• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು!

|
Google Oneindia Kannada News

ಬೆಂಗಳೂರು, ನವೆಂಬರ್ 14; ಕರ್ನಾಟಕದ ಸೇರಿದಂತೆ ದೇಶಾದ್ಯಂತ ಬಿಟ್ ಕಾಯಿನ್ ಹಗರಣದ ವಿಚಾರ ಸದ್ದು ಮಾಡುತ್ತಿದೆ. ಈ ವಿಚಾರ ರಾಜಕೀಯ ಆರೋಪಗಳಿಗೆ ವೇದಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮೌನ ಮುರಿದಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿಗಳು, "ಬಿಟ್ ಕಾಯಿನ್ ಹಗರಣದ ಹಿಂದೆ ಯಾರು ಇದ್ದರೂ ಕೂಡಾ ಬಿಡುವುದಿಲ್ಲ, ಖಂಡಿತವಾಗಿಯೂ ಬಲಿ ಹಾಕುತ್ತೇವೆ" ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಹಿಂದೆ ಬಿಟ್ ಕಾಯಿನ್ ಅಕ್ರಮದ ವಾಸನೆ ! ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಹಿಂದೆ ಬಿಟ್ ಕಾಯಿನ್ ಅಕ್ರಮದ ವಾಸನೆ !

"ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. 2016ರಿಂದ ಇದ್ದಿದ್ದರೆ ನಿಮ್ಮ ಸರ್ಕಾರ ಏಕೆ ತನಿಖೆ ಮಾಡಲಿಲ್ಲ" ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

ಬಿಟ್ ಕಾಯಿನ್ ಹಗರಣ; ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಎಸ್‌ವೈ ಪುತ್ರರು ಬಿಟ್ ಕಾಯಿನ್ ಹಗರಣ; ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಎಸ್‌ವೈ ಪುತ್ರರು

"ರಂದೀಪ್ ಸರ್ಜೇವಾಲ ಅವರು ಅಧಿಕಾರದಲ್ಲಿದ್ದಾಗ ಸಚಿವರು, ಮುಖ್ಯಮಂತ್ರಿಗಳಿಗೆ ಪ್ರಶ್ನಿಸಬೇಕಿತ್ತು. 2016ರಲ್ಲಿ ಶ್ರೀಕಿಯನ್ನು ಬಂಧಿಸಿ ಬಿಡುಗಡೆ ಮಾಡಿದಿರಿ. ಅಂದೇ ವಿಚಾರಣೆ ನಡೆಸಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು" ಎಂದು ಪ್ರತಿಕ್ರಿಯೆ ನೀಡಿದರು.

ಬಿಟ್ ಕಾಯಿನ್ ಹಗರಣದ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳುತ್ತೇನೆ: ಡಿಕೆಶಿಬಿಟ್ ಕಾಯಿನ್ ಹಗರಣದ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳುತ್ತೇನೆ: ಡಿಕೆಶಿ

"ಆತ ಬೇಲ್ ತೆಗೆದುಕೊಂಡ ನಂತರ ಸಹ ವಿಚಾರಣೆ ಮಾಡಬಹುದಿತ್ತು. ಆದರೆ ನೀವು ವಿಚಾರಣೆ ಮಾಡಲಿಲ್ಲ. 2020ರಲ್ಲಿ ನಾವು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದೆವು. ಈ ವೇಳೆ ಹ್ಯಾಕಿಂಗ್ ವಿಚಾರವೆಲ್ಲ ಬಯಲಾಯಿತು" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

"2018ರಲ್ಲಿ ನೀವು ಅಧಿಕಾರದಲ್ಲಿ ಇದ್ದಾಗ ವಿಚಾರಣೆ ಮಾಡಲಿಲ್ಲ. ಈಗ ನಮಗೆ ಪ್ರಶ್ನೆ ಮಾಡುತ್ತೀರಾ?. ಶ್ರೀಕಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟಿದ್ದು ಕಾಂಗ್ರೆಸ್" ಎಂದು ಹೇಳಿದ ಬಸವರಾಜ ಬೊಮ್ಮಾಯಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸರ್ಜೇವಾಲ ಆರೋಪಗಳಿಗೆ ತಿರುಗೇಟು ಕೊಟ್ಟರು.

"ಒಂದು ಟ್ವೀಟ್ ಮುಂದಿಟ್ಟುಕೊಂಡು ಲಕ್ಷಗಟ್ಟಲೇ, ಕೋಟಿಗಟ್ಟಲೇ ಅವ್ಯವಹಾರವಾಗಿದೆ ಎಂದು ಆರೋಪ ಮಾಡುತ್ತಿದ್ದೀರಿ. ನೀವು ಸಾಕ್ಷಿ ಪುರಾವೆಗಳನ್ನು ಹಿಡಿದುಕೊಂಡು ಮಾತನಾಡಬೇಕಿತ್ತು. ಟ್ವೀಟ್ ಆಧಾರದ ಮೇಲೆ ಆರೋಪ ಮಾಡುವುದು ಒಬ್ಬ ರಾಷ್ಟ್ರೀಯ ನಾಯಕರಿಗೆ ಶೋಭೆ ತರುವುದಿಲ್ಲ" ಎಂದರು.

"ಬಿಟ್ ಕಾಯಿನ್ ಹಗರಣವನ್ನು ಬಯಲು ಮಾಡಿದ್ದೇ ನಾವು. ಈ ಕುರಿತು ಇಡಿ, ಸಿಬಿಐ ತನಿಖೆಗೆ ಕೊಟ್ಟಿದ್ದು ನಾವು. ಇಂದು ಈ ಕುರಿತು ತನಿಖೆಯಾಗುತ್ತಿದೆ. ಅವರು ಹಲವಾರು ಮಾಹಿತಿಗಳನ್ನು ಕೇಳಿದ್ದಾರೆ. ಅದನ್ನು ಸಹ ಕೊಟ್ಟಿದ್ದೇವೆ. ಇದರ ಹಿಂದೆ ಯಾರು ಇದ್ದರೂ ಸಹ ಬಿಡುವುದಿಲ್ಲ, ಬಲಿ ಹಾಕುತ್ತೇವೆ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

"ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಲು ಬಿಟ್ ಕಾಯಿನ್ ಹಗರಣದ ಹಿಂದೆ ಇಲ್ಲದೇ ಇರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುತ್ತಿದ್ದೀರಾ?. ಬಿಟ್ ಕಾಯಿನ್ ಹಗರಣದ ಹಿಂದೆ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಅಂತೀರಲ್ಲ. ಆ ಇಬ್ಬರ ಹೆಸರು ಹೇಳಲಿ, ದಾಖಲೆ ಬಿಡುಗಡೆ ಮಾಡಲಿ" ಎಂದು ಸಿಎಂ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ಯಾವುದೇ ಪತ್ರ ಬಂದಿಲ್ಲ; ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವ ಡಾ. ಸುಧಾಕರ್, "ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ಕಚೇರಿಯಿಂದ ಪತ್ರ ಬರೆಯಲಾಗಿದೆ ಎಂಬುದು ಕಾಂಗ್ರೆಸ್ ಸೃಷ್ಟಿ. ಪತ್ರ ಬರೆದಿದ್ದರೆ ಯಾರಿಗೂ ಸಿಗದೆ ಇರುತ್ತದೆಯೇ?. ಅದನ್ನು ಮುಚ್ಚಿಡಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದರು.

"ಬಿಟ್ ಕಾಯಿನ್ ಪ್ರಕರಣವನ್ನು ಬೆಳಕಿಗೆ ತಂದಿದ್ದು ನಮ್ಮ ಸರ್ಕಾರ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸತ್ಯವನ್ನು ಜನರ ಮುಂದಿಡಲು ಸರ್ಕಾರ ಬದ್ಧವಾಗಿದೆ" ಎಂದು ಡಾ. ಕೆ. ಸುಧಾಕರ್ ಹೇಳಿದ್ದರು.

"ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಪಾರದರ್ಶಕವಾಗಿ ಕೈಗೊಳ್ಳಲಾಗಿದೆ ಮತ್ತು ತನಿಖೆಯ ಮಾಹಿತಿಯನ್ನು ವಿವರವಾಗಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ" ಎಂದು ಸುಧಾಕರ್ ತಿಳಿಸಿದ್ದರು.

   ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada
   English summary
   Chief minister of Karnataka Basavaraj Bommai broke his silence on bitcoin issue.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion