ಬಿಡಿಎ ಸೈಟು 23 ಲಕ್ಷ ರೂ- ಖರೀದಿ ಆಸೆ ಬಿಟ್ಬಿಡಿ!

ಅದನ್ನು ಕೇಳಿ, ಈ ಬಾರಿಯಾದರೂ ನೀವೊಂದು ನಿವೇಶನ ಖರೀದಿಸಬೇಕು ಅಂದುಕೊಂಡಿದ್ದರೆ ಅದು ಅಸಾಧ್ಯದ ಮಾತಾದೀತು. ಏಕೆಂದರೆ BDA ಸೈಟು ಕೃಗೆಟುಕದಷ್ಟು ದುಬಾರಿಯಾಗಿದೆ.
ಉದ್ದೇಶಿತ Nadaprabhu Kempe Gowda Layoutನಲ್ಲಿ ಸೈಟುಗಳ ದರವನ್ನು 200-600% ನಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
ಮಾಗಡಿ ರಸ್ತೆಯಲ್ಲಿ ಈ ಹೊಸ ಬಡಾವಣೆ ನಿರ್ಮಾಣವಾಗಲಿದೆ. ಇಲ್ಲಿ 30x40 ಸೈಟ್ ಬೆಲೆ ಅಂದಾಜು ಕೇವಲ 23 ಲಕ್ಷ ರೂ. ಆಗಲಿದೆ. ಅದೇ ಅರ್ಕಾವತಿ ಬಡಾವಣೆಯಲ್ಲಿ 2004 ರಲ್ಲಿ ಇದೇ ಅಳತೆಯ ನಿವೇಶನದ ಬೆಲೆ 7.5 ಲಕ್ಷ ರೂ. ನಷ್ಟಿತ್ತು.
ಇನ್ನು ಅಕಸ್ಮಾತ್ ನೀವೇನಾದರೂ 50x80 ವಿಸ್ತೀರ್ಣದ ನಿವೇಶನ ಖರೀದಿಸಬಯಸಿದರೆ ಒಂದು ಕೋಟಿ ರೂ. ಇಡಿಗಂಟು ಹೊತ್ತಯ್ಯಬೇಕಾಗುತ್ತದೆ. ಇದು ಏಳುಪಟ್ಟು (ಈ ಹಿಂದೆ 15 ಲಕ್ಷ ರೂ ಇತ್ತು) ದುಬಾರಿಯಾಗಿದೆ. ಗಮನಿಸಿ, ಈ ಜಾಗದಲ್ಲಿ ಖಾಸಗಿ ಸೈಟುಗಳು ಚದರಡಿಗೆ 3,000-4,000 ರೂ. ನಷ್ಟಿದೆ.
ಬಿಡಿಎ ಆಯುಕ್ತ ಟಿ ಶ್ಯಾಂ ಭಟ್ ಅವರು ಹೇಳುವಂತೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 30x40 ನಿವೇಶನದ ಬೆಲೆಯನ್ನು ಚದರಡಿಗೆ 1,750 ರೂ. ನಿಂದ 1,900 ರೂ.ಗೆ ನಿಗದಿಯಾಗುವ ಅಂದಾಜಿದೆ. ಹಾಗೆಯೇ, 50x80 site ಗೆ 2,200-2,400 ರೂಪಾಯಿ ತಗುಲಲಿದೆ. ಬಿಡಿಎ ನಿವೇಶನ ಖರೀದಿಸಬೇಕೆನ್ನುವವರಿಗೆ ಅದು ದುಃಸ್ವಪ್ನವೇ ಸರಿ. ಗಮನಿಸಿ, 2 ದಶಕಗಳಿಂದ ಸೀನಿಯಾರಿಟಿ ಮೇಲೆ ಜನ ಈ ನಿವೇಶನಗಳಿಗಾಗಿ ಕಾದುಕುಳಿತಿದ್ದಾರೆ. 5 ಬಾರಿ ಪ್ರಯತ್ನಿಸಿದವರಿಗೆ ಈ ಬಾರಿ ಈ ದುಬಾರಿ ನಿವೇಶನ ಪ್ರಾಪ್ತಿಯಾಗುವ ಸಾಧ್ಯತೆಯಿದೆ.
ಬಿಡಿಎ ಆಯುಕ್ತ ಟಿ ಶ್ಯಾಂ ಭಟ್ ಅವರು ಹೇಳುವಂತೆ ಪ್ರಸ್ತಾವಿತ ಕೆಂಪೇಗೌಡ ಬಡಾವಣೆಯಲ್ಲಿ 5,000 ಸೈಟುಗಳು ಲಭ್ಯ. ಅದರಲ್ಲಿ 2,500 ಸಾಮಾನ್ಯ ವರ್ಗಕ್ಕೆ ವಿತರಿಸಿದರೆ ಉಳಿದವು ಎಸ್ಸಿ/ಎಸ್ಟಿ, ಮಾಜಿ ಯೋಧರು ಮತ್ತಿತರ ವರ್ಗಗಗಳಿಗೆ ವರ್ಗೀಕೃತವಾಗಿರುತ್ತವೆ.
10 ವರ್ಷಗಳ ಬಳಿಕ BDA ನಿವೇಶನ ಹಂಚಿಕೆಗೆ ಮುಂದಾಗಿದೆ.


Click it and Unblock the Notifications
