• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಾಫಿಕ್ ಪೊಲೀಸರಿಗೇ ಡೋಂಟ್‌ ಕೇರ್‌ ಅಂತಿವೆ ಪಾಲಿಕೆ, ಜಲಮಂಡಳಿ

By Nayana
|

ಬೆಂಗಳೂರು, ಆಗಸ್ಟ್ 9: ಟ್ರಾಫಿಕ್‌ ಪೊಲೀಸರ ಟ್ವೀಟ್‌ ಅಥವಾ ಮನವಿಗೆ ಬೆಲೆ ಇಲ್ಲದಿರುವಾಗ ಇನ್ನು ಜನಸಾಮಾನ್ಯರ ಗತಿ ಏನು ಎಂಬುದರ ಕುರಿತು ಆಲೋಚಿಸಲೇ ಬೇಕು.

ಸ್ವಲ್ಪ ಟ್ರಾಫಿಕ್‌ ಉಂಟಾದರೂ ಟ್ರಾಫಿಕ್‌ ಪೊಲೀಸರನ್ನೇ ದೂರುತ್ತೇವೆ ಆದರೆ ಕಾರಣಗಳನ್ನು ಅರಿತುಕೊಳ್ಳಬೇಕಿದೆ.ಆದರೆ ಟ್ರಾಫಿಕ್‌ ಪೊಲೀಸರ ಕೈಯಲ್ಲಿ ಪರಿಹರಿಸಲಾಗದ ಅಂಶಗಳು ಸಾಕಷ್ಟಿವೆ. ಒಳಚರಂಡಿ ಏಕಾಏಕಿ ಓಪನ್‌ ಆಗುವುದು, ರಸ್ತೆಗುಂಡಿಗಳು, ರಸ್ತೆ ಕುಸಿಯುವುದು, ಪೈಪ್‌ ಒಡೆದು ರಸ್ತೆ ಮೇಲೆ ನೀರು ನಿಲ್ಲುವುದು ಇದೆಲ್ಲವೂ ಟ್ರಾಫಿಕ್‌ ಪೋಲೀಸರಿಂದ ಉಂಟಾಗುವ ಸಮಸ್ಯೆಯಲ್ಲ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಈ ರೀತಿಯ ಸಮಸ್ಯೆಗಳು ಸೃಷ್ಟಿಯಾದರೆ ಅದರಿಂದ ಆಗುವ ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಟ್ರಾಫಿಕ್‌ ಪೊಲೀಸರು ದೌಡಾಯಿಸಬೇಕು. ಇಂತಹ ತೊಂದರೆಗಳ ಕುರಿತು ಜಲಮಂಡಳಿ ಹಾಗೂ ಬಿಬಿಎಂಪಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಅವರಿಗೆ ಕ್ಯಾರೇ ಅನ್ನುತ್ತಿಲ್ಲ.

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರಿಗೆ ತೊಂದರೆಯಾಗದಿರುವಂತೆ ನೋಡಿಕೊಳ್ಳಲು ತಾವೇ ಸ್ವತಃ ರಸ್ತೆಗುಂಡಿಗಳನ್ನು ಮುಚ್ಚುವುದು, ರಿಪೇರಿ ಕೆಲಸ ಇನ್ನಿತರೆ ಕೆಲಸಗಳನ್ನು ಮಾಡುತ್ತಿದ್ದಾರೆ.

ದೊಮ್ಮಲೂರು ಫ್ಲೈಓವರ್‌ ಮೇಲೆ ಗುಂಡಿ

ದೊಮ್ಮಲೂರು ಫ್ಲೈ ಓವರ್‌ ಅಪ್‌ ರಾಂಪ್‌ ಜಾಯಿಂಟ್‌ ಸೇರಿದಂತೆ ವಿವಿಧೆಡೆ ಗುಂಡಿಗಳು ಇರುವ ಕುರಿತು ಹಲಸೂರು ಟ್ರಾಫಿಕ್‌ ಪೊಲೀಸರು ಫೋಟೊ ಸಹಿತ ಆ.3ರಂದು ಟ್ವೀಟ್‌ ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 ಸಿವಿಕ್‌ ಸಮಸ್ಯೆ ಉಂಟಾದರೂ ಟ್ರಾಫಿಕ್‌ ಪೊಲೀಸರೇ ಬರಬೇಕು

ಸಿವಿಕ್‌ ಸಮಸ್ಯೆ ಉಂಟಾದರೂ ಟ್ರಾಫಿಕ್‌ ಪೊಲೀಸರೇ ಬರಬೇಕು

ವಾಹನಕ್ಕೆ ಸಂಬಂಧಿಸಿದಂತೆ ಏನೇ ತೊಂದರೆ ಉಂಟಾದರೂ ಟ್ರಾಫಿಕ್‌ ಪೊಲೀಸರನ್ನು ಕರೆಯುವುದು ಸಾಮಾನ್ಯ ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆ ಗುಂಡಿ ಬಿದ್ದರೂ, ಚರಂಡಿ ನೀರು ತುಂಬಿ ಹರಿದರೂ ಅದಕ್ಕೆ ಪೊಲೀಸರೇ ಬೇಕಾಗುತ್ತಾರೆ.

 ಎಂಜಿನಿಯರ್‌ಗಳು ಟ್ವಿಟ್ಟರ್‌ ಬಳಸುವಂತೆ ಮನವಿ

ಎಂಜಿನಿಯರ್‌ಗಳು ಟ್ವಿಟ್ಟರ್‌ ಬಳಸುವಂತೆ ಮನವಿ

ರಸ್ತೆ ಗುಂಡಿಗಳು, ನೀರಿನ ಪೈಪ್‌ ಒಡೆದಿರುವುದು ಇನ್ನಿತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಪರಿಹಾರ ಒದಗಿಸಲು ಬಿಬಿಎಂಪಿ ಅಥವಾ ಜಲಮಂಡಳಿ ಅಧಿಕಾರಿಗಳಿಗೆ ಸಾಧ್ಯವಾಗದೇ ಇರಬಹುದು. ಆದರೆ ಎಂಜಿನಿಯರ್‌ಗಳು ಟ್ವಿಟ್ಟರ್‌ ಖಾತೆಗಳನ್ನು ಬಳಸಿದರೆ ಖಂಡಿತವಾಗಿ ಸರಿಯಾದ ಸಮಯಕ್ಕೆ ಮಾಹಿತಿ ಪಡೆದು ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 ಬಿಬಿಎಂಪಿ ಹಾಗೂ ಜಲಮಂಡಳಿಯಿಂದ ನಿರ್ಲಕ್ಷ್ಯ

ಬಿಬಿಎಂಪಿ ಹಾಗೂ ಜಲಮಂಡಳಿಯಿಂದ ನಿರ್ಲಕ್ಷ್ಯ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎಲ್ಲಾ ಇಲಾಖೆ ಅಧಿಕಾರಿಗಳು, ಎಂನಿಜಿಯರ್‌ಗಳು, ಸಾಮಾನ್ಯ ಜನರೂ ಸೇರಿದಂತೆ ಟ್ವಿಟ್ಟರ್‌ ಬಳಕೆ ಮಾಡುತ್ತಿದ್ದಾರೆ. ಇಂಹ ಪ್ರಮುಖ ನಗರಗಳಲ್ಲಿ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಬೇಕಾದರೆ ಜಲಮಂಡಳಿ, ಬಿಬಿಎಂಪಿ ಇನ್ನು ಕೆಲವು ಸ್ಥಳೀಯ ಸಂಸ್ಥೆಗಳು ಟ್ವಿಟ್ಟರ್‌ ಖಾತೆಯನ್ನು ಕಡ್ಡಾಯವಾಗಿ ಹೊಂದಿದರೆ ಸರಿಯಾದ ಸಮಯಕ್ಕೆ ನಾಗರಿಕರ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.

 ಫೋಟೊ, ವಿಳಾಸ ಸಹಿತ ಸಮಸ್ಯೆ ವಿವರಣೆ

ಫೋಟೊ, ವಿಳಾಸ ಸಹಿತ ಸಮಸ್ಯೆ ವಿವರಣೆ

ಸೋನಿ ಜಂಕ್ಷನ್‌ನ 100 ಅಡಿ ರಸ್ತೆ ವಾವ್‌ ಮೋಮೋ ಬಳಿ ಒಳಚರಂಡಿ ಪೈಪ್‌ನಿಂದ ಹೊರ ಬರುತ್ತಿರುವ ನೀರು ರಸ್ತೆಯಲ್ಲಿ ನಿಂತು ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಅದನ್ನು ಸರಿಪಡಿಸುವಂತೆ ಜಲಮಂಡಳಿ ಅಧ್ಯಕ್ಷರ ಖಾತೆಗೆ ಆಗಸ್ಟ್ 4ರಂದು ದೂರು ನೀಡಲಾಗಿತ್ತು. ಆದರೆ ಮೂರು ದಿನಗಳ ಬಳಿಕ ಆಗಸ್ಟ್ 7 ರಂದು ಬೆಳಗ್ಗೆ ಜಲಮಂಡಳಿಯಿಂದ ಉತ್ತರ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
The common phenomenon of police that they will not accept any complaint immediately. But here is the story adverse. BBMP and BWSSB not responding to police only about several complaints.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more