BAMUL: ಪ್ರತಿ ಲೀಟರ್ ಹಾಲಿನ ಸಹಾಯಧನ ರೂ.1.50 ಇಳಿಸಿ ಆದೇಶ, ಕಾರಣವೇನು?

ಬೆಂಗಳೂರು,ಜೂನ್‌ 02: ರಾಜ್ಯದಲ್ಲಿ ಇನ್ನೇನು ಮಳೆಗಾಲ ಆರಂಭವಾಗಲಿದ್ದು, ರಾಸುಗಳುಗೆ ಸಮೃದ್ಧ ಆಹಾರ ಲಭ್ಯತೆ ಸಾಧ್ಯವಾಗಲಿದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (BAMUL) ಹಾಲಿನ ಪ್ರೋತ್ಸಾಹ ಧನ ಇಳಿಕೆ ಮಾಡಿದ ಆದೇಶ ಹೊರಡಿಸಿದೆ.

ಈ ಹಿಂದೆ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (BAMUL)ವು ಹಾಲಿನ ಪ್ರೋತ್ಸಾಹ ಧನ ಲೀಟರ್​ಗೆ 1.50 ರೂಪಾಯಿ ದಷ್ಟು ಕಡಿತಗೊಳಿಸಿದೆ. ಈ ಹಿಂದೆ ಬಮೂಲ್ ಬೇಸಿಗೆ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು.

BAMUL Orders Issued To Reduction Rs 1.50 For Every Litre Milk

ಅದಾದ ಬಳಿಕ ಏಪ್ರಿಲ್ 1ರಿಂದ ಮೇ 31 ರವರೆಗೆ ವಿಶೇಷ ಪ್ರೋತ್ಸಾಹ ಧನ ನೀಡಿದ ಆದೇಶ ಹೊರಡಿಸಿತ್ತು. ಕಾರಣ ಬೇಸಿಗೆ ಹಿನ್ನೆಲೆ ಹಸಿರು ಮೇವಿನ ಕೊರತೆ, ಹೈನು ಕಡಿಮೆಯಾಗುವ ಉದ್ದೇಶದಿಂದಗಿ ರೈತರಿಗೆ ನೆರವಾಗಿತ್ತು. ಇದೀಗ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಅಧಿಕವಾಗಿದೆ.

ಅಷ್ಟೇ ಅಲ್ಲದೇ ಎಲ್ಲೆಡೆ ಮಳೆ ಸುರಿಯುತ್ತಿರುವ ಕಾರಣ ರಾಸುಗಳಿಗೆ ಹಸಿರು ಮೇವಿನ ಸಮಸ್ಯೆ ಬಗೆಹರಿದಿದೆ. ಹಾಲಿನ ಉತ್ಪಾದನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರೋತ್ಸಾಹಧನವನ್ನು ಕಡಿತಗೊಳಿಸಲಾಗಿದೆ ಎಂದು ಬಮೂಲ್ ತನ್ನ ಆದೇಶದಲ್ಲಿ ತಿಳಿಸಿದೆ.

ಬೇಸಿಗೆ ಆರಂಭಿಕ ಎರಡು ತಿಂಗಳಲ್ಲಿ ಪ್ರತಿದಿನ ಬಮೂಲ್ ವ್ಯಾಪ್ತಿಯಲ್ಲಿ ಸುಮಾರು 13 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು ಹಸಿರು ಮೇವಿನ ಕೊರತೆ ಉಂಟಾಗಿತ್ತು. ಬೇಸಿಗೆ ಅಂತ್ಯಕ್ಕೆ ಮಳೆ ಹೆಚ್ಚಾಗಿದೆ. ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಸದ್ಯ ಹಸಿರು ಮೇವಿನ ಲಭ್ಯತೆ ಹೆಚ್ಚಾಗಿದ್ದು, ಮೇವಿನ ಸಮಸ್ಯೆ ಬಗೆಹರಿದಿದೆ.

ಈ ಮೇಲಿನ ಎಲ್ಲ ಕಾರಣಗಳಿಂದ ಇದೀಗ ಹಾಲು ಉತ್ಪಾದನೆ 16 ಲಕ್ಷ ಲೀಟರ್​ಗೆ ತಲುಪಿದೆ. ಈ ಮೂಲಕ ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಏರಿಕೆ ಅಗಿದೆ. ಹೀಗಾಗಿ ಜಿಲ್ಲಾ ಹಾಲು ಒಕ್ಕೂಟ ಲೀಟರ್​​ಗೆ 1.50 ರೂ. ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+