ಬೆಂಗಳೂರಲ್ಲಿ 760 ಕೊವಿಡ್ ಲಸಿಕಾ ಕೇಂದ್ರ ಸ್ಥಾಪನೆ
ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ 760 ಕೊವಿಡ್ ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ದಾಸಪ್ಪ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಸಂಗ್ರಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ನಗರದ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂರು ವಾಹನಗಳಲ್ಲಿ ಲಸಿಕೆ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಮೊದಲ ಹಂತದಲ್ಲಿ ಕೊವಿಡ್ ಲಸಿಕೆ ಹಾಕುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.

ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಸಂಗ್ರಹ ಕೇಂದ್ರ ನಿರ್ಮಿಸಲಾಗಿದೆ. ದಾಸಪ್ಪ ಆಸ್ಪತ್ರೆಯಲ್ಲಿ 40 ಸಾವಿರ ವ್ಯಾಕ್ಸಿನ್ ಸಂಗ್ರಹಿಸುವ ಮೂರು ಐಸ್‌ಲೆಂಡ್ ರೆಫ್ರಿಜರೇಟರ್ ಹಾಗೂ 30 ಸಾವಿರ ವ್ಯಾಕ್ಸಿನ್ ಸಂಗ್ರಹಿಸುವ ಮೂರು ಐಸ್‌ಲೆಂಡ್ ರೆಫ್ರಿಜರೇಟರ್‌ಗಳಿವೆ.
ದಾಸಪ್ಪ ಆಸ್ಪತ್ರೆಯಿಂದ ಬಿಬಿಎಂಪಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡುವುದಕ್ಕೆ ಮೂರು ವಾಹನ ವ್ಯವಸ್ಥೆ ಮಾಡಲಾಗಿದೆ.
ಬಿಬಿಎಂಪಿ ಎಂಟು ವಲಯಗಳಿಗೆ ಒಬ್ಬ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ಆ ವಿಶೇಷ ಆಯುಕ್ತರು ತಮ್ಮ ವಲಯಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಲಸಿಕಾ ಕೇಂದ್ರಗಳಿಗೆ ಲಸಿಕೆ ತಲುಪಿಸುವ ಹಾಗೂ ಲಸಿಕಾ ಕೇಂದ್ರದ ವ್ಯವಸ್ಥೆ ಬಗ್ಗೆ ಪರಿಶೀಲಿಸುವ ಹೊಣೆಯನ್ನು ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications