ಡಾ ಯುಆರ್ ಅನಂತಮೂರ್ತಿಗೆ ಟಿಪ್ಪು ರಾಷ್ಟ್ರೀಯ ಪ್ರಶಸ್ತಿ

ಗಮನಾರ್ಹವೆಂದರೆ ನರೇಂದ್ರ ಮೋದಿ ಪ್ರಧಾನಿಯಾಗುವ ನಾಡಿನಲ್ಲಿ ತಾನು ಇರುವುದಿಲ್ಲ ಎಂದು ಹೇಳಿದ್ದ ನಾಡಿನ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯುಆರ್ ಅನಂತಮೂರ್ತಿ ಅವರಿಗೆ 'ಟಿಪ್ಪು ಸುಲ್ತಾನ್ ರಾಷ್ಟ್ರೀಯ ಪ್ರಶಸ್ತಿ' ಘೋಷಿಸಲಾಗಿದೆ.
ಮೈಸೂರು ದೊರೆ ಟಿಪ್ಪು ಸುಲ್ತಾನ್ 264ನೇ ಜನ್ಮದಿನ ಅಂಗವಾಗಿ ನ. 18ರಂದು (ಅಂದರೆ ಮೋದಿ ಬೆಂಗಳೂರಿಗೆ ಬಂದು ಹೋದ ಮಾರನೆಯ ದಿನ) ಟಿಪ್ಪು ಸುಲ್ತಾನ್ ರಾಷ್ಟ್ರೀಯ ಪ್ರಶಸ್ತಿಯು ಡಾ ಯುಆರ್ ಅನಂತಮೂರ್ತಿ ಅವರಿಗೆ ಪ್ರದಾನವಾಗಲಿದೆ.
ಪ್ರಶಸ್ತಿ ಕೊಡಮಾಡುತ್ತಿರುವ ಟಿಪ್ಪು ಸುಲ್ತಾನ್ ಸಂಯುಕ್ತ ರಂಗವು ಅನಂತಮೂರ್ತಿ ಅವರ ಜತೆಗೆ ಇನ್ನೂ ಇಬ್ಬರಿಗೆ ಪ್ರಶಸ್ತಿ ಕೊಡಮಾಡುತ್ತಿದೆ ಎಂದು ರಂಗದ ರಾಜ್ಯಾಧ್ಯಕ್ಷ ಸರ್ದಾರ್ ಅಹಮದ್ ಖುರೇಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಹಿಂದ ಕಾರ್ಯಕಾರಿ ರಾಜ್ಯಾಧ್ಯಕ್ಷ ಪ್ರೊ. ಎನ್ ವಿ ನರಸಿಂಹಯ್ಯ ಹಾಗೂ ಸಮಾಜ ಸೇವಕ ಪ್ರೊ. ನಾಜನೀನ್ ಬೇಗಂ ಅವರಿಗೂ ಪ್ರಶಸ್ತಿ ಘೋಷಿಸಲಾಗಿದೆ.
ನಗರದ ಪುರಭವನದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ಮಾಜಿ ಸಚಿವ ಸಿಕೆ ಜಾಫರ್ ಷರೀಫ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಗುವುದು ಎಂದು ಅಹಮದ್ ಖುರೇಶಿ ಹೇಳಿದ್ದಾರೆ. (ಚಿತ್ರ)












Click it and Unblock the Notifications