ಬಿಬಿಎಂಪಿ ಚುನಾವಣೆ: ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ
ಬೆಂಗಳೂರು, ಆಗಸ್ಟ್ 23: ಬಿಬಿಎಂಪಿ ಚುನಾವಣೆಯ ಮತದಾನ ಮುಕ್ತಾಯಗೊಂಡು ಫಲಿತಾಂಶ ಎದುರು ನೋಡುವ ಕಾಲ ಬಂದಿದೆ. ಶೇಕಡಾವಾರು ಮತದಾನದ ಬಗ್ಗೆ ಅವರಿವರ ಪ್ರತಿಕ್ರಿಯೆ ನಡುವೆ ನಾಡಿನ ಸಕಲ ಮಾಧ್ಯಮಗಳು ಪ್ರಮುಖ ಪಕ್ಷಗಳ ಭವಿಷ್ಯದ ಬಗ್ಗೆ ನೀಡಿದ ಸಮೀಕ್ಷಾ ವರದಿ ಕುತೂಹಲಕಾರಿಯಾಗಿದೆ. ಟಿವಿ ಸುದ್ದಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಸಂಗ್ರಹ ಇಲ್ಲಿದೆ.
ಬಹುತೇಕ ಎಲ್ಲಾ ಮಾಧ್ಯಮಗಳ ಸಮೀಕ್ಷೆ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನತೆ ಮೇಲೆ ತನ್ನ ಪ್ರಭಾವ ಬೀರಿದ್ದು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಗದ್ದುಗೆ ಏರುವ ಕನಸು ಕಾಣಬಹುದಾಗಿದೆ. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ (1೦೦ಕ್ಕಿಂತ ಹೆಚ್ಚು) ಪಡೆದರೂ ಬಹುಮತ ಸಾಬೀತುಪಡಿಸಲು ಬೇಕಾದ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಲಿದೆ.
ಬಿಜೆಪಿ ಹಾಗೂ ಜೆಡಿಎಸ್ ನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಬಿಜೆಪಿ ಹಾಗೂ ಜೆಡಿಎಸ್ ಪ್ಲಸ್ ಪಕ್ಷೇತರರು ಕೂಡಿಕೊಂಡರೂ ಮ್ಯಾಜಿಕ್ ಸಂಖ್ಯೆ ದಾಟಲು ಕಷ್ಟ ಕಷ್ಟ.[ವಿಜಯವಾಣಿ- ಈಟಿವಿ ಸಮೀಕ್ಷೆ: ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!]
ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲರ ಭವಿಷ್ಯ ಆಗಸ್ಟ್ 25ರಂದು ತಿಳಿಯಲಿದೆ.
ಟಿವಿ ಸುದ್ದಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಸಂಗ್ರಹ ಮುಂದಿದೆ. ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿಕಾರ ಸ್ಥಾಪಿಸಲು ಬೇಕಾಗಿರುವ ಅಂಕಿ ಸಂಖ್ಯೆ ವಿವರ ಕೂಡಾ ಇದೆ ನೋಡಿ...

100 ಸ್ಥಾನ ದಾಟಿದರೂ ಚಾನ್ಸ್ ಇದೆ
ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕು. ಸದ್ಯದ ಪರಿಸ್ಥಿತಿಯಲ್ಲಿ 100 ಸ್ಥಾನ ಪಡೆದರೂ ಕನಸು ಕಾಣಲು ಸಾಧ್ಯವಿಲ್ಲ. ಈ 198 ವಾರ್ಡ್‌ಗಳ ಜತೆಗೆ, 61 ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿ ಒಟ್ಟು 259 ಸದಸ್ಯ ಬಲದ ಪಾಲಿಕೆಯಲ್ಲಿ ಯಾರೇ ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು.

ಕಾಂಗ್ರೆಸ್ ಗೆ ಗೆಲುವು ಅನಿವಾರ್ಯವಾಗಿದೆ
ಅದಕ್ಕಾಗಿ ಕಾಂಗ್ರೆಸ್ 104 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. 28 ಶಾಸಕರು, ಸಂಸದರ ಬಲ ಹೊಂದಿರುವ ಬಿಜೆಪಿಗೆ 102 ಸ್ಥಾನ ಗೆಲ್ಲಬೇಕು. ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು.ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಗದ್ದುಗೆ ಅವಕಾಶ ಕಾಂಗ್ರೆಸ್ಗೆ ಸಿಗುವ ನಿರೀಕ್ಷೆಯಿದೆ.

ಬಿಜೆಪಿ ಲೆಕ್ಕಾಚಾರ ಹೀಗಿದೆ
ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿದರೆ ಮ್ಯಾಜಿಕ್ ನಂಬರ್ ದಾಟಬಹುದು. ಒಂದು ವೇಳೆ ಬಿಜೆಪಿ 75ಕ್ಕಿಂತ ಕಡಿಮೆ ಬಂದರೆ ಬಿಜೆಪಿ ಬಿಬಿಎಂಪಿಯಲ್ಲಿ ಈ ಬಾರಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕಳೆದ ಬಾರಿ 111 ಸ್ಥಾನ ಗಳಿಸಿತ್ತು. ಜೆಡಿಎಸ್ 15 ಸ್ಥಾನ ಪಡೆದಿತ್ತು.

ಟಿವಿ9-ಸಿ ವೋಟರ್ ಸಮೀಕ್ಷೆ
ಕಾಂಗ್ರೆಸ್- 90 ರಿಂದ 98 ಸ್ಥಾನ
ಬಿಜೆಪಿ - 83ರಿಂದ 91
ಜೆಡಿಎಸ್- 9ರಿಂದ 17
ಇತರೆ- 0-8

ಪಬ್ಲಿಕ್ ಟೀವಿ
ಕಾಂಗ್ರೆಸ್- 85 ರಿಂದ 95
ಬಿಜೆಪಿ- 80 ರಿಂದ 90
ಜೆಡಿಎಸ್- 15 ರಿಂದ 17
ಚುನಾವಣಾ ಪೂರ್ವ ಸಮೀಕ್ಷೆ
* ಬಿಜೆಪಿ - 80 ರಿಂದ 90 * ಕಾಂಗ್ರೆಸ್ 85 ರಿಂದ 95 * ಜೆಡಿಎಸ್ 12 ರಿಂದ 17 * ಇತರರು 01 ರಿಂದ 05

ಬಿ ಟಿವಿ ಸಮೀಕ್ಷೆ
ಕಾಂಗ್ರೆಸ್- 82 ರಿಂದ 90
ಬಿಜೆಪಿ-75 ರಿಂದ 84
ಜೆಡಿಎಸ್- 10 ರಿಂದ 16
ಇತರೆ- 5 ರಿಂದ 6

ಪ್ರಜಾ ಟಿವಿ
ಕಾಂಗ್ರೆಸ್- 95 ರಿಂದ 107
ಬಿಜೆಪಿ- 76 ರಿಂದ 84
ಜೆಡಿಎಸ್- 14 ರಿಂದ 18
ಇತರೆ- 5












Click it and Unblock the Notifications