ಬೆಂಗಳೂರು: ಈ ಬಾರಿ ಸಹ ಬಿಸಿಲು ಝಳ ಅಸಹನೀಯ

ಬೆಂಗಳೂರು, ಫೆ10: ಈ ಬಾರಿ ಬೆಂಗಳೂರು ಜನತೆಗೆ ಇಬ್ಬನಿ ತಾಕಲಿಲ್ಲ, ನಿಜ. ಆದರೆ ಅದೇ ನೆಪವನ್ನಿಟ್ಟುಕೊಂಡು ಈ ಬಾರಿ ಬೇಸಿಗೆ ಋತುವಿನಲ್ಲಿ ಬಿಸಿಲಿನ ಝಳ ವಿಪರೀತವಾಗಲಿದೆ. ಕಳೆದ ವರ್ಷ ಬೇಸಿಗೆಯಂತೂ ಬೆಂಗಳೂರಿಗರಿಗೆ ಅಸಹನೀಯವಾಗಿತ್ತು. ಈ ಬಾರಿಯೂ ಹಾಗೇ ಇರುತ್ತದೆ ಬಿಸಿಲು.

ಈ ಮಧ್ಯೆ, ಚಳಿಗಾಲ ಮುಗಿದು, ಇನ್ನೂ ಬೇಸಿಗೆಯೇ ಆರಂಭವಾಗಿಲ್ಲ. ಆಗಲೇ ಬಿಸಿಲು ಕಾಡಲಾರಂಭಿಸಿದೆ. ಹವಾಮಾನ ಇಲಾಖೆ (IMD) ಪ್ರಕಾರ ಬೇಸಿಗೆ ಶುರುವಾಗುವುದು ಮಾರ್ಚ್ ನಲ್ಲಿ. ಆದರೆ ಅದಕ್ಕೂ ಮುನ್ನವೇ ತಾಪಮಾನ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲು ರೌದ್ರಾವತಾರ ತಾಳಲಿದ್ದು, ಈ ಬಾರಿ 40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ.

Bangalore witnesses heat even before summer sets in - Meteorological department
ನಿನ್ನೆ ಭಾನುವಾರವಂತೂ ಬೆಂಗಳೂರು 33 ಡಿಗ್ರಿ ತಾಪಮಾನ ಕಂಡಿದೆ. ಅದರಲ್ಲಿದ್ದ ತೇವಾಂಶ ಕೇವಲ ಶೇ. 52. ಹಾಗಾಗಿ ಬಿಸಿಲಿನ ಹೊಡೆತ ಇನ್ನೂ ಜೋರಾಗಿತ್ತು. ಇಂದು ಸೋಮವಾರ ಬೆಳಗ್ಗೆ ನಗರದಲ್ಲಿ ದಟ್ಟವಾದ ಮಂಜು ಆವರಿಸಿತ್ತಾದರೂ ದಿನವೇರುತ್ತಿದ್ದಂತೆ ಸೂರ್ಯನ ಪ್ರತಾಪ ಹೆಚ್ಚಾಗಿಯೇ ಇದೆ.

'ಶುಭ್ರ ಆಕಾಶದಿಂದಾಗಿ ಮುಂದಿನ ದಿನಗಳಲ್ಲಿ ತಾಪಮಾನ ಹೀಗೇ ಮುಂದುವರಿಯಲಿದೆ. ರಾತ್ರಿ ವೇಳೆಯೂ ತಾಪಮಾನ ಹೆಚ್ಚಾಗಿಯೇ ಇರುತ್ತದೆ. ಬೆಳಗಿನ ಜಾವಗಳಲ್ಲಿ ಮಾತ್ರ ತಂಪು ವಾತಾವರಣ ನೆಲಸಲಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕರಾದ ಬಿ ಪುಟ್ಟಣ್ಣ ಅವರು ಹೇಳಿದ್ದಾರೆ.

ಫೆಬ್ರವರಿ ತಿಂಗಳಲ್ಲಿಯೇ ತಾಪಮಾನ 35 degrees Celsiusಗೆ ತಲುಪಲಿದೆ. ಕಳೆದ ದಶಕದಲ್ಲಿ ಮೂರು ಬಾರಿ ಹೀಗೆ ಹೆಚ್ಚಿನ ತಾಪಮಾನ ಕಂಡುಬಂದಿತ್ತು. 2005 ಫೆಬ್ರವರಿ 17 (35.9 deg C), 2012 ಫೆಬ್ರವರಿ 17 (35.4 deg C) ಮತ್ತು 2008 ಫೆಬ್ರವರಿ 17 (35.2 deg C).

ಸದ್ಯಕ್ಕೆ ನೀರಿನ ತೊಂದರೆಯೇನೂ ಕಾಣಿಸಿಲ್ಲವಾದರೂ ಇಂಧನ ಸಚಿವ ಡಿಕೆ ಶಿವಕುಮಾರ್ ಭರವಸೆಯ ಹೊರತಾಗಿಯೂ ಈಗಾಗಲೇ ವಿದ್ಯುತ್ ಕಡಿತ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗುವ ಸಾಧ್ಯೆತಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+