ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?
ಬೆಂಗಳೂರು, ನವೆಂಬರ್ 21: ಬಿಬಿಎಂಪಿ ಉಪಮೇಯರ್ ರಮಿಳಾ ಉಮಾಶಂಕರ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಡಿಸೆಂಬರ್ 7 ರಂದು ಚುನಾವಣೆ ನಡೆಯು ಸಾಧ್ಯತೆ ಇದೆ. ಜೊತೆಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯೂ ನಡೆಯಲಿದೆ.
ಬಿಬಿಎಂಪಿ ಉಪಮೇಯರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್‌ನ ರಮಿಳಾ ಉಮಾಶಂಕರ್ ಅವರು ಉಪಮೇಯರ್ ಆದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂದಿನಿಂದ ಉಪಮೇಯರ್ ಸ್ಥಾನ ಖಾಲಿ ಇತ್ತು.
12 ಸ್ಥಾಯಿ ಸಮಿತಿಗಳಿಗೆ ತಲಾ 11 ರಂತೆ ಸದಸ್ಯರನ್ನು ಸಹ ಆಯ್ಕೆ ಮಾಡಬೇಕಿದ್ದು, ಅದನ್ನೂ ಸಹ ಉಪಮೇಯರ್ ಆಯ್ಕೆ ಜೊತೆಯಾಗಿಯೇ ಮಾಡಲು ಆಯುಕ್ತರು ಯೋಜಿಸಿದ್ದಾರೆ. ಉಪಮೇಯರ್ ಆಯ್ಕೆಯು ನವೆಂಬರ್‌ನಲ್ಲೇ ನಡೆಯಬೇಕಿತ್ತು. ಆದರೆ ಸಚಿವ ಅನಂತ್‌ಕುಮಾರ್ ನಿಧನ ಹಾಗೂ ಉಗ್ರಪ್ಪ ಸಂಸದರಾಗಿ ಆಯ್ಕೆ ಆದ ಕಾರಣ ಮತದಾರರ ಪಟ್ಟಿ ಪರಿಷ್ಟರಣೆಗೆ ಮನವಿ ಮಾಡಲಾಗಿತ್ತು. ಪಟ್ಟಿ ಪರಿಷ್ಕರಣೆ ಆಗಿ ಬಂದಿದ್ದು ಕೆಲವೇ ದಿನಗಳಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ.

ಜೆಡಿಎಸ್‌ಗೆ ಉಪಮೇಯರ್, ಕೈಗೆ ಮೇಯರ್
ಮೇಯರ್-ಉಪಮೇಯರ್ ಆಯ್ಕೆ ಸಂದರ್ಭ ಕಾಂಗ್ರೆಸ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಮೇಯರ್ ಸ್ಥಾನ ಜೆಡಿಎಸ್‌ನರಮಿಳಾ ಉಮಾಶಂಕರ್ ಅವರಿಗೆ ಉಪಮೇಯರ್ ಸ್ಥಾನ ಒಲಿದಿತ್ತು. ಈಗಲೂ ಸಹ ಉಪಮೇಯರ್ ಸ್ಥಾನ ಜೆಡಿಎಸ್ ಬಳಿಯೇ ಇರಲಿದೆ. ಆದರೆ ಈ ಬಾರಿ ಪಕ್ಷೇತರರು ತಮಗೆ ಉಪಮೇಯರ್ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಪಕ್ಷೇತರರಿಂದ ಬೇಡಿಕೆ
ತಮ್ಮ ಬೆಂಬಲದಿಂದಲೇ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿದೆ. ಹಾಗಾಗಿ ಉಪಮೇಯರ್ ಸ್ಥಾನವನ್ನು ನಮ್ಮಲ್ಲಿ ಒಬ್ಬರಿಗೆ ನೀಡಬೇಕು ಎಂದು ಪಕ್ಷೇತರರು ಒತ್ತಾಯ ಮಾಡುತ್ತಿದ್ದಾರೆ. ಒಟ್ಟು ಏಳು ಜನ ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿದ್ದಾರೆ.

ಮೂರು ಸದಸ್ಯರ ನಡುವೆ ಪೈಪೋಟಿ
ಪಕ್ಷೇತರರ ಈ ಬಿಗಿಪಟ್ಟಿನ ನಡುವೆಯೂ ಉಪಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಸದಸ್ಯರಾದ ನಾಗಪುರ ವಾರ್ಡ್‌ನ ಭದ್ರೇಗೌಡ, ವಿಶ್ವನಾಥ್ ನಾಗೇನಹಳ್ಳಿ ವಾರ್ಡ್‌ನ ರಾಜಶೇಖರ್ ಹಾಗೂ ಪಾಲಿಕೆಯಲ್ಲಿ ಜೆಡಿಎಸ್ ಗುಂಪಿನ ನಾಯಕಿಯಾಗಿರುವ ನೇತ್ರಾ ನಾರಾಯಣ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ವಿಶ್ವನಾಥ, ಬಂಡೆಪ್ಪ ಕಾಶೆಂಪುರ ಪ್ರಭಾವ
ರಮಿಳಾ ಉಮಾಶಂಕರ್ ಅವರು ಉಪಮೇಯರ್ ಆಗುವಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಹಾಗೂ ಸಚಿವ ಬಂಡೆಪ್ಪ ಕಾಶೆಂಪುರ ಅವರ ಕೃಪೆ ಇತ್ತು. ಈ ಬಾರಿ ಸಹ ಉಪಮೇಯರ್ ಆಯ್ಕೆಯಲ್ಲಿ ಅವರು ಪ್ರಭಾವ ಬೀರಲಿದ್ದಾರೆ. ನಾಗೇನಹಳ್ಳಿ ವಾರ್ಡ್‌ನ ರಾಜಶೇಖರ್ ಅವರ ಹೆಸರು ಉಪಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.
-
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ












Click it and Unblock the Notifications