ರಾಜಕಾರಣಿಗಳೇ ರೈಟ್ ಹೇಳಿ, ನೋ ರೋಡ್, ನೋ ಓಟ್
ಬೆಂಗಳೂರು, ಆಗಸ್ಟ್. 18: ಬಿಬಿಎಂಪಿ ಚುನಾವಣಾ ಕಣದಲ್ಲಿ ಪ್ರಚಾರದ ಭರಾಟೆ ಏರುತ್ತಲಿದೆ. ಮಹಿಳಾ ಮೀಸಲಾತಿಗೆ ಮಣೆ ಹಾಕಿರುವುದರಿಂದ ಮಹಿಳೆಯರೇ ಪ್ರಚಾರದಲ್ಲಿ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಚುನಾವಣೆಯ ಒಂದು ಮುಖವಾದರೆ ಇನ್ನೊಂದು ಬೇರೆಯದೇ ಆಗಿದೆ..
ಸಾಮಾಜಿಕ ಜಾಲತಾಣದಲ್ಲಿ ಮತದಾನ ಕೇಳಲು ಬರುವವರಿಗೆ ಧಿಕ್ಕಾರ ಹೇಳಲಾಗಿದೆ. 'ಸರಿಯಾದ ರಸ್ತೆಯಿಲ್ಲ, ಹಾಗಾಗಿ ಮತದಾನವೂ ಇಲ್ಲ' ಎಂಬ ಪೋಸ್ಟ್ ಹಂಚಿಕೆಯಾಗುತ್ತಿವೆ. ಪುಟ್ ಮಿ ಇನ್ ಟಚ್ ವಿತ್ ಬೆಂಗಳೂರು ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಮಹಿಳೆಯರ ಆದಿಯಾಗಿ ಎಲ್ಲರೂ ಬೆಂಗಳೂರಿನ ರಸ್ತೆಗಳ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ರಾಜರಾಜೇಶ್ವರಿ ನಗರದ ವಿವಿಧ ಬಡಾವಣೆ, ನೈಸ್ ರಸ್ತೆ ಕೆಳಗಿನ ಅಂಅಡರ್ ಪಾಸ್, ಕಾಳಿದಾಸ ವೃತ್ತದ ದುಸ್ಥಿತಿ ಎಲ್ಲದರ ಕತೆಯನ್ನು ಫೋಟೋಗಳೇ ಹೇಳುತ್ತವೆ. ನಾಗರಿಕರೆ ತೆರೆದಿಟ್ಟ ಬೆಂಗಳೂರ ರಸ್ತೆಗಳ ಅವಸ್ಥೆಯನ್ನು ನೋಡಿಕೊಂಡು ಬರೋಣ...ನೋ ರೋಡ್ ನೋ ವೋಟ್...(ಚಿತ್ರಗಳು ಪುಟ್ ಮಿ ಇನ್ ಟಚ್ ವಿತ್ ಬೆಂಗಳೂರು)

ನೈಸ್ ರಸ್ತೆ ಕೆಳಗಿನ ರಸ್ತೆ ಅವಸ್ಥೆ
ರಾಜರಾಜೇಶ್ವರಿ ನಗರಕ್ಕೆ ಉಳಿದ ಕಡೆಯಿಂದ ಸಂಪರ್ಕ ಕಲ್ಪಿಸಲು ನೈಸ್ ರಸ್ತೆ ಅಡ್ಡವಾಗುತ್ತದೆ. ಇಲ್ಲಿನ ಅಂಡರ್ ಪಾಸ್ ಗಳು ದೇವರಿಗೆ ಪ್ರೀತಿ. ನೋ ರೋಡ್ ನೋ ವೋಟ್.

ಮಳೆ ಬಂದರೆ ಅಷ್ಟೇ ಕತೆ
ಅಂಡರ್ ಪಾಸ್ ಗಳು ಸಂಪೂರ್ಣ ಕಿತ್ತುಹೋಗಿವೆ, ರಾತ್ರಿ ಈ ಮಾರ್ಗದಲ್ಲಿ ಸಂಚಾರ ಮಾಡುವ ದ್ವಿಚಕ್ರ ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬೇಕಾಗುತ್ತದೆ. ನೋ ರೋಡ್ ನೋ ವೋಟ್.

ಕನಕದಾಸ ವೃತ್ತದ ದುರವಸ್ಥೆ
ರಾಜರಾಜೇಶ್ವರಿ ನಗರದ ಕನಕದಾಸ ವೃತ್ತ ಗುಂಡಿಮಯವಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ನೋ ರೋಡ್ ನೋ ವೋಟ್.

ಬಡಾವಣೆಗಳ ದಾರಿಯಾವುದಯ್ಯ?
ರಾಜರಾಜೇಶ್ವರಿ ನಗರದ ವಿವಿಧ ಬಡಾವಣೆಗಳಿಗೆ ತೆರಳಬೇಕು ಎಂದರೆ ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕು. ದ್ವಿಚಕ್ರ ವಾಹನ ಸವಾರರ ಪಾಡನ್ನು ಚಿತ್ರವೇ ಹೇಳುತ್ತದೆ. ನೋ ರೋಡ್ ನೋ ವೋಟ್.

ಇದೀಗ ನೆನಪಾಯಿತೆ?
ಇಷ್ಟು ದಿನ ಎಲ್ಲಿ ಹೋಗಿದ್ದೀರಿ? ಈಗ ಜನರ ಬವಣೆ ಅರ್ಥವಾಯಿತೇ? ಎಂದು ಮತ ಕೇಳಲು ಆಗಮಿಸುವವರನ್ನು ಮೌನದಕಲ್ಲೇ ತಿವಿಯುತ್ತಿರುಬ ಬೋರ್ಡ್. ನೋ ರೋಡ್ ನೋ ವೋಟ್

ಉತ್ತಮ ಪ್ರತಿಕ್ರಿಯೆ
ಫೇಸ್ ಬುಕ್ ನಲ್ಲಿ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಸೋ ಕಾಲ್ಡ್ ರಾಜಕಾರಣಿಗಳೇ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತೀದ್ದೀರಿ? ಎಂದು ಪ್ರಶ್ನೆ ಮಾಡಲಾಗುತ್ತಿದೆ.

ಬದಲಾವಣೆ ನಮ್ಮಿಂದಲೇ ಆರಂಭವಾಗಲಿ
ಪ್ರಜಾಪ್ರಭುತ್ವದಲ್ಲಿ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂಬ ಕಮೆಂಟ್ ಗಳು ನೋ ರೋಡ್ ನೋ ವೋಟ್ ಪೋಸ್ಟ್ ನ ನಂತರ ದಾಖಲಾಗಿದೆ.

ಎಲ್ಲ ಏರಿಯಾಗಳ ಹಣೆಬರಹವೂ ಇಷ್ಟೆ
ಇದು ಕೇವಲ ರಾಜರಾಜೇಶ್ವರಿ ನಗರಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಎಲ್ಲ ಏರಿಯಾಗಳ ರಸ್ತೆ ಸ್ಥಿತಿಯೂ ಇದಾಗಿದೆ.

ಮತ ಕೇಳಲು ಬರಬೇಡಿ
ಮತ ಕೇಳಲು ಬರುವ ಯಾವ ಅಧಿಕಾರ ಅಥವಾ ಯೋಗ್ಯತೆಯೂ ನಿಮಗೆ ಇಲ್ಲ. ಇದೊಂದು ಉತ್ತಮ ಅಭಿಯಾನವಾಗಿದ್ದು ಎಲ್ಲಡೆ ವ್ಯಾಪಿಸಬೇಕು ಎಂದು ನಾಗರಿಕರು ಕಮೆಂಟ್ ಗಳ ಮೂಲಕ ಆಗ್ರಹಿಸಿದ್ದಾರೆ.












Click it and Unblock the Notifications