ಬೆಂಗಳೂರು: ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮೆಟ್ರೋ ಮುಂದಿನ ಮಾರ್ಚ್‌ ವೇಳೆಗೆ ಸಿದ್ಧ

ಬೆಂಗಳೂರು, ಅಕ್ಟೋಬರ್‌ 14: ಒಂದನೇ ಹಂತದ ಮೆಟ್ರೋ ಮಾರ್ಗವನ್ನು ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ (15 ಕಿಮೀ) ವಿಸ್ತರಿಸುವ ಯೋಜನೆಯು ಮಾರ್ಚ್ 2023ರ ವೇಳೆಗೆ ಕಾರ್ಯಾರಂಭ ಮಾಡಬಹುದೆಂದು ಬಿಎಂಆರ್‌ಸಿಎಲ್‌ ಸುಳಿವು ನೀಡಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮತ್ತು ನಿರ್ದೇಶಕ (ಆರ್‌ಎಸ್‌ಇ ಮತ್ತು ಒ&ಎಂ) ಎನ್‌.ಎಂ. ಧೋಕ್ ಅವರು ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳವರೆಗಿನ ಟ್ರ್ಯಾಕ್ ಮತ್ತು ಮೂರನೇ ರೈಲು ವ್ಯವಸ್ಥೆಗಳ ಟ್ರಾಲಿ ತಪಾಸಣೆ ನಡೆಸಿದ ಬಳಿಕ ಹೊಸ ಗಡುವನ್ನು ಘೋಷಿಸಿದರು.

ಬೈಯ್ಯಪ್ಪನಹಳ್ಳಿ ಡಿಪೋದಿಂದ ವೈಟ್‌ಫೀಲ್ಡ್ ಡಿಪೋಗೆ ಮೆಟ್ರೋ ರೈಲು ಬೋಗಿಗಳನ್ನು ಸಾಗಿಸಲಾಯಿತು. ಅಕ್ಟೋಬರ್ 25 ರಿಂದ ವೈಟ್‌ಫೀಲ್ಡ್-ಗರುಡಾಚಾರ್ ಪಾಳ್ಯ ಸ್ಟ್ರೆಚ್‌ನಲ್ಲಿ ಸುಮಾರು 7.5 ಕಿ.ಮೀ ಅಳತೆಯ ಪ್ರಾಯೋಗಿಕ ರನ್‌ಗಳು ಪ್ರಾರಂಭವಾಗಲಿವೆ. ಒಂದು ಅಥವಾ ಎರಡು ದಿನ ವಿಳಂಬವಾಗಬಹುದು. ಆದರೆ ತಿಂಗಳಾಂತ್ಯದೊಳಗೆ ಪ್ರಾಯೋಗಿಕ ಚಾಲನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: Baiyyappanahalli to Whitefield Metro ready by March 2023

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ದೂರಸಂಪರ್ಕ, ಎಳೆತ ಮತ್ತು ಇತರ ಮೂಲಸೌಕರ್ಯಗಳನ್ನು ಪರಿಶೀಲಿಸುತ್ತದೆ. ಇನ್ನುಳಿದ ಮಾರ್ಗದ ಕಾಮಗಾರಿ ಅದರಲ್ಲೂ ಕೆಆರ್ ಪುರಂನಲ್ಲಿ ಬಾಕಿ ಉಳಿದಿರುವ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿನ್ ಫ್ಯಾಕ್ಟರಿ ಮತ್ತು ಕೆಆರ್ ಪುರಂ ನಿಲ್ದಾಣಗಳ ಬಳಿ ರೈಲ್ವೆ ಹಳಿ ಮೇಲೆ ವೆಬ್ ಗಿರ್ಡರ್ ಅನ್ನು ಪ್ರಾರಂಭಿಸಬೇಕು. ಕಾಮಗಾರಿಯನ್ನು ವೇಗಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪ್ರಾಯೋಗಿಕವಾಗಿ ಸಮಾನಾಂತರವಾಗಿ ಪೂರ್ಣಗೊಳಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Bengaluru: Baiyyappanahalli to Whitefield Metro ready by March 2023

ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣಕ್ಕೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ಪರ್ವೇಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫೆಬ್ರವರಿ ಮೊದಲ ವಾರದೊಳಗೆ ಮೆಟ್ರೋ ಮಾರ್ಗದ ಒಟ್ಟಾರೆ ಸುರಕ್ಷತೆಯನ್ನು ಪರಿಶೀಲಿಸಲು ರೈಲ್ವೆ ಸುರಕ್ಷತಾ ಆಯುಕ್ತರನ್ನು (ಸಿಆರ್‌ಎಸ್) ಆಹ್ವಾನಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಎಲ್ಲವೂ ಸುಸೂತ್ರವಾಗಿ ನಡೆದರೆ ಮಾರ್ಚ್ ವೇಳೆಗೆ ಮೆಟ್ರೋ ಮಾರ್ಗ ಉದ್ಘಾಟನೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+