ಬಾಲ್ಡ್ ವಿನ್ ಕನ್ನಡ ಶಾಲೆಗೆ ಬೀಗ; ಕನ್ನಡ ಶಾಲೆಗಳಿಗಿಲ್ಲ ಉಳಿಗಾಲ?

ವಾರ್ಷಿಕವಾಗಿ 110 ಕೋಟಿ ರು. ಆದಾಯವಿರುವ ಬಾಲ್ಡ್ ವಿನ್ ಶಿಕ್ಷಣ ಸಂಸ್ಥೆಗೆ, ಕನ್ನಡ ಶಾಲೆಯ ನಿರ್ವಹಣೆಗೆ ವಾರ್ಷಿಕವಾಗಿ 45 ಲಕ್ಷ ರು. ಭರಿಸುವುದು ಕಷ್ಟವಾಗುತ್ತಿದೆಯಂತೆ. ಹಾಗಾಗಿಯೇ ಶಾಲೆ ಮುಚ್ಚಲು ಮುಂದಾಗಿದೆ ಸಂಸ್ಥೆ.

ಬೆಂಗಳೂರು, ಏಪ್ರಿಲ್ 6: ನಗರದ ಆನೇಪಾಳ್ಯದಲ್ಲಿರುವ ಪ್ರತಿಷ್ಠಿತ ಬಾಲ್ಡ್ ವಿನ್ ಮೆಥೋಡಿಸ್ಟ್ ಕನ್ನಡ ಶಾಲೆಗೆ ಶೀಘ್ರದಲ್ಲೇ ಬೀಗ ಜಡಿಯಲಾಗುತ್ತದೆ ಎಂಬ ಸುದ್ದಿ ಹಲವಾರು ಕನ್ನಡಿಗರಿಗೆ ನೋವುಂಟು ಮಾಡಿದೆ.

ಬಾಲ್ಡ್ ವಿನ್ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವ ಈ ಶಾಲೆಯ ನಿರ್ವಹಣೆಗೆ ವಾರ್ಷಿಕವಾಗಿ 45 ಲಕ್ಷ ರು. ಖರ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಮುಚ್ಚಲು ಶಿಕ್ಷಣ ಸಂಸ್ಥೆ ನಿರ್ಧರಿಸಿದೆ ಎಂದು ಕೆಲ ಟಿವಿ ವಾಹಿನಿಗಳಲ್ಲಿ ಹರಿದಾಡಿರುವ ಸುದ್ದಿಯೂ ಹರಿದಾಡಿದೆ.

Baldwin Kannada School going to shut down shortly

ಅಂದಹಾಗೆ, ಈ ಶಾಲೆಯು ಇತರ ಕೆಲ ಖಾಸಗಿ ಶಾಲೆಗಳಂತೆ ಆದಾಯದ ಉದ್ದೇಶಕ್ಕಾಗಿಯೇ ಆರಂಭವಾದ ಶಾಲೆಯಲ್ಲ. ಕೊಳೆಗೇರಿ ಮಕ್ಕಳ ಕಲ್ಯಾಣಕ್ಕಾಗಿ ಈ ಶಾಲೆಯನ್ನು ಶತಮಾನದ ಹಿಂದೆಯೇ ಆರಂಭಿಸಲಾಗಿತ್ತು.

ಹೀಗೆ, ಘನ ಉದ್ದೇಶಕ್ಕಾಗಿ ಶತಮಾನದ ಹಿಂದೆಯೇ ಆರಂಭವಾದ ಶಾಲೆಯಲ್ಲಿ ಕಲಿತ ಅದೆಷ್ಟೋ ಮಕ್ಕಳು ಇಂದು ಸಾಧನೆಯ ಶಿಖರವೇರಿದ್ದಾರೆ. ಶಾಲೆ ಮುಚ್ಚುವ ಸುದ್ದಿ ಹರಿದಾಡಿರುವುದು ಅವರ ಗಮನಕ್ಕೂ ಬಂದಿದ್ದು ಶಾಲೆ ಮುಚ್ಚದಂತೆ ಅದೆಷ್ಟೋ ಹಳೆಯ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಅಸಲಿಗೆ, ಬಾಲ್ಡ್ ವಿನ್ ಶಿಕ್ಷಣ ಸಂಸ್ಥೆಯು ಬಾಲ್ಡ್ ವಿನ್ ಹೆಸರಿನಲ್ಲಿ ಅನೇಕ ಶೈಕ್ಷಣಿಕ ಶಾಲಾ ಕಾಲೇಜುಗಳನ್ನು ಹೊಂದಿದೆ. ವಾರ್ಷಿಕವಾಗಿ ಈ ಸಂಸ್ಥೆಗೆ 110 ಕೋಟಿ ರು. ಆದಾಯವಿದೆ. ಆದರೂ, ಕೇವಲ ವಾರ್ಷಿಕ 45 ಲಕ್ಷ ರು. ಹೊರೆಯಾಗುತ್ತದೆ ಎಂಬ ಕಾರಣಕ್ಕಾಗಿ ಕನ್ನಡ ಶಾಲೆಯೊಂದನ್ನು ಮುಚ್ಚಲು ಹೊರಟಿರುವುದು ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರಣವೇನೇ ಇರಲಿ, ಈಗಾಗಲೇ ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿರುವ ಈ ಹೊತ್ತಿನಲ್ಲಿ ಮತ್ತೊಂದು ಕನ್ನಡ ಶಾಲೆಗೆ ಬೀಗ ಬೀಳುತ್ತಿರುವುದು ವಿಪರ್ಯಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+