ರಸ್ತೆಗುಂಡಿ ಸಮಸ್ಯೆ: ಬೆಸ್ಕಾಂ, ಜಲಮಂಡಳಿಗೆ ಬಿಬಿಎಂಪಿ ಎಚ್ಚರಿಕೆ

ಬೆಂಗಳೂರು, ನವೆಂಬರ್ 22: ಬೆಂಗಳೂರಿನಲ್ಲಿ ರಸ್ತೆಗುಂಡಿಗಳದ್ದೆ ಸಮಸ್ಯೆ. ಎಷ್ಟೇ ದುರಸ್ತಿ ಮಾಡಿದರೂ ಒಂದೇ ಮಳೆಗೆ ಡಾಂಬರು ಕಿತ್ತು ಬರುತ್ತದೆ. ಈ ಮಧ್ಯೆ ವಿವಿಧ ಕಾಮಗಾರಿಗೆಂದು ರಸ್ತೆಗೆ ಅಗೆದು ಕಳೆಪೆಯಾಗಿ ದುರಸ್ತಿ ಮಾಡುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಬೆಂಗಳೂರು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ (BWSSB) ಇನ್ನಿತರ ಸಂಬಂಧಿಸಿದ ಇಲಾಖೆ ವಿರುದ್ಧ ಬಿಬಿಎಂಪಿ ಬೇಸರ ವ್ಯಕ್ತಪಡಿಸಿದೆ.

ಶುಕ್ರವಾರ ನಗರದ ದಾಸರಹಳ್ಳಿ ವಲಯದಲ್ಲಿ ಸಾರ್ವಜನಿಕರ ಸಭೆ ನಡೆಯಿತು. ಈ ವೇಳೆ ಜನರಿ= ಕುಂದು ಕೊರತೆ ಆಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್ ಅವರು ಮಾತನಾಡಿದರು. 60 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಸೈಡ್ ಡ್ರೈನ್‌ಗಳನ್ನು 60 ದಿನಗಳ ಕಾಲಾವಧಿಯಲ್ಲಿ ಸ್ವಚ್ಛತೆ ಮಾಡುವಂತೆ ಸೂಚಿಸಿದರು. ಇನ್ನೂ ರಸ್ತೆಗಳನ್ನು ಅಗೆದು ಸರಿಯಾಗಿ ರಿಪೇರಿ ಮಾಡದ ಇಲಾಖೆಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.

BBMP has strictly instructed BWSSB BESCOM and others to repair potholes

ಕಾಮಗಾರಿ ಸ್ಥಳದಲ್ಲಿ ರಸ್ತೆಗುಂಡಿ ದುರಸ್ತಿ ಮಾಡಿ

ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ಪಾಲಿಕೆಯ ಅನುಮತಿ ಪಡೆಯದೆ ರಸ್ತೆಗಳನ್ನು ಕತ್ತರಿಸುತ್ತಿದ್ದು, ರಸ್ತೆ ಪುನಃಸ್ಥಾಪನೆ ಸರಿಯಾಗಿ ಮಾಡದಿರುವ ಕಾರಣ ರಸ್ತೆಗಳು ಹಾಳಾಗುತ್ತಿವೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಆನ್‌ಲೈನ್ ಮೂಲಕ ಪಾಲಿಕೆಯಿಂದ ಅನುಮತಿ ಪಡೆದು ನಂತರ ರಸ್ತೆ ಕತ್ತರಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಾಮಗಾರಿ ನಡೆದಿರುವ ಸ್ಥಳದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

'ಮುಖ್ಯ ಆಯುಕ್ತರ ನಡೆ ವಲಯದ ಕಡೆ' ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿರು. ಅನೇಕ ಸಮಸ್ಯೆಗಳ ಕುರಿತು ಜನರು ಮನವಿ ಮಾಡಿದರು. ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

LED ಬೀದಿ ದೀಪಗಳ ಅಳವಡಿಕೆಗೆ ಹೊಸ ಟೆಂಡರ್

ಬಿಬಿಎಂಪಿ ವ್ಯಾಪ್ತಿಯಲ್ಲಿ LED ಬಿದಿ ದೀಪಗಳನ್ನು ಅಳವಡಿಸಲು ಹೊಸದಾಗಿ ಟೆಂಡರ್ ಕರೆಯಲಾಗುತ್ತಿದೆ. ಶಿಘ್ರವೇ ಎಲ್ಲಾ ಕಡೆ LED ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

ಸಾರ್ವಜನಿಕರಿಂದ ಬಂದ ಅಹವಾಲುಗಳು ಯಾವುವು, ಪಟ್ಟಿ

* ಹೆಚ್.ಎಂ.ಟಿ ಲೇವಟ್ ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.

* ರಸ್ತೆ ಬದಿ ತ್ಯಾಜ್ಯ ಬಿಸಾಡುತ್ತಿದ್ದು, ಅದನ್ನು ನಿಯಂತ್ರಿಸಬೇಕು.

* ಕಮ್ಮಗೊಂಡನಹಳ್ಳಿ ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಹೆಚ್ಚಿದ್ದು, ದುರಸ್ತಿಗೆ ಜನರ ಒತ್ತಾಯ.

* ಉದ್ಯಾನವನ ಹಾಗೂ ಜಿಮ್ ಉಪಕರಣಗಳ ಅಳವಡಿಕೆಗೆ ಒತ್ತಾಯ.

* ಬೀದಿ ದೀಪಗಳನ್ನು ಅಳವಡಿಕೆ ಬಡಾವಣೆಗಳ ಮನವಿ

* ನಾಗಸಂದ್ರದ ಸೌಂದರ್ಯ ಬಡಾವಣೆಯಲ್ಲಿ ರಸ್ತೆ ಹಾಗೂ ಡ್ರೈನ್ ಕಾಮಗಾರಿ ಪೂರ್ಣಗೊಳಿಸಬೇಕು.

* ರಾಘವೇಂದ್ರ ಲೇಔಟ್ ರಸ್ತೆ ಅಭಿವೃದ್ಧಿ ಕೆಲಸ ಹಾಗೂ ಸೈಡ್ ಡ್ರೈನ್ಸ್ ಸ್ವಚ್ಛತೆಗೊಳಿಸಲು ಮನವಿ ಸಲ್ಲಿಕೆ.

* ಪೀಣ್ಯ 2ನೇ ಹಂತದಲ್ಲಿ ವೈಜ್ಞಾನಿಕ ಹಂಪ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಜನರ ಆಗ್ರಹ.

* ಆದರ್ಶ ನಗರ ರಸ್ತೆಗಳಿಗೆ ಡಾಂಬರೀಕರಣ ಮಾಡಿಸುವಂತೆ ಮನವಿ ಜನರು ಮಾಡಿದರು.

* ವಿಡಿಯಾ ಸ್ಕೂಲ್ ಬಳಿ ಬಸ್ ತಂಗುದಾಣ ನಿರ್ಮಾಣ ಮಾಡಿಕೊಡಲು ಮನವಿ ಸಲ್ಲಿಸಿದರು.

* ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಬಿಬಿಎಂಪಿ ಕೋರಿದ ಜನರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+