ಬಿಬಿಎಂಪಿ ಚುನಾವಣೆ 2022: ಆಗಸ್ಟ್ 20 ಕ್ಕೆ ರಾಜ್ಯ ಚುನಾವಣಾ ಆಯೋಗ ಮಹತ್ವದ ಸಭೆ
ಬೆಂಗಳೂರು, ಆಗಸ್ಟ್ 18: ಬಿಬಿಎಂಪಿ ಚುನಾವಣೆಗೆ ಸನ್ನದ್ದವಾಗಲು ರಾಜ್ಯ ಚುನಾವಣಾ ಆಯೋಗ ಪೂರ್ವಭಾವಿ ಸಿದ್ದತಾ ಸಭೆಯನ್ನು ಆಗಸ್ಟ್ 20ರಂದು ತಮ್ಮ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ. ಆಗಸ್ಟ್ 22ಕ್ಕೆ ಮತದಾರ ನೊಂದಣಿ ಕಾರ್ಯ ಪೂರ್ಣವಾಗಲಿದ್ದು ಆಗಸ್ಟ್ 22ರ ಬಳಿಕ ಚುನಾವಣಾ ಪ್ರಕ್ರಿಯೆಯೂ ಆರಂಭವಾಗುವುದರಿಂದ ಪೂರ್ವಭಾವಿ ಸಭೆ ಮಹತ್ವದ್ದಾಗಿದೆ.
ಬಿಬಿಎಂಪಿ ಚುನಾವಣೆ ಮೇಲೆ ಯಾವಗ ಅನ್ನೋ ಪ್ರಶ್ನೆಗೆ ಅಡ್ಡ ಗೊಡೆ ಮೇಲೆ ದೀಪವಿಟ್ಟಂತೆ ಸುದ್ದಿಗಳು ಹಬ್ಬುತ್ತಿದ್ದವು. ವಾರ್ಡ್ ಪುನರ್ ವಿಂಗಡಣೆ ನೆಪವನ್ನು ಹಾಕವಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಖಡಕ್ ಆದೇಶಕ್ಕೆ ಬೆದರಿದ ಬಿಬಿಎಂಪಿ ಮತ್ತು ಸರ್ಕಾರ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಣೆ ಮಾಡಿದ್ದರು. ಇದಾದ ಬಳಿಕ ವಾರ್ಡ್ ಮೀಸಲಾತಿಯ ಗೊಂದಲ ಏರ್ಪಡಿಸುತ್ತು. ಯಾವುದೇ ಆಕ್ಷೇಪಣೆಗಳಿಗೆ ಸೊಪ್ಪು ಹಾಕದ ನಗರಾಭಿವೃದ್ದಿ ಇಲಾಖೆ ಮೊದಲು ಬಿಡುಗಡೆ ಮಾಡಿದ್ದ ಮೀಸಲಾತಿ ಪಟ್ಟಿಯನ್ನೇ ಅಂತಿಮಗೊಳಿಸಿತ್ತು.
ಹೈಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಪರ ವಾದವನ್ನು ಮಂಡಿಸಿದ ಹಿರಿಯ ವಕೀಲರು ಚುನಾವಣೆ ಮತ್ತು ವಾರ್ಡ್ ಮರುವಿಂಗಡಣೆಗೆ ಸಂಬಂಧ ಮಧ್ಯಂತರ ಆದೇಶವನ್ನು ನಿರಾಕರಿಸಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶೀಘ್ರದಲ್ಲೇ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸನ್ನದ್ದವಾಗಿದೆ.

ಆಗಸ್ಟ್ 20ಕ್ಕೆ ಚುನಾವಣಾ ಆಯೋಗದ ಪೂರ್ವಭಾವಿ ಸಭೆ
ಬಿಬಿಎಂಪಿ ಚುನಾವಣೆಯ ಸಂಬಂಧ ಆಗಸ್ಟ್ 20ಕ್ಕೆ ಚುನಾವಣಾ ಆಯೋಗದ ಪೂರ್ವಭಾವಿ ಸಭೆಯನ್ನು ಕರೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2022ರ ಪೂರ್ವಭಾವಿ ಸಿದ್ದತೆಗಳ ಬಗ್ಗೆ ಚರ್ಚಿಸಲು ಆಯುಕ್ತರು, ರಾಜ್ಯ ಚುನಾವಣಾ ಆಯೋಗ ದಿನಾಂಕ 20.08.2022 ರಂದು ಅಪರಾಹ್ನ 03.30ಕ್ಕೆ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆಯನ್ನು ನಡೆಸಲಿದ್ದು ತಪ್ಪದೇ ಹಾಜರಾಗಬೇಂದು ಆದೇಶ ಹೊರಡಿಸಿದೆ.

ರಾಜ್ಯ ಚುನಾವಣಾ ಆಯೋಗದಿಂದ ಯಾರಿಗೆ ಆದೇಶ
ಬಿಬಿಎಂಪಿ ಚುನಾವಣೆಯ ಸಂಬಂಧ ಚುನಾವಣಾ ಆಯೋಗದ ಪೂರ್ವಭಾವಿ ಸಭೆಗೆ ಬಿಬಿಎಂಪಿ ಮುಖ್ಯ ಆಯುಕ್ತರು, ವಾರ್ತ ಇಲಾಖೆಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು(ಆಡಳಿತ, ದಕ್ಷಿಣ ಮತ್ತು ಮಹದೇವಪುರ) ಬಿಬಿಎಂಪಿ , ಬಿಬಿಎಂಪಿಯ ಎಲ್ಲಾ ವಲಯದ ಆಯುಕ್ತರನ್ನು ಸಭೆಗೆ ಆಹ್ವಾನಿಸಲಾಗಿದೆ.












Click it and Unblock the Notifications