ಇವತ್ತು ಕಸ ಎತ್ತುವ ಬಾಂಗ್ಲಾ ಜನರು ಮುಂದೊಂದು ದಿನ ನಮ್ಮನ್ನೇ ಎತ್ತಬಹುದು!: ರಾಜೀವ ಹೆಗಡೆ ಬರಹ
ಬೆಂಗಳೂರು: ರಾಜಧಾನಿ ಬೆಂಗಳೂರು ಕೇವಲ ಸಂಚಾರ ದಟ್ಟಣೆಗೆ ಮಾತ್ರವಲ್ಲದೇ ಕಸ ವಿಲೇವಾರಿ ಸಮಸ್ಯೆಯಲ್ಲೂ ಖ್ಯಾತಿ ಪಡೆದಿದೆ. ಇತ್ತೀಚೆಗೆ ನಗರದಲ್ಲಿ ಬಾಂಗ್ಲಾ ಪ್ರಜೆಗಳ ಹಾವಳಿ, ಅವರ ಗಡಿಪಾರು ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಬಾಂಗ್ಲಾ ಮಂದಿಗೆ ನಗರದಲ್ಲಿ ಕಸ ಎತ್ತುವ ಕೆಲಸ ನೀಡಿ ಅದರಲ್ಲೂ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂಬ ಅರೋಪ ಇದೆ. ಇದೇ ವಿಚಾರವಾಗಿ ಪತ್ರಕರ್ತ ಮತ್ತು ಗ್ಲಾನ್ಸ್ ಅಸೋಸಿಯೇಟ್ ಎಡಿಟರ್ 'ರಾಜೀವ ಹಗೆಡೆ' ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅದರ ವಿವರ ಇಲ್ಲಿದೆ..
''ಹಳೆಯ ಚಾಳಿಯಂತೆ ನಮ್ಮ ಬಡಾವಣೆಗೆ ಬರುವ ಒಣ ಕಸದ ವಾಹನಕ್ಕೆ ದಾರಿ ತಪ್ಪಿತ್ತು. ನನ್ನ ಎಂದಿನ ಅಭ್ಯಾಸದಂತೆ ಒಂದಿಷ್ಟು ಅಧಿಕಾರಿಗಳಿಗೆ ಕರೆ ಮಾಡಿ ಉಗಿದೆ. ಈ ಸಂಬಂಧ ಮೂವರು ಅಧಿಕಾರಿಗಳನ್ನು ಸಂಪರ್ಕಿಸಿದೆ. ವಿಪರ್ಯಾಸವೆಂದರೆ ಮೂವರಿಂದಲೂ ಬಂದ ಮೊದಲ ಉತ್ತರದ ಸಾಲು ಒಂದೇ ರೀತಿಯಿತ್ತು, 'ಬಾಂಗ್ಲಾದವರು ಓಡಿ ಹೋಗಿದ್ದಾರೆ ಸಾರ್, ಕಸ ತೆಗೆಯುವವರು ಸಿಗುತ್ತಿಲ್ಲ'. ಅಧಿಕಾರಿಗಳ ಈ ಉತ್ತರ ಕೇಳಿ, ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.

ಮರು ಕ್ಷಣವೇ ಮೂವರಲ್ಲಿಯೂ ಒಂದೇ ಪ್ರಶ್ನೆ ಕೇಳಿದೆ. 'ಇಂತಹ ಮಾತು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ? ನಮ್ಮ ಬೆಂಗಳೂರಿನ ಕಸ ತೆಗೆಯಲು ಬಾಂಗ್ಲಾದವರು ಬೇಕೆನ್ನುವ ಮಟ್ಟಿಗೆ ಹಾಳಾಗಿ ಹೋಗಿದ್ದೀರಾ? ಅಷ್ಟಕ್ಕೂ ಬಾಂಗ್ಲಾದವರಿಂದ ಕಸ ತೆಗೆಸುತ್ತಿದ್ದರೆ ನಿಮ್ಮ ಕೆಲಸ ಹೋಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ? ದುಡ್ಡು ತಿನ್ನಲು ಒಂದು ಮಿತಿ ಕೂಡ ಬೇಡವೇ?' ಎಂದು ಸಾಲು ಪ್ರಶ್ನೆಗಳನ್ನು ಕೇಳಿದಾಗ ತಡವರಿಸಿಕೊಂಡು ಪಾಲಿಶ್ ಆಗಿರುವ ಉತ್ತರ ನೀಡಿದರು. 'ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರದಿಂದ ಬಂದವರಿಂದ ಕಸ ತೆಗೆಸುತ್ತಿದ್ದೆವು. ಈಗ ಬಾಂಗ್ಲಾ ವಲಸಿಗರ ಗಲಾಟೆ ಜೋರಾದ ಬಳಿಕ ಇವರು ಕೂಡ ಹೆದರಿ ಓಡಿ ಹೋಗಿದ್ದಾರೆ' ಎಂದು ಸಮಜಾಯಿಷಿ ಕೊಡಲು ಮುಂದಾದರು. ಆದರೆ ಸಾಮಾನ್ಯ ಜ್ಞಾನ ಇದ್ದವರಿಗೆ ಅಷ್ಟರಲ್ಲಿಯೇ ಅಸಲಿಯತ್ತು ಗೊತ್ತಾಗಿ ಹೋಗುತ್ತದೆ.
ವಲಸಿಗರ ದುರ್ಬಳಕೆ: ಭ್ರಷ್ಟಾಚಾರ ಹೇಗೆ ನಡೆಯುತ್ತದೆ
ಈ ಕಸ ಎತ್ತುವ ವಿಚಾರದಲ್ಲಿ ಆರ್ಥಿಕ ಭ್ರಷ್ಟಾಚಾರ ಹಾಗೂ ದೇಶ ಭ್ರಷ್ಟತೆ ಎನ್ನುವ ಎರಡು ಅಂಶಗಳಿವೆ. ಮೊದಲನೆಯದಾಗಿ ಬಾಂಗ್ಲಾದವರು ಅಥವಾ ಈ ವಲಸಿಗರನ್ನು ದುರ್ಬಳಕೆ ಮಾಡಿಕೊಂಡು ಕಡಿಮೆ ಹಣ ನೀಡಿ, ಇನ್ಯಾರದ್ದೋ ಹೆಸರಲ್ಲಿ ಸಂಬಳದ ಲೆಕ್ಕ ತೋರಿಸುತ್ತಾರೆ. ಕಸದ ವಾಹನ ಹಾಗೂ ಪೌರ ಕಾರ್ಮಿಕರ ಹೆಸರಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೂಲಕ ಬೆಂಗಳೂರಿನ ರಾಜಕಾರಣಿಗಳು ಮಾಡುತ್ತಿರುವ ಭ್ರಷ್ಟಾಚಾರ ತುಂಬಾ ಹಳೆಯ ವಿಚಾರ. ಈ ಭ್ರಷ್ಟಾಚಾರ ಹಾಗೂ ಕಸ ಸಂಗ್ರಹದ ಹಗರಣದ ಬಗ್ಗೆ ಹಗಲಿರುಳು ಬರೆಯುವಷ್ಟು ವಿಚಾರವಿದೆ.
ಬೆಂಗಳೂರಿನ ಕಸದ ಕೊಂಪೆಯನ್ನು ನೋಡಿದರೆ ವಿಶ್ವರೂಪ ದರ್ಶನವಾಗುತ್ತದೆ. ಆದರೆ ಆ ಭ್ರಷ್ಟ ಕೂಟಕ್ಕೆ ಈಗ ಬಾಂಗ್ಲಾ ವಲಸಿಗರು ಸೇರಿಕೊಂಡಿರುವುದು ಅಪಾಯದ ಮೂನ್ಸೂಚನೆ. ಏಕೆಂದರೆ ವಲಸಿಗರು ಎನ್ನುವುದು 'ನ್ಯೂ ನಾರ್ಮಲ್' ಆಗುತ್ತಿದೆ. ಸರ್ಕಾರಿ ಅಧಿಕಾರಿಗಳು ತುಂಬಾ ಸಲೀಸಾಗಿ ಬಾಂಗ್ಲಾ ವಲಸಿಗರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದನ್ನು ಹೇಳುತ್ತಿರುವುದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಅದಕ್ಕೆ ಕಡಿಮೆ ಸಂಬಳ ಎನ್ನುವ ಸಮಜಾಯಿಷಿ ಕೂಡ ಸಿಗುತ್ತಿದೆ.
ಕೊಡಗು ಚಿಕ್ಕಮಗಳೂರು ಹಾಗೂ ಸಕಲೇಶಪುರದ ಕಾಫಿ ಎಸ್ಟೇಟ್‌ನವರು ಕೂಡ ಇದೇ ರೀತಿ ಸಮಜಾಯಿಷಿಯನ್ನು ಕೆಲ ವರ್ಷಗಳ ಹಿಂದೆ ಕೊಡುತ್ತಿದ್ದರು. ಆದರೆ ಸರ್ಕಾರಿ ಅಧಿಕಾರಿಗಳ ಬಾಯಿಂದ ಇದು ಬರಲು ಆರಂಭಿಸಿದರೆ, ನಾವು ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದ್ದೇವೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಬೇಡ.
ಇದೆಲ್ಲ ಬಲಪಂತೀಯರ ಕಟ್ಟು ಕಥೆ ಅನ್ನಬಹುದು
ಇಂದು ಕಸ ತೆಗೆಯಲು ಬಂದವರು, ನಾಳೆ ಮನೆ ಕೆಲಸಕ್ಕೆ ಬರುತ್ತಾರೆ. ನಾಡಿದ್ದು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುತ್ತಾರೆ. ಒಂದಷ್ಟು ವರ್ಷದಲ್ಲಿ ಚುನಾವಣೆಗೆ ನಿಂತು ಜನನಾಯಕರಾಗಿ, ಅವರದ್ದೇ ದರ್ಬಾರು ಆರಂಭಿಸುತ್ತಾರೆ. ಇದೆಲ್ಲ ಬಲಪಂತೀಯರ ಕಟ್ಟು ಕಥೆ ಎಂದು ಯಾರಾದರೂ ಹಲುಬಹುದು. ಸಂಶಯವಿದ್ದರೆ ಯುರೋಪಿನ ವಿವಿಧ ರಾಷ್ಟ್ರಗಳ ಬಗ್ಗೆ ಒಮ್ಮೆ ಅಧ್ಯಯನ ಮಾಡಿ. ಅಲ್ಲಿರುವ ಭಾರತೀಯರ ಬಳಿ ವಲಸಿಗರ ಬಗ್ಗೆ ಒಮ್ಮೆ ಪ್ರಶ್ನಿಸಿ ನೋಡಿ. ನಿಮಗೆ ವಾಸ್ತವ ಚಿತ್ರಣ ದೊರೆಯುತ್ತದೆ.
ಇಂದು ಕಸ ತೆಗೆಯಲು ಬಂದವರು ನಾಳೆ ಒತ್ತುವರಿ ಮಾಡಿ ಮನೆ ಮಾಡಿಕೊಳ್ಳುತ್ತಾರೆ. ಅದಾದ ಬಳಿಕ ನಾವೇ ದೊಣ್ಣೆ ನಾಯಕರು ಎಂದು ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ಬೀಸಲು ಆರಂಭಿಸುತ್ತಾರೆ. ಹೀಗಾಗಿ ಕಸ ಎತ್ತಲು ಬಂದವರು, ನಮ್ಮನ್ನೇ ಎತ್ತಿದರೆ ಆಶ್ಚರ್ಯವಿಲ್ಲ. ಸರ್ಕಾರ ಹಾಗೂ ಅಲ್ಲಿಯ ಅಧಿಕಾರಿಗಳು ಇದನ್ನೆಲ್ಲ ʼನ್ಯೂ ನಾರ್ಮಲ್ʼ ಮಾಡುವ ಮುನ್ನ ನಾವು ಎಚ್ಚರವಹಿಸಬೇಕಿದೆ.
ವಲಸಿಗರನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲಿ
ಅಂದ್ಹಾಗೆ ಕರ್ನಾಟಕದಲ್ಲಿನ ಬಿಜೆಪಿ ನಾಯಕರು ಕಾಫಿ ತೋಟದ ಮಾಲೀಕರ ಮೇಲಿನ ಪ್ರೀತಿಯನ್ನು ಬಿಟ್ಟು, ಬಾಂಗ್ಲಾ ವಲಸಿಗರ ಬಗ್ಗೆ ಗಂಭೀರವಾಗಿ ಹೋರಾಟ ಮಾಡಬೇಕಿದೆ. ಅಷ್ಟಾದರೂ ನಿಮ್ಮ ಸಿದ್ಧಾಂತ ಹಾಗೂ ದೇಶ ಪ್ರೇಮವನ್ನು ಜಗಜ್ಜಾಹಿರು ಮಾಡುವ ಪ್ರಯತ್ನ ಮಾಡಿ.
ಕೊನೆಯದಾಗಿ, ಈ ಕಸದ ಸಮಸ್ಯೆ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ, ಧಮ್ಕಿ ಹಾಕಿದ್ದಕ್ಕೆ ಯಲಚೇನಹಳ್ಳಿ ವಾರ್ಡ್‌ನಿಂದ ಓರ್ವ ಅಧಿಕಾರಿ ಕರೆ ಮಾಡಿದ್ದ. ನಾನು ನನ್ನ ವಿಳಾಸ ಹೇಳಿದಾಗ, ಇದು ಜರಗನಹಳ್ಳಿ ವಾರ್ಡ್‌ಗೆ ಬರುತ್ತದೆ. ಹೊಸ ವಿಂಗಡಣೆ ಪ್ರಕಾರ ಯಲಚೇನಹಳ್ಳಿಗೆ ಬಂದರೂ, ಕಸ ಸಂಗ್ರಹಕ್ಕೆ ಸಂಬಂಧಿಸಿ ಜರಗನಳ್ಳಿಯಲ್ಲಿ ಇದೆ ಎಂದ. ʼನಿಮ್ಮ ಈ ಮ್ಯುಸಿಕಲ್ ಚೇರ್ ನಾಟಕವನ್ನು ನನ್ನ ಬಳಿ ಮಾಡಬೇಡಿ. ನಮ್ಮ ಏರಿಯಾ ಯಾರಿಗೆ ಬರುತ್ತದೆ ಎಂದು ನೀವೇ ನಿರ್ಧರಿಸಿಕೊಂಡು ಕರೆ ಮಾಡಿ ಪರಿಹಾರ ಕೊಡಿ. ಇಲ್ಲವಾದಲ್ಲಿ ನಿಮ್ಮ ಮನೆಗೆ ಕಸ ತಂದು ಸುರಿಯುತ್ತೇನೆ' ಎಂದ ಬಳಿಕ ಮತ್ತೊಬ್ಬ ಅಧಿಕಾರಿಯಿಂದ ಕರೆ ಬಂತು. ಸರಿಯಾಗಿ ಅಧಿಕಾರ ವಿಂಗಡಣೆ ಮಾಡಲಾಗದವರೆಲ್ಲ ಬೆಂಗಳೂರನ್ನು ಗ್ರೇಟರ್ ಮಾಡುತ್ತಾರೆ, ಊರ್ತುಂಬಾ ಇರುವ ಕಸ ವಿಂಗಡಣೆ ಮಾಡುತ್ತಾರೆ ಎಂದು ನಂಬುವುದೇ ದೊಡ್ಡ ಅಪರಾಧ ಎನಿಸಿಬಿಡುತ್ತದೆ.'' ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಓದಿದ ಫೇಸ್‌ಬುಕ್ ಬಳಕೆದಾರರು ಬಾಂಗ್ಲಾದವರ ಬೆಂಗಳೂರಿನ ವಾಸದ ಬಗ್ಗೆ, ಕಸ ವಿಲೇವಾರಿ, ಭ್ರಷ್ಟಾಚಾರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
-
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications