ಪೊಲೀಸರ ಬಲೆಗೆ ಬಿದ್ದ ಶಸ್ತ್ರಾಸ್ತ್ರ ಮಾರಾಟಗಾರ

ಬೆಂಗಳೂರು, ಸೆ. 9: ಕೊಲೆ ಆರೋಪವಿದ್ದರೂ ಜಾಮೀನು ಪಡೆದು ಹೊರಗಿದ್ದ ಮಾಜಿ ಸೈನಿಕನನ್ನು ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಬಂಧಿಸಲಾಗಿದೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ ಮಾಡಲು ಯತ್ನಿಸುತ್ತಿದ್ದ ಉತ್ತರಪ್ರದೇಶ ಮೂಲದ ಪಂಕಜ್‌ರಾಯ್‌(41) ಎಂಬಾತನನ್ನು ಬಂಧಿಸಿ ಒಂದು ಪಿಸ್ತೂಲ್‌ ಸೇರಿದಂತೆ 16 ಮದ್ದು ಗುಂಡುಗಳನ್ನು ಬೆಂಗಳೂರು ಕಲಾಸಿಪಾಳ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.(ಅತಿಯಾದ ಮೊಬೈಲ್‌ ಮಾತು, ಪ್ರಾಣಕ್ಕೆ ತಂದಿತು ಕುತ್ತು)

police

ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ ಮಂಡಲ ಜಿಲ್ಲೆ ಸುಲ್ತಾನ್‌ಪುರದ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಗೋರಕ್‌ಪುರದ ನಿವಾಸಿ ರಾಕೇಶ್‌ ಎಂಬಾತನಿಂದ ಆಯುಧಗಳನ್ನು ಪಡೆದು ಬೆಂಗಳೂರಲ್ಲಿ ಮಾರಲು ಯತ್ನಿಸುತ್ತಿದ್ದ. ಇದಕ್ಕೆ ಷಫಿ ಎಂಬ ಮಧ್ಯವರ್ತಿಯ ನೆರವನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2011ರಲ್ಲಿ ಪಂಕಜ್‌ರಾಯ್‌ನನ್ನು ಬಂಧಿಸಿದ್ದ ಬಾಗಲೂರು ಪೊಲೀಸರು ಆತನಿಂದ 6 ವಿವಿಧ ಮಾದರಿ ಆಯುಧ ವಶಪಡಿಸಿಕೊಂಡಿದ್ದರು. ಮುಂಬೈ ಉದ್ಯಮಿ ಅಪರಾಜಿತ್‌ ಎಂಬುವರ ಬಳಿ ಗನ್‌ ಮ್ಯಾನ್‌ ಆಗಿ ಕೆಲಸ ಮಾಡಿಕೊಂಡಿದ್ದ ಪಂಕಜ್‌ರಾಯ್‌ ಬಸಕ್‌ ಮತ್ತು ಜಸ್ವಾಲ್‌ ಅವರೊಂದಿಗೆ ಸೇರಿ ಆಚಾರ್ಯ ಎಂಬುವರನ್ನು 2001 ರಲ್ಲಿ ಹತ್ಯೆ ಮಾಡಿದ್ದ. ಪ್ರಕರಣಕ್ಕೆ ಸಂಬಧಿಸಿ ಆರೋಪಿಯನ್ನು ಬಂಧಿಸಲಾಗಿತ್ತು.

ಆದರೆ ಸುಪ್ರಿಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಗಿದ್ದ. ಇದೀಗ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಮತ್ತೆ ಜೈಲು ಸೇರಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+