Metro: ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣ
ನಮ್ಮ ಮೆಟ್ರೋ ತನ್ನ ಕಾರ್ಯದಲ್ಲಿ ಹಲವು ರೀತಿಯ ಹೊಸ ತನಗಳನ್ನು ಮೈಗೂಡಿಸಿಕೊಂಡು ಬರುತ್ತಿದೆ. ನಮ್ಮ ಮೆಟ್ರೋ ಮತ್ತೊಂದು ಮಹತ್ವದ ನಿರ್ಧಾರ ಕೈ ಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಹೊಸ ಥೀಮ್‌ನಲ್ಲಿ ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣವನ್ನು ರಚಿಸಲು ಪ್ಲ್ಯಾನ್ ನಡೆಯುತ್ತಿದೆ.
ವರದಿಗಳ ಪ್ರಕಾರಣ ನಮ್ಮ ಮೆಟ್ರೋ ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣದಲ್ಲಿ ಹೊಸತನವನ್ನು ಪರಿಚಯಿಸಲಿದೆ. ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೆಟ್ರೋ ನಿಲ್ದಾಣ ಸಂಪೂರ್ಣ ಬಿದಿರಿನ ಅಲಂಕಾರವನ್ನು ಒಳಗೊಂಡಿರುವ ಭಾರತದ ಮೊದಲ ಮೆಟ್ರೋ ನಿಲ್ದಾಣವಾಗಿರಲಿದೆ.

ನಮ್ಮ ಮೆಟ್ರೋಗೆ ಮತ್ತೊಂದು ಗರಿ?
ಇದೊಂದು ವಿಭಿನ್ನ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಇದಕ್ಕೆ ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ (ಬಿಎಸ್ಐ) ಅಧ್ಯಕ್ಷ ಮತ್ತು ಮಾಜಿ ಪ್ರಧನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ಬಿಎಂಆರ್‌ಸಿಎಲ್ ಸಂಪರ್ಕಿಸಿದ್ದು, ಸಂಸ್ಥೆ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ. ನಿಲ್ದಾಣದಲ್ಲಿ ಹೆಚ್ಚಾಗಿ ಬಿದುರನ್ನೇ ಬಳಸಿಲು ತೀರ್ಮಾನಿಸಲಾಗಿದೆ. ಈ ಮೂಲಕ ಭಾರತದ ಮೊಟ್ಟ ಮೊದಲ ಬಿದುರು ಮೆಟ್ರೋ ನಿಲ್ದಾಣವನ್ನು ರಚಿಸಿದಂತೆ ಆಗುತ್ತೆದ.
ಈ ನಿಲ್ದಾಣ ಬಿದಿರು ಆಧಾರಿತ ವಿನ್ಯಾಸಗಳು, ರಚನೆಗಳು ಮತ್ತು ಒಳಾಂಗಣಗಳನ್ನು ಒಳಗೊಂಡಿರುತ್ತದೆ, ಈ ಮೂಲಕ ಪರಿಸರ ಜಾಗೃತಿಯನ್ನು ಉತ್ತೇಜಿಸುತ್ತದೆ ಮತ್ತು ನಗರ ಸ್ಥಳಗಳಲ್ಲಿ ನೈಸರ್ಗಿಕ ವಸ್ತುಗಳ ಸೌಂದರ್ಯದ ಆಕರ್ಷಣೆಯನ್ನು ಪ್ರದರ್ಶಿಸುತ್ತದೆ. ಇದರೊಂದಿಗೆ ಬಿದಿರಿನ ಥೀಮ್‌ನಲ್ಲಿ ನಿರ್ಮಿಸಲಾಗುತ್ತಿರುವ ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣವು ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟ ದೇಶದ ಮೊದಲ ಮೆಟ್ರೋ ನಿಲ್ದಾಣವಾಗಲಿದೆ. ಇದರ ನಿರ್ಮಾಣಕ್ಕೆ ಬಿದಿರನ್ನು ಬಳಸಲಾಗುವುದು.
ವರದಿಗಳ ಅನುಸಾರ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ (ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣ)ವಾಗಿ ಮಾರ್ಪಡು ಸಾಧ್ಯತೆ ಇದೆ. ಇದರೊಂದಿಗೆ ಬಿದಿರಿನ ಥೀಮ್‌ನಲ್ಲಿ ನಿರ್ಮಿಸಲಾಗುತ್ತಿರುವ ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣವು ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟ ದೇಶದ ಮೊದಲ ಮೆಟ್ರೋ ನಿಲ್ದಾಣವಾಗಲಿದೆ. ಇದರ ನಿರ್ಮಾಣಕ್ಕೆ ಬಿದಿರನ್ನು ಬಳಸಲಾಗುವುದು.
ಕೆಲವೇ ತಿಂಗಳಲ್ಲಿ ನಿಲ್ದಾಣದ ಕಾಮಗಾರಿ ಆರಂಭವಾಗಲಿದ್ದು, 5-6 ಕೋಟಿ ರೂ. ಬಿದಿರನ್ನು ಪ್ರಾಥಮಿಕ ನಿರ್ಮಾಣ ವಸ್ತುವಾಗಿ ಪ್ರದರ್ಶಿಸಲಾಗುತ್ತದೆ. ಬಿದಿರು ತನ್ನ ಸುಸ್ಥಿರತೆ, ವೇಗದ ಬೆಳವಣಿಗೆ ಹೆಸರುವಾಸಿ. ಬ್ಯಾಂಬೂ ಸೋಸೈಟಿ ಆಫ್ ಇಂಡಿಯಾ ಸಹಯೋಗದಲ್ಲಿ BMRCL ಕೈಗೊಂಡಿರುವ ಈ ನವೀನ ಯೋಜನೆ ಪರಿಸರ ಜಾಗೃತಿ ಹೆಚ್ಚಿಸಲು ಮತ್ತು ಬಾಂಬುವಿನ ಸೌಂದರ್ಯವನ್ನು ಪ್ರದರ್ಶಿಸಲು ಉದ್ದೇಶಿಸಿದೆ.












Click it and Unblock the Notifications