ಎಟಿಎಂ ಹಲ್ಲೆ : ಜ್ಯೋತಿ ಉದಯ್ ಆರೋಗ್ಯದಲ್ಲಿ ಚೇತರಿಕೆ

ಶುಕ್ರವಾರ ಎಟಿಎಂ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡ ಜ್ಯೋತಿ ಉದಯ್ ಅವರೊಂದಿಗೆ ಡಾ.ವೆಂಕಟರಮಣ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಯೋತಿ ಉದಯ್ ತಾವು ಮನಗೆ ಹೋಗಲು ಕಾಯುತ್ತಿರುವುದಾಗಿ ತಿಳಿಸಿದರು.
ಜ್ಯೋತಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಡಾ.ವೆಂಕಟರಮಣ ಅವರು, ವೈದ್ಯರ ನಿರೀಕ್ಷೆಗೂ ಮೊದಲೇ ಜ್ಯೋತಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎರಡು ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. (ಎಟಿಎಂ ಪ್ರಕರಣ : ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ)
ಗುರುವಾರ ಐಸಿಯುನಿಂದ ಜ್ಯೋತಿ ಅವರನ್ನು ಸ್ಪಷಲ್ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ. ಪಾರ್ಶುವಾಯುಗೆ ತುತ್ತಾಗಿದ್ದ ಜ್ಯೋತಿ ಉದಯ್ ಅವರ ಬಲಭಾಗದ ಕೈಕಾಲುಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಶೀಘ್ರವೇ ಅವರು ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ಒಂದು ವಾರದಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. (ಹಲ್ಲೆಗೊಳಗಾದ ಜ್ಯೋತಿ ಉದಯ್ ಆರೋಗ್ಯದಲ್ಲಿ ಸುಧಾರಣೆ)
ಮಗಳನ್ನು ನೋಡುವ ಆಸೆ : ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಯೋತಿ ಅವರ ಪತಿ ಉದಯ್ ಜ್ಯೋತಿ ಅವರಿಗೆ ಮಗಳನ್ನು ನೋಡುವ ಆಸೆಯಾಗಿದೆ. ನ.19ರಂದು ಅವರ ಮೇಲೆ ಹಲ್ಲೆ ನಡೆದ ನಂತರ ಅವರು ಮಗಳ ಮುಖವನ್ನು ನೋಡಿಲ್ಲ. ಮಗಳನ್ನು ನೋಡಬೇಕು ಎಂದು ಪದೇ ಪದೇ ಹೇಳುತ್ತಿದ್ದಾರೆ ಎಂದು ತಿಳಿಸಿದರು. (ಎಟಿಎಂ ಹಲ್ಲೆ : ಕೇವಲ 500 ರೂ.ಗೆ ಮೊಬೈಲ್ ಮಾರಾಟ)
ನ.19ರ ಮಂಗಳವಾರ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮುಂಜಾನೆ 7 ಗಂಟೆ ಸುಮಾರಿಗೆ ಜ್ಯೋತಿ ಉದಯ್ ಅವರ ಮೇಲೆ ದುಷ್ಕರ್ಮಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಜ್ಯೋತಿ ಉದಯ್ ಅವರ ತಲೆ ಮತ್ತು ಮುಖಕ್ಕೆ ಗಾಯಗಳಾಗಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications