ಮಲ್ಲೇಶ್ವರ: ವಾಟಾಳ್ ನಾಗರಾಜ್ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ

ಬೆಂಗಳೂರು, ನವೆಂಬರ್, 04 : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘವು 60ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಲ್ಲೇಶ್ವರಂ ಬಳಿಯ ರಜತ ಭವನದಲ್ಲಿ ನವೆಂಬರ್ 06ರ ಶುಕ್ರವಾರ ದಂದು ಮಧ್ಯಾಹ್ನ 2.30ಕ್ಕೆ ವೈವಿಧ್ಯ ಸಮಾರಂಭಗಳು ಜರುಗಲಿದೆ.

60ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟಕರಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅಧ್ಯಕ್ಷರಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿಜಯ ಭಾಸ್ಕರ್, ಮುಖ್ಯ ಅತಿಥಿಗಳಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವೇದಿಕೆ ಅಲಂಕರಿಸಲಿದ್ದಾರೆ.[ರಾಜ್ಯೋತ್ಸವ ವಿಶೇಷ: ನುಡಿ ಕನ್ನಡ ಬ್ಲಾಗಿಗೆ ಸ್ವಾಗತ]

Bangalore water and sewerage board organize Kannada Rajyotsava programme at Bengaluru

ಈ ರಾಜ್ಯೋತ್ಸವದಲ್ಲಿ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ದಿಗ್ಗಜರುಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ. ಚಂದ್ರಶೇಖರ್ ಪಾಟೀಲ (ಚಂಪಾ), ಕನ್ನಡ ಚಲನಚಿತ್ರ ನಾಯಕ ರಾಜೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಆಡಳಿತ ಸೇವೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಚ್ ಜಗದೀಶ್, ಪ್ರಧಾನ ಮುಖ್ಯ ಅಭಿಯಂತರರು ಎಸ್ ಕೃಷ್ಣಪ್ಪ ಹಾಗೂ ಆರ್ಥಿಕ ಸಲಹೆಗಾರ ಆರ್ ರಾಮಣ್ಣ ಭಾಗವಹಿಸಲಿದ್ದಾರೆ.[ಕಾಶ್ಮೀರಿ ಪಂಡಿತರ ನೋವು ನರಳಾಟ ಕುರಿತ ಪುಸ್ತಕ]

ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿಗೆ ಶ್ರಮಿಸಿದ ಸಾಧಕರುಗಳಾದ ಬೆಂಗಳೂರು ಜಲಮಂಡಳಿ ನಿವೃತ್ತ ಅಧ್ಯಕ್ಷ ಬಿ.ಎನ್ ತ್ಯಾಗರಾಜನ್, ನಿವೃತ್ತ ಮುಖ್ಯ ಅಭಿಯಂತರರು ಸಿ. ವಿಶ್ವನಾಥ್ ಹಾಗೂ ಕೆ. ರಮೇಶ್, ಕನ್ನಡ ಪರ ಹೋರಾಟಗಾರ ಎಚ್. ವಿ ಗಿರೀಶ್ ಗೌಡ, ಕನ್ನಡ ಕೃಷ್ಣ ಇವರಿಗೆ ಸನ್ಮಾನ ನಡೆಯಲಿದೆ.

ಅಲ್ಲದೇ ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ ನ ಖ್ಯಾತ ಗಾಯಕರುಗಳಾದ ಮಲ್ಲೇಶ್ ಹೂಗಾರ ಹಾಗೂ ಪುಟ್ಟರಾಜ್ ಹೂಗಾರ ಅವರಿಂದ ಕನ್ನಡ ಗೀತೆಗಳ ಸುಮಧುರ ಗಾಯನ ಹರಿದು ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+