ಬೆಂಗಳೂರಿಗೆ ಬಿಡದ ಮಳೆ ಕಾಟ, ಹುಷಾರು ಓಡಾಟ

ಬೆಂಗಳೂರು, ಅ.25: ಬೆಂಗಳೂರಿನಲ್ಲಿ ಶನಿವಾರ ಸಂಜೆ ವರುಣದೇವ ಮತ್ತೆ ಆರ್ಭಟಿಸಿದ್ದಾನೆ. ದೀಪಾವಳಿ ಪ್ರಯುಕ್ತ ಕೊಂಚ ಬಿಡುವು ನೀಡಿದ್ದ ಮಳೆ ಶನಿವಾರ ಸಂಜೆ ನಗರದ ಜನರ ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿದೆ.

ನಗರದ ಹಲವಡೆ ಶನಿವಾರ ಸಂಜೆ ಜೋರಾಗಿ ಮಳೆ ಸುರಿದಿದ್ದು ನಾಗರಿಕರು ಅವಸ್ಥೆ ಪಡುವಂತಾಯಿತು. ಜಯನಗರ, ಬಸವನಗುಡಿ. ಪದ್ಮನಾಭನಗರ, ವಿವಿಪುರ, ಕೆ.ಆರ್.ಮಾರುಕಟ್ಟೆ ಭಾಗದಲ್ಲಿ ವ್ಯಾಪಕ ಮಳೆ ಸುರಿದಿದೆ.[ಬೆಂಗಳೂರಿನಲ್ಲಿ ಮಳೆ, ಬಿಡಿಎಯಿಂದ ಸಹಾಯವಾಣಿ]

rain

ಸಂಜೆ ನಾಲ್ಕು ಗಂಟೆಗೆ ಶುರುವಾದ ಮಳೆ ನಿರಂತರವಾಗಿ 5.30ರ ತನಕ ಸುರಿಯಿತು. ಕೊಂಚ ಬಿಡುವು ನೀಡಿದ ಮಳೆರಾಯ ಮತ್ತೆ ಆರ್ಭಟ ಮುಂದುವರಿಸಿದ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಇನ್ನು ಮೂರು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರವೇ ಮುನ್ನೆಚ್ಚರಿಕೆ ನೀಡಿತ್ತು.[ಗೀತಾಲಕ್ಷ್ಮೀ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ]

ಯಲಹಂಕ, ಯಶವಂತಪುರ, ಶಾಂತಿನಗರ, ಬಿಇಎಲ್, ಜಾಲಹಳ್ಳಿ, ಗಂಗಮ್ಮನ ಗುಡಿ ಮತ್ತಿತರ ಕಡೆಯೂ ಗುಡುಗು ಸಹಿತ ಮಳೆ ಬೀಳುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲೂ ಮಳೆ ಜೋರಾಗಿದೆ. ಲಕ್ಮೀದೇವಿ ನಗರದ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಆಯುಕ್ತರು ಕಾರ್ಯ ನಿರತರಾಗಿದ್ದು ಮಳೆ ಹಾನಿ ಮಾಹಿತಿ ಪಡೆಯುತ್ತಿದ್ದಾರೆ.

ಅಪಾಯಕ್ಕೆ ಸಿಲುಕಿದ್ದರೆ ಸಹಾಯವಾಣಿ 103ಕ್ಕೆ ಕರೆ ಮಾಡಬಹುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

rain
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+