ಬೆಂಗಳೂರಿನಲ್ಲಿ ಮನೆ ತೆರವಿಗೆ ನಿಂತ ಬಿಬಿಎಂಪಿ: ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು ಅಕ್ಟೋಬರ್ 12: ಬಿಬಿಎಂಪಿ ಮನೆ ತೆರವು ವಿರೋಧಿಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕೆ.ಆರ್ ಪುರ ಸಮೀಪದ ಗಾಯತ್ರಿ ಲೇಔಟ್‌ನಲ್ಲಿ ನಡೆದಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿಗಳು ಗಾಯತ್ರಿ ಲೇಔಟ್‌ನ ಮನೆಗಳ ತೆರವಿಗೆ ಇಂದು ಮುಂದಾಗಿದ್ದರು. ಈ ವೇಳೆ ದಂಪತಿ ಮನೆ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

''ಈ ಮನೆ ಕಟ್ಟುವಾಗ ಬಿಬಿಎಂಪಿ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಟ್ಟು ಲಕ್ಷಾಂತರ ಬ್ಯಾಂಕ್ ಲೋನ್ ಕೂಡ ತೆಗೆದುಕೊಳ್ಳಲಾಗಿದೆ. ಮನೆ ಕಟ್ಟುವರೆಗೂ ಸುಮ್ನಿದ್ದು. ಈಗ ಏಕಾಏಕಿ ಜೆಸಿಬಿ ತಂದು ಡೆಮಾಲಿಷನ್ ಮಾಡಲು ನಿಂತಿದ್ದಾರೆ'' ಎಂದು ದಂಪತಿ ಆರೋಪಿಸಿದ್ದಾರೆ.

ಹಾಗಾದರೆ ಬಿಬಿಎಂಪಿಗೆ ಮನೆ ಕಟ್ಟುವ ವೇಳೆ ಅನುಮತಿ ನೀಡುವಾಗ ಇದು ರಾಜಕಾಲುವೆಯಲ್ಲಿದೆ ಎನ್ನುವ ಮಾಹಿತಿ ಇರಲಿಲ್ಲವೇ? ಆಗಲೇ ನಮಗೆ ಅನುಮತಿ ನೀಡಬಾರದಿತ್ತು. ಸೈಟ್ ಮಾಡಿದವರಿಗೆ ಯಾಕಿಲ್ಲ ಶಿಕ್ಷೆ? ಕಾರ್ಪೋರೇಟರ್‌ಗಳು ಯಾಕೆ ಬಿಬಿಎಂಪಿ ಅಧಿಕಾರಿಗಳನ್ನು ಆಗಲೇ ಪ್ರಶ್ನೆ ಮಾಡಿಲ್ಲ? ಮನೆ ಕಟ್ಟಲು ಅನುಮತಿ ನೀಡಿದ್ದಾರೆ. ಮನೆ ಕಟ್ಟುವವರೆಗೂ ಸುಮ್ಮನಿದ್ದಾರೆ. ಸಾಲ ಮಾಡಿ ಮನೆ ಕಟ್ಟಲಾಗಿದೆ. ಆ ಸಾಲ ಇನ್ನೂ ಕೂಡ ತೀರಿಲ್ಲ. ಹೀಗಿರುವಾಗ ಮನೆ ತೆರವಿಗೆ ಮುಂದಾಗಿದ್ದಾರೆ. ಇದು ಅನ್ಯಾಯ ಎಂದು ದಂಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 'ಮನೆ ತೆರವು ಮಾಡಿದರೆ ನಮ್ಮ ಮನೆಯೊಂದಿಗೆ ನಾವೂ ಸುಟ್ಟು ಬೂದಿಯಾಗುತ್ತೇವೆ ಎಂದು ದಂಪತಿ ಎಚ್ಚರಿಕೆ ನೀಡಿದ್ದಾರೆ.

BBMP house evacuation in Gayathri Layout: Couple tried to commit suicide by pouring petrol on them

ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮನೆ ತೆರವು ಮಾಡುವುದನ್ನು ನಿಲ್ಲಿಸಿದ್ದಾರೆ. ಪೊಲೀಸರು ದಂಪತಿ ಮನವೊಲಿಸುವಂತ ಕೆಲಸ ಮಾಡುತ್ತಿದ್ದಾರೆ. ಅವರ ರಕ್ಷಣೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಮನೆ ತೆರವುಗೊಳಿಸಿ ಪೊಲೀಸರು ನಮ್ಮನ್ನು ತಡೆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳದೇ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಧಿಕಾರಿಗಳು ಮೇಲಾಧಿಕಾರಿಗಳ ಮನವೊಲಿಸುತ್ತಿದ್ದಾರೆ.

BBMP house evacuation in Gayathri Layout: Couple tried to commit suicide by pouring petrol on them

ರಾಜಕಾಲುವೆ ಒತ್ತುವರಿ ಬಗ್ಗೆ ದೊಡ್ಡ ವಿಲ್ಲಾಗಳನ್ನು ತೆರವುಗೊಳಿಸಬೇಕು. ಆದರೆ ಅದನ್ನು ಮಾಡದೆ ಬಡವರ ಮನೆಗಳನ್ನು ಮಾತ್ರ ತೆರವುಗಳೊಸುತ್ತಿದ್ದಾರೆ. ನಮ್ಗೆ ಮನೆ ಸಾಲವಿದೆ. ಇನ್ನೂ ಕೂಡ ನಾವು ಮನೆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ನೀವು ನಮ್ಮ ಮನೆ ತೆರವು ಮಾಡಿದರೆ ನಮ್ಮ ಜೀವನ ಬೀದಿ ಪಾಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ದೊಡ್ಡ ದೊಡ್ಡ ಬಿಲ್ಡರ್ಸ್ ವಿಲ್ಲಾಗಳನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಬದಲಿಗೆ ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಜನ ಆರೋಪ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+