ಬ್ಲ್ಯಾಕ್ ಫ್ರೈಡೆ: ಬೆಂಗಳೂರಿನಲ್ಲಿ ದುರಂತಗಳ ಸರಮಾಲೆ

ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದ್ದು ಗುರುವಾರ ರಾತ್ರಿಯೂ ಮಳೆ ಸುರಿದಿದೆ.
ಇದರಿಂದ ಶುಕ್ರವಾರ ಬೆಳಗಿನ ಜಾವ ಮನೆಯ ಗೋಡೆಯೊಂದು ಕುಸಿದು ದಂಪತಿ ನಿದ್ರೆಯಲ್ಲೇ ಸಾವನ್ನಪ್ಪಿದ್ದಾರೆ. ತಿಮ್ಮಸಂದ್ರದಲ್ಲಿ ಈ ಘಟನೆ ನಡೆದಿದೆ.
ಮತ್ತೊಂದು ಘಟನೆಯಲ್ಲಿ, ರಾಜರಾಜೇಶ್ವರಿ ನಗರದ ಬಂಗಾರಪ್ಪ ಲೇ ಔಟಿನಲ್ಲಿ ಸರಸ್ವರಿ (45) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಆನೇಕಲ್ಲಿನ ಚಂದಾಪುರ ಸೂರ್ಯನಗರದಲ್ಲಿ ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತಿದ್ದ ರಾಜೇಶ್ವರಿ ಹಿರೇಮಠ್ (54) ಮೃತ ಮಹಿಳೆ. ಇವರು ಮೂಲತಃ ಗುಲ್ಬರ್ಗಾದವರು. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹಿಟ್ ಅಂಡ್ ರನ್: ಇನ್ನು ನಾಗರಭಾವಿ ಬಳಿಯ ಮೂಡಲಪಾಳ್ಯದಲ್ಲಿ ಶಾಲಾ ವಾಹನವೊಂದು ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಯುವ ಸವಾರ ಮೃತಪಟ್ಟಿದ್ದಾನೆ. ಡಿಕ್ಕಿ ಹೊಡೆದ ನಂತರ ಶಾಲಾ ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಬಿಕಾಂ ವಿದ್ಯಾರ್ಥಿ ರವಿಕಿರಣ್ (20) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಮಾಡಿರುವ ಶಾಲಾ ವಾಹನವು ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ್ದೆಂದು ಸ್ಥಳೀಯರು ಹೇಳಿದ್ದಾರೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. [ಶುಕ್ರವಾರ, 13 : ಹಿಂದೂಗಳಿಗೆ ಶುಭ, ಪಾಶ್ಚಾತ್ಯರಿಗೆ ಅಶುಭ]












Click it and Unblock the Notifications