Get Updates
Get notified of breaking news, exclusive insights, and must-see stories!

ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು, ಸಾಧನೆ ಸ್ಮರಿಸಿದ ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆಪ್ಟಂಬರ್ 15: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಗ್ರೇಟ್ ವಿಜನರಿ ಆಗಿದ್ದರು. ಭಾರತಕ್ಕೆ ಈಗಲೂ ಅವರ ಅಗತ್ಯ ಇದೆ. ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ಎಫ್ ಕೆಸಿಸಿಐ ವತಿಯಿಂದ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸರ್ ಎಂ.ವಿ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಒಂದು ವಿಶೇಷವಾಗಿರುವ ದೇಶ ಭಾರತದಂತ ದೇಶ ಇನ್ನೊಂದಿಲ್ಲ. ಭಾರತವನ್ನು ಹುಡುಕಲು ಹೋಗಿ ಬೇರೆ ದೇಶ‌ವನ್ನು ಹುಡುಕಿದರು. ಆದರೆ ಇನ್ನೊಂದು ಭಾರತ ಸಿಗಲಿಲ್ಲ ಎಂದು ದೇಶದ ಮಹತ್ವ ಬಗ್ಗೆ ತಿಳಿಸಿದರು.

Basavaraj Bommai remember Sir M Vishweshwaraiah Achievements in FKCCI Program of Bengaluru

ಭಾರತದಲ್ಲಿ ಕರ್ನಾಟಕ ವಿಶೇಷ ಇಡೀ ಭಾರತದಲ್ಲಿ ಕರ್ನಾಟಕದಂತ ರಾಜ್ಯ ಇಲ್ಲ. ನಮ್ಮ ಸಂಸ್ಕೃತಿ ನಮ್ಮ‌ಜನ ಎಲ್ಲರೂ ವಿಶೇಷ. ಇಲ್ಲಿನ ನೀರಿಗೆ, ನೆಲಕ್ಕೆ ಅಷ್ಟೊಂದು ಮಹತ್ವ ಇದೆ. ಕನ್ನಡಿಗರು ಎಲ್ಲಿಯೇ ಹೋದರೂ ಕನ್ನಡದ ಕಂಪು ಹರಡಿ ಸಜ್ಜನಿಕೆಯಿಂದ ಇರುತ್ತಾರೆ. ನಮ್ಮೆಲ್ಲರ ಆದರ್ಶ ಯುಗಪುರುಷ ಗ್ರೇಟ್ ಸನ್ ಆಫ್ ಇಂಡಿಯಾ ವಿಶ್ವೇಶ್ವರಯ್ಯ. ಅವರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿದ್ದೇವೆ ಎಂದರೆ ನಮ್ಮ ಪುಣ್ಯ. ಸರ್ ಎಂ ವಿ ಅವರು ಮ್ಯಾನ್ ಆಪ್ ಹುಮ್ಯಾನಿಟಿ, ಒಳ್ಳೆಯ ಸಾಧಕರು ಎಂದು ಅವರು ಸ್ಮರಿಸಿದರು.

ಯೋಚನೆ ಅನುಷ್ಠಾನಕ್ಕೆ ತರುತ್ತಿದ್ದ ಸರ್‌ಎಂವಿ

ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಯ ನಂತರವೂ ಬದುಕುವುದು ಸಾಧನೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ ಸಾವಿನ ನಂತರವೂ ಇದೆ. ವಿಶ್ವೇಶ್ವರಯ್ಯ ಅವರಿಗೆ ವಿಶ್ಲೇಣಾತ್ಮಕ ಮನಸ್ಸಿತ್ತು ಅದಕ್ಕೆ ಅವರು ಒಬ್ಬ ಒಳ್ಳೆಯ ಎಂಜನೀಯರ್ ಮತ್ತು ವಿಜನರ್ ಆಗಿದ್ದರು. ವಿಶ್ವೇಶ್ವರಯ್ಯ ಏನು ಯೋಚಿಸುತ್ತಿದ್ದರೊ ಅದನ್ನು ಅನುಷ್ಠಾನ ಮಾಡುತ್ತಿದ್ದರು. ವಿಶ್ವೇಶ್ವರಯ್ಯ ವಿಶ್ವಕ್ಕೂ ಮಿಗಿಲಾಗಿ ಬೆಳೆದವರು.

ಹೈದರಾಬಾದ್, ಬಿಹಾರ್ ಮಹಾರಾಷ್ಟ್ರ, ಕರ್ನಾಟಕ ಎಲ್ಲಿ ಹೋದರೂ ವಿಶ್ವೇಶ್ವರಯ್ಯನವರ ಕೆಲಸವನ್ನು ನಾವು ಕಾಣಿಸುತ್ತದೆ. ಅವರು ಜಲಾಶಯ (ಡ್ಯಾಂ) ಕಟ್ಟಿದರು, ಕಾರ್ಖಾನೆಗಳನ್ನು ಕಟ್ಟಿದರು. ಕರ್ನಾಟಕ ವಿಶ್ವೇಶ್ವರಯ್ಯ ಹಾಗೂ ಮೈಸೂರು ಮಹಾರಾಜರಂತ ವಿಜನರಿಗಳಿಂದ ಕರ್ನಾಟಕ ಭಾರತದ ಸಿಲಿಕಾನ್ ವ್ಯಾಲಿ ಎಂದು ಗುರುತಿಸುವಂತೆ ಮಾಡಿದೆ. ಅದರ ಮುಂದುವರೆದ ಭಾಗವೇ ಐಟಿ ಬಿಟಿ ಬೆಳವಣಿಗೆಗೆ ಕಾರಣವಾಯಿತು ಎಂದು ವಿವರಿಸಿದರು.

Basavaraj Bommai remember Sir M Vishweshwaraiah Achievements in FKCCI Program of Bengaluru

ಪ್ರತಿ ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು. ಮಾನವ ಸಮುದಾಯದ ಏಳಿಗೆಗೆ ವಿಶ್ವೇಶ್ವರಯ್ಯ ಅವರ ಅಗತ್ಯ ಇದೆ.

ಭಾರತ ಈಗ ವಿಜನರಿ ನಾಯಕ ನರೇಂದ್ರ ಮೋದಿಯಂತ ನಾಯಕನನ್ನು ಹೊಂದಿದೆ. ಹಣ ಮಾತ್ರದಿಂದಲೇ ಎಲ್ಲವೂ ಆಗುವುದಿಲ್ಲ.

ವಿಜನರಿ (ದೂರದೃಷ್ಠಿ) ನಾಯಕ, ದುಡಿಯುವ ಜನ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಮೊದಲು ದುಡ್ಡೇ ದೊಡ್ಡಪ್ಪ ಅಂತ ಇತ್ತು. ಈಗ ದುಡಿಮೆಯೇ ದೊಡ್ಡಪ್ಪ ಆಗಬೇಕು. ವಿಶ್ವೇಶ್ವರಯ್ಯ ಅವರ ಸಾಧನೆಯ ಒಂದು ಪರ್ಸೆಂಟ್ ಸಾಧನೆ ಮಾಡಿದರೂ ನಾವು ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

ಇದೇ ವೇಳೆ ವೋಲ್ವೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಿ ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಗೆ ಸರ್ ಎಂ.ವಿ ಪ್ರಶಸ್ತಿ ದೊತರೆತಿರುವುದು ಸೂಕ್ತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೋಲ್ವೊ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯಪಾಲರಾದ ಥಾವರ್‌ ಚೆಂದ್ ಗೆಹ್ಲೋಟ್, FKCCI ಅಧ್ಯಕ್ಷ ಬಿ.ವಿ ಗೋಪಾಲರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+