• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ; ಬೆಂಗಳೂರಿನಲ್ಲಿ ತಾತ್ಕಾಲಿಕ ನಿರಾಶ್ರಿತ ಕೇಂದ್ರ ಸ್ಥಾಪನೆ

|

ಬೆಂಗಳೂರು, ಮಾರ್ಚ್ 30; ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುಲು ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ನಗರದಲ್ಲರುವ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ಇಂದಿರಾ ಕ್ಯಾಂಟೀನ್ ಹಾಗೂ ಸ್ವಯಂ ಸೇವಾ ಸಂಘಗಳಿಂದ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಕೊರೊನಾ; ಬಿಬಿಎಂಪಿ ವತಿಯಿಂದ ನಿರ್ಗತಿಕರಿಗೆ ದಿನಸಿ, ಸ್ಯಾನಿಟೈಸರ್

ಸರ್ಕಾರವು ಆಹಾರ ಸಹಾಯವಾಣಿ 155214 ತೆರದಿದ್ದು, ಅದಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಎಲ್ಲಾ 8 ವಲಯಗಳ ಜಂಟಿ ಆಯುಕ್ತರು ರವರುಗಳಿಗೆ ತುರ್ತಾಗಿ ಊಟ ಮತ್ತು ಇನ್ನಿತರೆ ತುರ್ತು ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಪ್ರತಿ ವಲಯಕ್ಕೆ ತಲಾ 10 ಲಕ್ಷ ರೂಪಾಯಿಯನ್ನು ಉಪ ನಿಯಂತ್ರಕರರಿಗೆ ಬಿಡುಗಡೆ ಮಾಡಲಾಗಿದೆ.

ತಾತ್ಕಾಲಿಕ ನಿರಾಶ್ರಿತ ಕೇಂದ್ರ ಸ್ಥಾಪನೆ;

ಕೊರೋನಾ ವೈರಸ್ ಸೊಂಕು ಹಿನ್ನೆಲೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ನಗರದಲ್ಲಿ ನೆಲೆಸಿರುವ ದಿನಗೂಲಿ ಕಾರ್ಮಿಕರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಗಾಂಧಿನಗರದ ಕಾನಿಷ್ಕ ಹೋಟೆಲ್ ಬಳಿ ಇರುವ ಪಾಲಿಕೆ ಪ್ರೌಢಶಾಲೆಯನ್ನು ತಾತ್ಕಾಲಿಕವಾಗಿ ನಿರಾಶ್ರಿತ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

60 ಮಂದಿಯನ್ನು ಗುರುತಿಸಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಇಂದಿರಾ ಕ್ಯಾಂಟೀನ್ ನಿಂದ ಆಹಾರದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ.

English summary
BBMP Creates Shelters In Bengaluru For Coronavirus Hits People, also supplying free food supply
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X