ಮಹಾರಾಷ್ಟ್ರದಿಂದ ಕದ್ದು ಮುಚ್ಚಿ ಬರುವವರು ಹೆಚ್ಚಾಗಿದ್ದಾರೆ- ಬಸವರಾಜ್ ಬೊಮ್ಮಾಯಿ

ಬೆಂಗಳೂರು, ಮೇ 7: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಕೆಲ ದಿನಗಳ ಹಿಂದೆ ಮಾಧ್ಯಮದರಿಗೂ ಸೋಂಕು ಹರಡಿದ್ದು, ಆ ನಂತರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕ್ವಾರಂಟೈನ್‌ನಲ್ಲಿ ಇದ್ದರು.

ಕ್ಚಾರಂಟೈನ್ ಅವಧಿ ಮುಗಿಸಿದ ಬಸವರಾಜ ಬೊಮ್ಮಾಯಿ‌ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗೇಟು ನೀಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು ನಂಜನಗೂಡು ಕಾರ್ಖಾನೆಯಿಂದ ಕೊರೊನಾ ಹಬ್ಬುವಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ.

''ನಂಜನಗೂಡು ಕಾರ್ಖಾನೆಯಿಂದ ಸೋಂಕು ಹೆಚ್ಚಳ ಆಗದಂತೆ ಗೃಹ ಇಲಾಖೆ, ಆರೋಗ್ಯ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಆದರೆ, ಇನ್ನೂ ಮೂಲ ಕಂಡುಹಿಡಿಯಲು ಸಾಧ್ಯವಾಗ್ತಿಲ್ಲ. ಆ ಫ್ಯಾಕ್ಟರಿಯಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ. ಸಂಪೂರ್ಣ ತನಿಖೆ ನಡೆಸಿದಾಗ ಎಲ್ಲವೂ ಹೊರಬೀಳಲಿದೆ.'' ಎಂದಿದ್ದಾರೆ.

Basavaraj Bommai Completed His Quarantine Period

ಇತರ ರಾಜ್ಯಗಳಲ್ಲಿರುವ ಕಾರ್ಮಿಕರು ರಾಜ್ಯಕ್ಕೆ ಬರುತ್ತಿದ್ದು, ಮಹಾರಾಷ್ಟ್ರ ಗಡಿ ಭಾಗದಲ್ಲಿ ತೀವ್ರ ತಪಾಸಣೆಗೆ ಸೂಚನೆ ನೀಡಲಾಗಿದೆಯಂತೆ. ಆದರೆ, ಕದ್ದು ಮುಚ್ಚಿ ಬರುವವರು ಹೆಚ್ಚಿದ್ದಾರೆ. ಖಾಸಗಿ‌ ಟ್ಯಾಕ್ಸಿ, ಇನ್ನಿತರ ವಾಹನಗಳಲ್ಲಿ ಬರುತ್ತಿದ್ದಾರೆ. ಹೀಗಾಗಿ ಬಾರ್ಡರ್‌ನಲ್ಲಿ ತೀವ್ರ ತಪಾಸಣೆಗೆ ಸೂಚಿಸಿದ್ದೇವೆ ಎಂದಿದ್ದಾರೆ.

ಅಲ್ಲದೆ, ಕೆಲವರನ್ನ ಅಲ್ಲೇ ಕ್ವಾರಂಟೈನ್ ಮಾಡೋಕೆ ಸೂಚಿಸಿದ್ದೇವೆ. ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ವಾಸ್ತವ ಇದ್ದರೆ ಆರೋಪ ಮಾಡಲಿ. ಆರೋಪ ಮಾಡಬೇಕು ಅಂತಾನೆ ಮಾಡೋದು ಸರಿಯಲ್ಲ. ಎಂದು ಅಸಮಾಧಾನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+