• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ 16 ಐಎಎಸ್ ಅಧಿಕಾರಿಗಳ ವರ್ಗಾವಣೆ

|

ಬೆಂಗಳೂರು, ಮಾರ್ಚ್ 31: ಬಿಬಿಎಂಪಿ ಆಯುಕ್ತ ಮಂಜುನಾಥ್ ಸೇರಿದಂತೆ ಹದಿನಾರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಆಗಿದ್ದ ಗೌರವ್ ಗುಪ್ತಾ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ.

ರಾಜ್ಯ ಸರ್ಕಾರ ಬುಧವಾರ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜೊತೆಗೆ ಬಿಬಿಎಂಪಿಯ ಎಂಟು ವಲಯಗಳಿಗೆ ವಿಶೇಷ ಆಯುಕ್ತರನ್ನು ನೇಮಕ ಮಾಡಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳ ವಿವರ ಇಲ್ಲಿದೆ...

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ

ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ- ರಾಜೀವ್ ಚಾವ್ಲಾ

ಬಿಬಿಎಂಪಿ ಆಡಳಿತಾಧಿಕಾರಿ- ರಾಕೇಶ್ ಸಿಂಗ್

ಬಿಬಿಎಂಪಿ ಆಯುಕ್ತ- ಗೌರವ್ ಗುಪ್ತಾ

ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ- ಜಿ. ಕುಮಾರ್ ನಾಯ್ಕ್

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ- ಕಪಿಲ್ ಮೋಹನ್

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ- ಎನ್.ಮಂಜುನಾಥ್ ಪ್ರಸಾದ್

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ -ಪಂಕಜ್ ಕುಮಾರ್ ಪಾಂಡೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಸರ್ಕಾರದ ಕಾರ್ಯದರ್ಶಿ-ವಿ ಪೊನ್ನುರಾಜ್

ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ- ಸಿಂಧೂ ಬಿ ರೂಪೇಶ್

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕಿ -ಎಸ್. ಹೊನ್ನಾಂಬ

ಸಕಾಲ ಮಿಷನ್ ಹೆಚ್ಚುವರಿ ಯೋಜನಾ ನಿರ್ದೇಶಕಿ- ಡಾ.ಬಿ.ಆರ್. ಮಮತಾ

ಕರ್ನಾಟಕ ಸಾರ್ವಜನಿಕ ಭೂ ನಿಗಮನದ ವ್ಯವಸ್ಥಾಪಕ ನಿರ್ದೇಶಕ-ಡಾ.ಎಚ್.ಎನ್. ಗೋಪಾಲಕೃಷ್ಣ

ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ- ಜಿ.ಎಂ. ಗಂಗಾಧರಸ್ವಾಮಿ

ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಕೆ. ವಿದ್ಯಾಕುಮಾರಿ

ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕಿ- ಜಯವಿಭವಸ್ಬಾಮಿ

ಬಿಬಿಎಂಪಿ ಎಂಟು ವಲಯಗಳಿಗೆ ನಿಯೋಜನೆ

   ''ಆಪರೇಶನ್‌ ಕಮಲ'ದ ಬಗ್ಗೆ ಸಮಗ್ರ ತನಿಖೆಯಾಗಲಿ,' ಸರಣಿ ಟ್ವೀಟ್ ಮೂಲಕ ಸಿಎಂ | Oneindia Kannada
   • ಪೂರ್ವ ವಲಯ-ಮನೋಜ್ ಜೈನ್
   • ಪ‍ಶ್ಚಿಮ ವಲಯ- ಬಸವರಾಜ್ ಎಸ್
   • ದಕ್ಷಿಣ-ತುಳಸಿ ಮದ್ದಿನೇನಿ
   • ದಾಸರಹಳ್ಳಿ- ರವೀಂದ್ರ ಎಸ್.ಜಿ
   • ರಾಜರಾಜೇಶ್ವರಿ ನಗರ-ಬಿ.ರೆಡ್ಡಿ ಶಂಕರಬಾಬು
   • ಬೊಮ್ಮನಹಳ್ಳಿ- ರಾಜೇಂದ್ರ ಚೋಳನ್
   • ಮಹದೇವಪುರ ಹಾಗೂ ಯಲಹಂಕ- ರಂದೀಪ್ ಡಿ

   ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

   English summary
   The state government on Wednesday ordered the transfer of BBMP Commissioner Manjunath Prasad as Secretary to Revenue Department
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X