ಕೋವಿಡ್ ನಿಯಂತ್ರಣಕ್ಕೆ ಕೊಳಚೆ ನೀರು ಪರೀಕ್ಷಿಸಲು ಮುಂದಾದ ಬಿಬಿಎಂಪಿ
ಬೆಂಗಳೂರು, ಮೇ 7: ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಕೋವಿಡ್ 4ನೇ ಹೊಸ ತಳಿ ಪತ್ತೆಗೆ ಮತ್ತು ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಹೊಸ ಪ್ಲ್ಯಾನ್ ಮಾಡಿವೆ. ದೇಶದಲ್ಲಿ ಮಹಾಮಾರಿ ಕೊರೋನಾ ನಾಲ್ಕನೇ ಅಲೆಯ ಭೀತಿ ಹೆಚ್ಚುತ್ತಿರುವ ಹಿನ್ನೆಲೆ, ಬೆಂಗಳೂರಿನಲ್ಲಿರುವ ಸೂಕ್ಷ್ಮ ಕೊಳಚೆ ಪ್ರದೆಶಗಳನ್ನ ಗುರುತಿಸಿ ಕೊಳಚೆ ನೀರು ಪರೀಕ್ಷೆ ಮಾಡಲು ಮುಂದಾಗಿವೆ.
"ಕೋವಿಡ್ 2ನೇ ಅಲೆ ಸಮಯದಲ್ಲಿ ಇದೇ ಮಾದರಿಯನ್ನ ದಕ್ಷಿಣ ಆಫ್ರಿಕಾದಲ್ಲಿ ಅಳವಡಿಸಿಕೊಂಡು ಕೊಳಚೆ ನೀರನ್ನು ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದೇ ಮಾದರಿಯನ್ನು ಇಲ್ಲೂ ಅನುಸರಿಸಲಾಗುವುದು. ಈ ಮೂಲಕ ಮೂಲಕ ರೂಪಾತರಿ ವೈರಸ್ ಪತ್ತೆ ಮಾಡುವುದಾಗಿ,'' ಬಿಬಿಎಂಪಿ ಆರೋಗ್ಯಾಧಿಕಾರಿ ಬಾಲ ಸುಂದರ್ ತಿಳಿಸಿದರು.

15 ದಿನಗಳ ಹಿಂದೆಯೇ ಸೂಕ್ಷ್ಮ ಕೊಳಚೆ ಪ್ರದೇಶಗಳನ್ನ ಗುರುತಿಸಿ ಪರೀಕ್ಷೆ ಮಾಡಿದ ಬಳಿಕ ಹೆಚ್ಚು ಜನರಿಗೆ ಹರಡಬಹುದಾದ ಕೋವಿಡ್ ತಡೆಯಲಾಗಿತ್ತು. ಬೆಂಗಳೂರಿನಲ್ಲಿ ನಾಲ್ಕನೇ ಅಲೆ ಹರಡುವುದನ್ನ ತಡೆಗೆ ಪಾಲಿಕೆ ವ್ಯಾಪ್ತಿಗಿ ಬರುವ 34 ಕೊಳಚೆ ನೀರು ಶುದ್ಧೀಕರಣ ಘಟಕಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆ ನಡೆಸುವುದರಿಂದ ಹೆಚ್ಚು ಹೆಚ್ಚಿನ ಜನರಿಗೆ ನಾಲ್ಕನೇ ಅಲೆ ಹರಡುವ ಮುನ್ನವೇ ರೂಪಾಂತರಿ ವೈರಸ್ ತಡೆಗಟ್ಟಲು ಸಹಕಾರಿಗುತ್ತದೆ ಎಂದು ಬಾಲಸಂದರ್ ವಿವರಿಸಿದರು.

ಬೊಮ್ಮನಹಳ್ಳಿ, ಮಹದೇವಪುರ, ಪೂರ್ವ ವಲಯಗಳಲ್ಲಿ ಪರೀಕ್ಷೆ..!
ಬೊಮ್ಮನಹಳ್ಳಿ, ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಬರುವ ಕೊಳಚೆ ನೀರು ಪ್ರದೇಶಗಳಲ್ಲಿ ಮೊದಲು ಈ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ಶೇ.70 ರಷ್ಟು ಒಮಿಕ್ರಾನ್, ಶೇ.30 ರಷ್ಟು ಹಳೇ ಕೋವಿಡ್ ಡೆಲ್ಟಾ ಮಾದರಿ ಈ ಪರೀಕ್ಷೆಯಿಂದ ಪತ್ತೆಯಾಗಿತ್ತು. ಸದ್ಯ ಬೆಂಗಳೂರಿನಲ್ಲಿ ನಾಲ್ಕನೇ ಭೀತಿ ಹರಡುವ ಭೀತಿ ಹಿನ್ನೆಲೆ 15 ದಿನಗಳಿಗೆ ಒಮ್ಮೆ ನಡೆಸಲಾಗುತ್ತಿದ್ದ ಈ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನ 7 ದಿನಗಳಿಗೊಮ್ಮೆ ನಡೆಸಲು ಮುಂದಾಗಿದೆ.












Click it and Unblock the Notifications