ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟಕ್ಕೆ ಸಂಪೂರ್ಣ ನಿರ್ಬಂಧ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂಭ್ರಮಾಚರಣೆ ಹಿನ್ನೆಲೆ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪಾಲಿಕೆ ಸೋಮವಾರ ಆದೇಶ ಹೊರಡಿಸಿದೆ. ರಾಜ್ಯ ಪಶುಸಂಗೋಪನಾ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿಗಳನ್ನು ಕಡಿಯುವುದನ್ನು ಮತ್ತು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಹೇಳಿದೆ. ಅದೇ ನಿಯಮವು ಚಿಲ್ಲರೆ ಅಂಗಡಿಗಳಿಗೂ ಅನ್ವಯಿಸುತ್ತದೆ.

ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಗರದ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಪಶುಸಂಗೋಪನಾ ಇಲಾಖೆಯಿಂದ ಬಿಬಿಎಂಪಿಯು ಈ ಸುತ್ತೋಲೆ ಹೊರಡಿಸಿದೆ.

Breaking: ಬೆಂಗಳೂರಿನಲ್ಲಿ ಎರಡು ದಿನ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧBreaking: ಬೆಂಗಳೂರಿನಲ್ಲಿ ಎರಡು ದಿನ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧ

ಆಗಸ್ಟ್ 31ರಂದು ಗಣೇಶ ಚತುರ್ಥಿ:

ಭಾರತದಲ್ಲಿ ಆಗಸ್ಟ್ 31ರಂದು ಗಣೇಶ ಚತುರ್ಥಿ ಹಬ್ಬದ ಆಚರಣೆಯನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆ ಪವಿತ್ರ ಹಬ್ಬದ ದಿನ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆಗೆ ನಿರ್ಬಂಧವನ್ನು ಹೇರಲಾಗಿದೆ.

BBMP bars sale of meat, animal killing on Ganesha Chaturthi on August 31st

ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ:

ಕರ್ನಾಟಕದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಮಾಂಸದ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಇದರ ನಡುವೆ ಕಳೆದ ಏಪ್ರಿಲ್ ತಿಂಗಳ ರಾಮ ನವಮಿ ಆಚರಣೆ ಸಂದರ್ಭದಲ್ಲೂ ಇದೇ ರೀತಿಯ ಆದೇಶವನ್ನು ಬಿಬಿಎಂಪಿ ಜಾರಿಗೊಳಿಸಿತ್ತು. ಬಸವ ಜಯಂತಿ, ಮಹಾ ಶಿವರಾತ್ರಿ, ಗಾಂಧಿ ಜಯಂತಿ, ಸರ್ವೋದಯ ದಿನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಂತಹ ಹಲವಾರು ಸಂದರ್ಭಗಳಲ್ಲಿ ಇಂತಹ ನಿಯಮಗಳನ್ನು ಬಿಬಿಎಂಪಿ ಘೋಷಿಸುತ್ತಲೇ ಬಂದಿದೆ.

English summary
BBMP issued an order prohibiting animal slaughter and sale of meat amid celebrations for Ganesha Chaturthi on 31st within the BBMP area limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X