ಈ ಬಾರಿಯೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತ : ವೆಂಕಯ್ಯ ನಾಯ್ಡು

ಬೆಂಗಳೂರು, ಆಗಸ್ಟ್ 22 : 'ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಿ, ಪಾಲಿಕೆಯಲ್ಲಿ ಅಧಿಕಾರ ಹಿಡಿಯಲಿದೆ' ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. 'ಮತದಾನ ನಿಮ್ಮ ಹಕ್ಕು ಕಡ್ಡಾಯವಾಗಿ ಎಲ್ಲರೂ ಬಂದು ಮತದಾನ ಮಾಡಿ' ಎಂದು ಅವರು ಕರೆ ನೀಡಿದ್ದಾರೆ. [ಮತದಾನದ ಚಿತ್ರಗಳು]

ಶನಿವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನಾ ಮಾಡಿದ ಬಳಿಕ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, 'ಯಾವುದೇ ಪಕ್ಷವಿರಲಿ ಮತದಾರರು ಮನೆಯಿಂದ ಹೊರಬಂದು ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು' ಎಂದರು. [ಮತದಾನದ ಕ್ಷಣ-ಕ್ಷಣದ ಮಾಹಿತಿ]

venkaiah naidu

'ನಮ್ಮ ಪಕ್ಷಕ್ಕೇ ಮತ ಹಾಕಿ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಬ್ಬ ಮತದಾರನೂ ಮತಗಟ್ಟೆಗೆ ಬಂದು ಮತ ಹಾಕಿದರೆ ಬದಲಾವಣೆ ತರಲು ಸಾಧ್ಯ. ಮತದಾರರು ತಮಗೆ ಇಷ್ಟವಾದವರನ್ನು ಆಯ್ಕೆ ಮಾಡಬಹುದು' ಎಂದರು. [ಚುನಾವಣಾ ಸಮೀಕ್ಷೆ ಏನು ಹೇಳುತ್ತೆ?]

'ಬೆಂಗಳೂರು ಇಂದು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಬಿಬಿಎಂಪಿ ಚುನಾವಣೆ ಮೂಲಕ ಇದು ರಾಷ್ಟ್ರದ ಗಮನ ಸೆಳೆಯುತ್ತಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಒದಗಿಸಿಕೊಡಲು ಉತ್ತಮರನ್ನು ಆಯ್ಕೆ ಮಾಡಿ' ಎಂದು ವೆಂಕಯ್ಯ ನಾಯ್ಡು ಕರೆ ನೀಡಿದರು.

ಬಿಜೆಪಿಗೆ ಅಧಿಕಾರ ಖಚಿತ : '2015ರ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಲಿದ್ದು, 2ನೇ ಬಾರಿಗೆ ಪಾಲಿಕೆಯಲ್ಲಿ ಅಧಿಕಾರ ನಡೆಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬೆಂಗಳೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದ್ದರಿಂದ ನಗರದ ಜನರು ಬಿಜೆಪಿ ಬೆಂಬಲಿಸಲಿದ್ದಾರೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+