ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ವಿಬ್‌ಗಯಾರ್ ಶಾಲೆ
ಬೆಂಗಳೂರು, ಜು.23: ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಬ್‌ಗಯಾರ್ ಶಾಲೆಯ ಒಂದೊಂದೆ ಅಕ್ರಮ ಇದೀಗ ಬೆಳಕಿಗೆ ಬರತೊಡಗಿದೆ.
ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್‌ಇ) ಶಿಕ್ಷಣ ಕ್ರಮದಲ್ಲಿ ಪಾಠ ಮಾಡಲು ವಿಬ್‌ಗಯಾರ್ ಸಂಸ್ಥೆಗೆ ಕಳೆದ ವರ್ಷ ಪ್ರಮಾಣ ಪತ್ರ ಸಿಕ್ಕಿದ್ದು, ಏಳು ವರ್ಷದಿಂದ ಪೋಷಕರಿಗೆ ಸುಳ್ಳು ಐಸಿಎಸ್‌ಇ ಮಾನ್ಯತೆಯ ಪ್ರಮಾಣಪತ್ರ ತೋರಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆದರೆ ಐಸಿಎಸ್‌ಇ ಪಠ್ಯದಲ್ಲಿ ಪಾಠಮಾಡಲು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೆಷನ್(ಸಿಐಎಸ್‌ಸಿಇ) ನೀಡುವ ಪ್ರಮಾಣ ಪತ್ರ ಅಗತ್ಯವಾಗಿದ್ದು, ಈ ಪ್ರಮಾಣ ಪತ್ರವನ್ನು ಸಿಐಎಸ್‌ಸಿಇ ನೀಡಿದ ಮುಂದಿನ ವರ್ಷದಿಂದ ಪ್ರಮಾಣ ಪತ್ರ ಪಡೆದ ಶಾಲೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಬೋಧನೆ ಮಾಡಬೇಕಾಗುತ್ತದೆ.
ಆದರೆ ವಿಬ್‌ಗಯಾರ್ ಶಾಲೆಗೆ ಅಕ್ಟೋಬರ್ 9, 2013ರಂದು ಸಿಐಎಸ್‌ಸಿಇ ಪ್ರಮಾಣ ಪತ್ರ ನೀಡಿದೆ. ಈ ಪ್ರಮಾಣ ಪತ್ರ ದೊರೆತ ಒಂದು ವರ್ಷದ ಬಳಿಕ, ಅಂದರೆ 2014ರಲ್ಲಿ ಐಸಿಎಸ್‌ಇ ಪಠ್ಯಕ್ರಮದಲ್ಲಿ ಶಿಕ್ಷಣ ಆರಂಭಿಸಿಬೇಕಿದ್ದ ವಿಬ್‌ಗಯಾರ್ 2007ರಿಂದಲೇ ಸುಳ್ಳು ದಾಖಲೆ ಹೇಳಿ ಪೋಷಕರಿಗೆ ಮೋಸ ಮಾಡಿದೆ ಎಂದು ವರದಿಯಲ್ಲಿ ತಿಳಿಸಿದೆ.
ವಿಬ್‌ಗಯಾರ್ ಸಿಐಸಿಎಸ್‌ಇ ನಿಮಯವನ್ನು ಉಲ್ಲಂಘಿಸಿದೆ. ಸಿಐಸಿಎಸ್‌ಇ ಪ್ರಮಾಣ ಪತ್ರವಿಲ್ಲದೇ ಯಾವುದೇ ಶಾಲೆ ಐಸ್‌ಎಸ್‌ಇ ಪಠ್ಯ ಕ್ರಮದಲ್ಲಿ ಬೋಧಿಸುವ ಹಾಗಿಲ್ಲ ಎಂದು ಸಿಐಸಿಎಸ್‌ಇ ಮುಖ್ಯಸ್ಥ, ಡಾ. ಜೋಸ್ ಐಕರ ಪ್ರತಿಕ್ರಿಯೆ ನೀಡಿದ್ದಾರೆ.[ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]
ಸಿಐಎಸ್‌ಸಿಇ ನಿಮಮವನ್ನು ಉಲ್ಲಂಘಿಸಿದ ಜೊತೆಗೆ ವಿಬ್‌ಗಯಾರ್ ಶಾಲೆ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮವನ್ನು ಸಹ ಉಲ್ಲಂಘಿಸಿದೆ.
2006-07ರಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಶಾಲೆಯಲ್ಲಿ ಕನ್ನಡ ಮಾಧ್ಯಮಲ್ಲಿ ಶಿಕ್ಷಣ ನೀಡುತ್ತೇವೆ ಎಂದು ಬಿಇಒರಿಂದ ಅನುಮತಿ ಪಡೆದಿದ್ದ ಆಡಳಿತ ಮಂಡಳಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡದೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಶಾಲೆ ನೋಂದಣಿಯಾಗಿದ್ದರೂ ಕನ್ನಡವನ್ನು ಮಾಧ್ಯಮ ಬಿಡಿ ಕನ್ನಡ ಭಾಷೆಯನ್ನು ಬೋಧನೆಯಲ್ಲಿ ಸೇರಿಸದೇ ನಿಯಮವನ್ನು ಉಲ್ಲಂಘನೆ ಮಾಡಿರುವ ಅಂಶವು ಇದೀಗ ಬೆಳಕಿಗೆ ಬಂದಿದೆ.
ಶಾಲೆಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಕವಿತಾ ಸಾಹಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಲೆ 2007ರಿಂದ ಬೆಂಗಳೂರಿನಲ್ಲಿ ಕಾರ್ಯಾರಂಭಗೊಂಡಿದ್ದು, ಮೂರು ಅಥವಾ ನಾಲ್ಕು ವರ್ಷದ ಹಿಂದೆ ಐಸಿಎಸ್‌ಇ ಸದಸ್ಯತ್ವವನ್ನು ಪಡೆದಿದ್ದೇವೆ ಎಂದು ಹೇಳಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
SSLC ಪರೀಕ್ಷೆಗೆ ಹಾಜರಾತಿ ಶಾಕ್: ನಿಯಮ ಉಲ್ಲಂಘಿಸಿದ 35,000 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
Udupi: ಉಡುಪಿ ಜಿಲ್ಲೆಗೆ 'ಸಂಪೂರ್ಣ ಸಾಕ್ಷರತಾ' ಸ್ಥಾನಮಾನ, ಶೀಘ್ರವೇ ಘೋಷಣೆ -
NHAI ನಿಂದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ: ತಿಂಗಳಿಗೆ ₹20,000 ಸ್ಟೈಪೆಂಡ್, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ










Click it and Unblock the Notifications