಕೆಗಳನ್ನು ಈಡೇರಿಸಿದ ಯಡಿಯೂರಪ್ಪ | Oneindia Kannada

ಈ ಹಿನ್ನೆಲೆ ಕೊವಿಡ್-19 ಸೋಂಕು ತಡೆಯಲು ಸೋಂಕು ನಿವಾರಕ ಸಿಂಪಡಣೆ ಮಾಡುವ "ಮಿಸ್ಟ್ ಕೆನಾನ್ ಸ್ಪ್ರೇಯರ್" ಯಂತ್ರಕ್ಕೆ ಇಂದು ಬಿಬಿಎಂಪಿ ಚಾಲನೆ ನೀಡಿದೆ.

'ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆ ಇಲ್ಲ': ಟಾಸ್ಕ್ ಪೋರ್ಸ್'ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆ ಇಲ್ಲ': ಟಾಸ್ಕ್ ಪೋರ್ಸ್

ಇಂದು ವಿಧಾನಸೌಧ ಪೂರ್ವ ದ್ವಾರದ ಬಳಿ ಮಾನ್ಯ ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಶ್ರೀ ಆರ್.ಅಶೋಕ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹಾಗೂ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಈ ಯಂತ್ರಕ್ಕೆ ಚಾಲನೆ ನೀಡಿದರು.

Bbmp Introduces Mist Cannon Machines To Disinfect Public Places

ಈ ಕುರಿತು ಬಿಬಿಎಂಪಿ ಮೇಯರ್ ಟ್ವೀಟ್ ಮಾಡಿದ್ದು, ''ಸೋಂಕು ರಹಿತ ಪರಿಸರ ನಿರ್ಮಿಸಲು ತಂತ್ರಜ್ಞಾನದ ಬಳಕೆ. ಉತ್ತಮ, ಸುಸ್ಥಿರ, ಕಡಿಮೆ ವೆಚ್ಚದಲ್ಲಿ ತಯಾರಾದ "ಮಿಸ್ಟ್ ಕೆನಾನ್" ಯಂತ್ರ ಕೊವಿಡ್ ಸೋಂಕು ನಿರ್ವಹಣೆಗೆ ತುಂಬಾ ಸಹಾಯಕಾರಿಯಾಗಲಿದೆ'' ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮಿಸ್ಟ್ ಕೆನಾನ್ ಸ್ಪ್ರೇಯರ್ ಬಗ್ಗೆ ಹೇಳುವುದಾದರೆ ''8,000 ಲೀಟರ್ ಸಾಮರ್ಥ್ಯ ಹೊಂದಿದೆ. 50 ಮೀಟರ್ ದೂರ ಸೋಂಕು ನಿರ್ವಹಣೆ ಮಾಡಲಿದೆ. 320 ಡಿಗ್ರಿ ಸುತ್ತಳತೆಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಬಹುದಾಗಿದೆ.'' ಎಂದು ಮಾಹಿತಿ ನೀಡಿದ್ದಾರೆ.

English summary
Coronavirus Update In Bengaluru: BBMP introduces 'mist cannon' machines to disinfect public places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X