ಬಿಬಿಎಂಪಿ: ಕಲ್ಯಾಣ ಕಾರ್ಯಕ್ರಮಡಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ಅಕ್ಟೋಬರ್ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಲ್ಯಾಣ ಕಾರ್ಯಕ್ರಮಗಳಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ ದಿನಾಂಕ ವಿಸ್ತರಿಸುವ ಜೊತೆಗೆ ಹೊಸದಾಗಿ ಎರಡು ಯೋಜನೆಗೆ ಅರ್ಜಿ ಆಹ್ವಾನಿಸಿದೆ.
ಕಲ್ಯಾಣ ಕಾರ್ಯಕ್ರಮಗಳಡಿ ಆನ್‌ಲೈನ್ ಮೂಲಕ ಆಹ್ವಾನಿಸಿದ ಅರ್ಜಿ ಸಲ್ಲಿಕೆ ದಿನಾಂಕವನ್ನು ಅಕ್ಟೋಬರ್ 19 ಅನ್ನು ಬಿಬಿಎಂಪಿ ಮಂಗಳವಾರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಆದೇಶಿಸಿದೆ.
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವವರಿಗೆ ಒಂಟಿ ಮನೆ ನಿರ್ಮಾಣ ಮಾಡಿಕೊಳ್ಳಲು 5 ಲಕ್ಷ ರೂ ಸಹಾಯಧನ ನೀಡಲಾಗುತ್ತಿದೆ. ಪದವಿ ಪೂರ್ವ, ಪದವಿ ಹಾಗೂ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ನೆರವಾಗಲು ಉಚಿತ ಲ್ಯಾಪ್‌ಟಾಪ್ ವಿತರಣೆ, ಅಂಧರಿಗೆ ಸ್ಮಾರ್ಟ್ ಸ್ಟಿಕ್ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು. ಹಿರಿಯ ನಾಗರೀಕರಿಗೆ ಮಡಚುಬಹುದಾದ (ಫೋಲ್ಡಿಂಗ್) ವೀಲ್ ಚೇರ್ ನೀಡಲಾಗುತ್ತಿದೆ.

ಈ ಮೇಲಿನ ಎಲ್ಲ ಯೋಜನೆಗಳ ಪ್ರಯೋಜನೆ ಪಡೆಯಲು ಕಲ್ಯಾಣ ಕಾರ್ಯಕ್ರಮದಡಿ ಬಿಬಿಎಂಪಿ ಅರ್ಹರಿಂದ ಅರ್ಜಿ ಆಹ್ವಾನಿಸಿತ್ತು. ಅರ್ಹರು ವಿಸ್ತರಿಸಿದ ದಿನಾಂಕ ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಬಹುದಾಗಿದೆ.
ಬಿಬಿಎಂಪಿಯು ಕಲ್ಯಾಣ ಕಾರ್ಯಕ್ರಮಗಳಡಿ ಮಹಿಳಾ ಸ್ವಯಂ ಉದ್ಯೋಗಕ್ಕಾಗಿ ಸಂಚಾರಿ ಉಪಹಾರ ವಾಹನ ಖರೀದಿಸಲು ಆರ್ಥಿಕ ಸಹಾಯಧನ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ದ್ವಿಚಕ್ರ ವಾಹನ ನೀಡುತ್ತಿದೆ. ಈ ಕುರಿತು ಅರ್ಹರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸುವಂತೆ ಮಂಗಳವಾರದ ಆದೇಶಿಸಿದೆ.
ಆಸ್ತಕರು ಬಿಬಿಎಂಪಿ ಅಧಿಕೃತ ವೆಬ್‌ಸೈಟ್ (https://welfare.bbmpgov.in/) ಭೇಟಿ ನೀಡಬೇಕು. ಇಲ್ಲವಾದರೆ ಬೆಂಗಳೂರು ಒನ್ ಕೇಂದ್ರದಲ್ಲಿ ರೂ.30 ಶುಲ್ಕ ಪಾವತಿಸಿ ಆನ್‌ಲೈನ್ ಮೂಖೇನ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲಾ ವಲಯದ ಜಂಟಿ ಆಯುಕ್ತರವರ ಕಛೇರಿಯಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದು ಅಲ್ಲಿಯು ಸಹ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತೆ ಶೈಲಜಾ ಅವರ ಮೊ.ಸಂಖ್ಯೆ 9480685854 ಗೆ ಸಂಪರ್ಕಿಸುವಂತೆ ಬಿಬಿಎಂಪಿ ತಿಳಿಸಿದೆ.












Click it and Unblock the Notifications