ಬಸವನಗುಡಿಯಲ್ಲಿ ಬಿಬಿಎಂಪಿಯ ಮೊದಲ ಇ ಟಾಯ್ಲೆಟ್
ಬೆಂಗಳೂರು,
ಜು.15: ನಗರದಲ್ಲಿ ಬಿಬಿಎಂಪಿ'ಇ-ಶೌಚಾಲಯ' ನಿರ್ಮಿಸುತ್ತಿದ್ದು ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.ಆರಂಭಿಕ ಹಂತದಲ್ಲಿ ನಗರದ ಬಸವನಗುಡಿಯ ಕೃಷ್ಣರಾವ್ ಪಾರ್ಕ್‌ನಲ್ಲಿ ಇ-ಶೌಚಾಲಯ ಜೋಡಣೆ ಕಾರ್ಯ ಆರಂಭವಾಗಿದೆ.[ style="font-size: 12px;" href="/news/bangalore/modern-public-toilets-in-bangalore-soon-079079.html" target="_blank">ಬೆಂಗಳೂರಿನಲ್ಲಿ ಇ-ಶೌಚಾಲಯ ಸ್ಥಾಪಿಸಲಿದೆ ಬಿಬಿಎಂಪಿ] id="toptextpromo"> id='are-slot-1' class='oiad oi-axt oiadv'>ಇರಾಮ್
ವೈಜ್ಞಾನಿಕ ಇ- ಟಾಯ್ಲೆಟ್ ಕಂಪನಿಯ ಜೊತೆಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದ್ದು, ಮೊದಲಿಗೆ ನಗರದ 100 ಸ್ಥಳಗಳಲ್ಲಿ ಇ ಶೌಚಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ. ಬಳಿಕ ಎಲ್ಲಾ 198 ವಾರ್ಡ್‌ಗಳ ಪ್ರಮುಖ ರಸ್ತೆ, ಉದ್ಯಾನ, ಬಸ್ ತಂಗುದಾಣ, ಜನಸಂದಣಿ ಇರುವ ಪ್ರದೇಶಗಳಲ್ಲಿ ನಿರ್ಮಾಣ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.[ href="/news/bangalore/ananth-kumar-mayor-sathyanarayan-visits-krishna-rao-park-085735-pg1.html" target="_blank">ಕೃಷ್ಣರಾವ್ ಪಾರ್ಕ್ ಅಭಿವೃದ್ಧಿಗೆ ಕ್ರಮ: ಅನಂತಕುಮಾರ್] id='are-slot-2' class='oiad oi-axt oiadv'>
45 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ
ಇ- ಶೌಚಾಲಯವನ್ನು 45 ಚದರ ಅಡಿ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಬಹುದು. ಶೌಚಾಲಯದ ವ್ಯವಸ್ಥೆಗಳೆಲ್ಲಾ ಯಾಂತ್ರೀಕೃತವಾಗಿ ನಡೆಯಲಿದೆ. ಒಂದು ರೂ. ನಾಣ್ಯ ಹಾಕಿದರೆ ಬಾಗಿಲು ತೆರೆಯುತ್ತದೆ.

ಸೆನ್ಸರ್ ಶೌಚಾಲಯ:
ಒಳಭಾಗದಲ್ಲಿ ಸೆನ್ಸರ್ ಅಳವಡಿಸಲಾಗಿದ್ದು, ದೀಪ ಹಾಗೂ ಫ್ಯಾನ್ ಯಾಂತ್ರಿಕವಾಗಿ ಚಾಲನೆಯಾಗಲಿದೆ. ಶೌಚಾಲಯ ಬಳಸಿದ ತರುವಾಯ ಸೆನ್ಸರ್ ವ್ಯವಸ್ಥೆ ಮೂಲಕವೇ ನೀರು ಪೂರೈಕೆಯಾಗಲಿದೆ. ನಂತರ ಒಳಗಿನ ಗುಂಡಿ ಒತ್ತಿದರೆ ಬಾಗಿಲು ತೆರೆಯುತ್ತದೆ .

ವಿವರ ನಿಯಂತ್ರಣ ಕೊಠಡಿಗೆ:
ಇ -ಶೌಚಾಲಯದಲ್ಲಿ ಜಿಪಿಎಸ್ ಸೆನ್ಸರ್ ತಂತ್ರಜ್ಞಾನ ಅಳವಡಿಸಲಾಗಿದೆ.ನೀರಿನ ಪ್ರಮಾಣ, ಸಂಗ್ರಹವಾದ ನಾಣ್ಯಗಳ ಸಂಖ್ಯೆ ವಿವರದ ಜತೆಗೆ ಯಾವುದೇ ಹಾನಿ ಸಂಭವಿಸಿದರೂ ತಕ್ಷಣವೇ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಲಿದೆ. ಹಾಗೆಯೇ ಬಳಕೆದಾರರು ದೂರು ದಾಖಲಿಸಲು ಧ್ವನಿಮುದ್ರಿತ ವ್ಯವಸ್ಥೆ ಇರಲಿದೆ.

ಜಮ್ಮು ಕಾಶ್ಮೀರ, ಕೇರಳದಲ್ಲಿ ಸಕ್ಸಸ್:
ಬಿಬಿಎಂಪಿ 4.50 ಲಕ್ಷ ರೂ ವೆಚ್ಚ ಮಾಡಿ ಒಂದೊಂದು ಟಾಯ್ಲೆಟ್‌ನ್ನು ನಿರ್ಮಿಸುತ್ತಿದೆ. ಸದ್ಯ ಕೇರಳದಲ್ಲಿ 500ಕ್ಕೂ ಅಧಿಕ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ 15 ಇ-ಶೌಚಾಲಯ ಅಳವಡಿಸಲಾಗಿದೆ ಅವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.












Click it and Unblock the Notifications