ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಆಹ್ವಾನ ಕೊಟ್ಟ ಕುಮಾರಸ್ವಾಮಿ

ಬೆಂಗಳೂರು, ಆಗಸ್ಟ್ 18 : ಬಿಬಿಎಂಪಿ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇದ್ದು ಚುನಾವಣಾ ಪ್ರಚಾರ ಕಣ ರಂಗೇರಿದೆ. 'ಬೆಂಗಳೂರು ನಗರದ ಅಭಿವೃದ್ಧಿಗೆ ಮೂರು ಪಕ್ಷಗಳು ನೀಡಿರುವ ಕೊಡುಗೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಣ ಬನ್ನಿ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಸೋಮವಾರ ಎಚ್.ಡಿ.ಕುಮಾರಸ್ವಾಮಿ ಅವರು ಕೆಂಪೇಗೌಡ ವಾರ್ಡ್, ಅಟ್ಟೂರು, ಯಲಹಂಕ ಸೇರಿದಂತೆ ವಿವಿಧ ಕಡೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. [ಬಿಜೆಪಿ ಪ್ರಣಾಳಿಕೆಯಲ್ಲೇನಿದೆ?]

'ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಪರಸ್ಪರ ಸೀರೆ ಎಳೆಯುವ ವಿಚಾರಕ್ಕೆ ಸೀಮಿತರಾಗಿದ್ದಾರೆ. ಜೆಡಿಎಸ್ ನಗರದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದೆ. ಒಮ್ಮೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ, ನಗರ ಅಭಿವೃದ್ಧಿಯಾಗದಿದ್ದರೆ, ರಸ್ತೆಯಲ್ಲಿ ನಮ್ಮನ್ನು ನಿಲ್ಲಿಸಿ ಕೇಳಿ' ಎಂದು ಹೇಳಿದರು. [ಕಾಂಗ್ರೆಸ್ ಪ್ರಣಾಳಿಕೆ ಭರವಸೆಗಳು]

'ಬೆಂಗಳೂರು ನಗರದ ಅಭಿವೃದ್ಧಿಗೆ ಯಾವ ಪಕ್ಷ ಏನು ಮಾಡಿದೆ ಎಂಬುದನ್ನು ಬಹಿರಂಗವಾಗಿ ಚರ್ಚಿಸೋಣ. ನನ್ನ ಜೊತೆ ಚರ್ಚೆಗೆ ಬನ್ನಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರಿಗೆ ಕುಮಾರಸ್ವಾಮಿ ಸವಾಲು ಹಾಕಿದರು. ಕುಮಾರಸ್ವಾಮಿ ಚರ್ಚೆಗೆ ಆಹ್ವಾನಿಸಿದವರು ಯಾರು?...... [ಬೆಂಗಳೂರು ಅಭಿವೃದ್ಧಿಗಾಗಿ ಜೆಡಿಎಸ್ ಪ್ರಣಾಳಿಕೆ]

ಅಕ್ರಮಗಳ ಪ್ಯಾಕೇಜ್

ಅಕ್ರಮಗಳ ಪ್ಯಾಕೇಜ್

'ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿ 13 ರಿಂದ 15 ಸಾವಿರ ಕೋಟಿ ರೂ. ಗಳ ಅಕ್ರಮ ಪ್ಯಾಕೇಜ್‌ ಮಾಡಿತ್ತು. ಜೆಡಿಎಸ್ ಸದಸ್ಯರು ಬಿಬಿಎಂಪಿಗೆ ಮುತ್ತಿಗೆ ಹಾಕಿ ಅಕ್ರಮ ಬಯಲು ಮಾಡಲು ಮುಂದಾಗುತ್ತಿದ್ದಂತೆ ಕಡತಗಳಿಗೆ ಬೆಂಕಿ ಹಾಕಲಾಯಿತು' ಎಂದು ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿ ನಾಯಕರಿಗೆ ಚರ್ಚೆಗೆ ಆಹ್ವಾನ

ಬಿಜೆಪಿ ನಾಯಕರಿಗೆ ಚರ್ಚೆಗೆ ಆಹ್ವಾನ

'ಬೆಂಗಳೂರನ್ನು ಅಭಿವೃದ್ಧಿ ಮಾಡಿರುವ ಕುರಿತು ಬಿಜೆಪಿ ನಾಯಕರು ನನ್ನ ಜೊತೆ ಚರ್ಚೆಗೆ ಬರಲಿ. ಕೇಂದ್ರ ಸಚಿರಾದ ಡಿ.ವಿ. ಸದಾನಂದಗೌಡ, ಅನಂತ ಕುಮಾರ್ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿದ್ದ ಆರ್. ಅಶೋಕ್ ಚರ್ಚೆಗೆ ಬರಲಿ' ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಸಿದ್ದರಾಮಯ್ಯ ಆಗ ಏಕೆ ಮೌನವಾಗಿದ್ದರು?

ಸಿದ್ದರಾಮಯ್ಯ ಆಗ ಏಕೆ ಮೌನವಾಗಿದ್ದರು?

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆಂದು ದೂರುತ್ತಿದ್ದಾರೆ. ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಏಕೆ ಮೌನವಾಗಿದ್ದರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರಿಗೆ ಚರ್ಚೆಗೆ ಆಹ್ವಾನ

ಕಾಂಗ್ರೆಸ್ ನಾಯಕರಿಗೆ ಚರ್ಚೆಗೆ ಆಹ್ವಾನ

'ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ಚರ್ಚೆ ನಡೆಸೋಣ ಬನ್ನಿ ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಆಹ್ವಾನ ನೀಡಿದರು.

ಪರಮೇಶ್ವರ ವಿರುದ್ಧ ಗುಡುಗಿದ ಕುಮಾರಸ್ವಾಮಿ

ಪರಮೇಶ್ವರ ವಿರುದ್ಧ ಗುಡುಗಿದ ಕುಮಾರಸ್ವಾಮಿ

'ಜೆಡಿಎಸ್ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಎಂಬ ಟ್ಯಾಗ್ ತೆಗೆಯುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ನೀಡಿದ್ದ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಪರಮೇಶ್ವರ ಅವರನ್ನು ಕೇಳಿಕೊಂಡು ಪಕ್ಷದ ಹೆಸರಿಗೆ ಅರ್ಜಿ ಹಾಕಬೇಕೇ?' ಎಂದು ಪ್ರಶ್ನಿಸಿದರು.

'ರಾಜ್ಯದ ಸಚಿವರು ಮೈಗಳ್ಳರು'

'ರಾಜ್ಯದ ಸಚಿವರು ಮೈಗಳ್ಳರು'

'ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸದಸ್ಯರೊಬ್ಬರು ರೈತರು ಮೈಗಳ್ಳರು ಎಂಬ ಹೇಳಿಕೆ ನೀಡಿದ್ದಾರೆ. ರೈತರು ಮೈಗಳ್ಳರಲ್ಲ. ರಾಜ್ಯ ಸರ್ಕಾರದ ಸಚಿವರು ಮೈಗಳ್ಳರು' ಎಂದು ಕುಮಾರಸ್ವಾಮಿ ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+