ರಂಗಶಂಕರ: ಚೆರಿ ತೋಟದಲ್ಲಿ ಮತ್ತೆ ವಿಹರಿಸಿ
ಬೆಂಗಳೂರು, ನ.27: ರಂಗಕರ್ಮಿ ವೆಂಕಟೇಶ್ ಪ್ರಸಾದ್ ನೇತೃತ್ವದ ಬೆಂಗಳೂರು ಥಿಯೇಟರ್ ಕಂಪನಿ, ಆಂಟನ್ ಚೆಕಾಫ್ ನ 'ದಿ ಚೆರ್ರಿ ಆರ್ಚರ್ಡ್' ನಾಟಕದ ಕನ್ನಡಾನುವಾದ, ಚೆರ್ರಿ ತೋಟ ನಾಟಕವನ್ನು ಮತ್ತೊಮ್ಮೆ ರಂಗಶಂಕರದಲ್ಲಿ ಮೂಡಿಸುತ್ತಿದೆ. ನವೆಂಬರ್ 29ರಂದು ಎಂಟನೇ ಹಾಗೂ ಒಂಭತ್ತನೇ ಪ್ರದರ್ಶನವನ್ನು ನೀಡುತ್ತಿದೆ.
ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ 'ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‌ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ
ಬೆಂಗಳೂರು ಥಿಯೇಟರ್ ಕಂಪನಿ: ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡು, ರಂಗಭೂಮಿಯ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ ಕೆಲವು ಗೆಳೆಯರೊಂದಿಗೆ ವೆಂಕಟೇಶ್ ಪ್ರಸಾದ್ ಅವರು ಪ್ರಾರಂಭಿಸಿದ ತಂಡವೇ ಬೆಂಗಳೂರು ಥಿಯೇಟರ್ ಕಂಪನಿ.
ಹವ್ಯಾಸಿ ರಂಗಭೂಮಿಯಲ್ಲೂ ವೃತ್ತಿಪರತೆ, ಕನ್ನಡ ರಂಗಭೂಮಿಯಲ್ಲಿ ವೃತ್ತಿಪರತೆಯಿಂದ ಕೂಡಿದ ಹೊಸ ಪ್ರಯೋಗಗಳ ಮೂಲಕ ರಂಗಭೂಮಿಯನ್ನು ಅಭ್ಯಸಿಸುವುದು, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿ ನೈಪುಣ್ಯ ಹೊಂದಿರುವ, ಸಂಪೂರ್ಣ ಬದ್ಧತೆಯಿರುವ ತಂಡವೊಂದನ್ನು ತಯಾರು ಮಾಡುವುದು, ಸಾಮಾಜಿಕ ಬದ್ಧತೆಯನ್ನು ರಂಗಕ್ರಿಯೆಯ ಮೂಲಕ ಅಭಿವ್ಯಕ್ತಿ ಪಡಿಸುವುದು ಇವೇ ನಮ್ಮ ತಂಡದ ಕೆಲವು ಧ್ಯೇಯಗಳು.

ನಮ್ಮ ತಂಡದ ಬೆನ್ನೆಲುಬು, ಮಾರ್ಗದರ್ಶಕರು
ನಮ್ಮ ತಂಡದ ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತಿರುವವರು ಪ್ರಕಾಶ್ ಬೆಳವಾಡಿ, ಶ್ರೀಪಾದ್ ಭಟ್ ಹಾಗೂ ಸಮುದಾಯ ಕರ್ನಾಟಕ ಸಂಘಟನೆ. ಬೆಂಗಳೂರು ಥಿಯೇಟರ್ ಕಂಪನಿಯ ನಾಲ್ಕು ಸ್ಥಾಪಕ ಸದಸ್ಯರು ವೆಂಕಟೇಶ್ ಪ್ರಸಾದ್, ವಿನಯ್ ಚಂದ್ರ, ಸುಷ್ಮಾ ರಾವ್ ಮತ್ತು ಅರುಣ್ ಡಿ.ಟಿ.

ಚೆರಿ ತೋಟ ನಾಟಕದ ಬಗ್ಗೆ
ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ 'ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‌ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.

ಹಲವು ಪ್ರತಿಮೆಗಳ ಸಂಕೇತ
ನಾಟಕದ ಕೇಂದ್ರವಾದ ಚೆರ್ರಿ ತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿ ತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ. ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ.
ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.

ಚೆರ್ರಿ ತೋಟ ವಿವರ
ಮೂಲ : ಆಂಟನ್ ಚೆಕಾಫ್
ಕನ್ನಡಕ್ಕೆ : ವೆಂಕಟೇಶ್ ಪ್ರಸಾದ್
ಪ್ರಸ್ತುತಿ : ಬೆಂಗಳೂರು ಥಿಯೇಟರ್ ಕಂಪನಿ
ವಿನ್ಯಾಸ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ : 29/11/2015 , ಮಧ್ಯಾಹ್ನ 3:30, ಸಂಜೆ 7:30
ಟಿಕೆಟ್‌ದರ : ರೂ. 100/-
ದೂರವಾಣಿ ಸಂಖ್ಯೆ : 9900182400, 9483709735
ವೆಬ್ ಸೈಟ್ : www.bookmyshow.com ; www.filmysphere.com
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications