• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವ ಅಮ್ಮಂದಿರ ಕ್ಯಾಟ್ ವಾಕ್

|

ಬೆಂಗಳೂರು, ಫೆಬ್ರವರಿ 24 : ಪ್ರತಿಯೊಂದು ಆಸ್ಪತ್ರೆಯಲ್ಲೂ ಗರ್ಭಿಣಿಯರಿಗೆ ನಿಯಮಿತ ಪರೀಕ್ಷೆಗಾಗಿ ವೈದ್ಯರಿಗೆ ಕಾಯುವುದು ಸಾಮಾನ್ಯ ದೃಶ್ಯ. ಆದರೆ ಶನಿವಾರ ಬರ್ಥ್ ರೈಟ್ ಬೈ ರೈನ್ ಬೋ ಹಾಸ್ಪಿಟಲ್ ನಲ್ಲಿ ತಾಯ್ತನದ ನಿರೀಕ್ಷೆಯಲ್ಲಿದ್ದ ನೂರಾರು ಗರ್ಭಿಣಿಯರಿಗೆ ವಿಭಿನ್ನ ಅನುಭವ ಎದುರಾಯಿತು.

ಆಸ್ಪತ್ರೆ ಆಯೋಜಿಸಿದ್ದ ಅಧಿಕೃತ ಸೀಮಂತ ಕಾರ್ಯಕ್ರಮದಲ್ಲಿ ಅವರಿಗೆ ವಿಶೇಷ ಆತಿಥ್ಯ ನೀಡಲಾಯಿತು. ಅಲ್ಲದೆ ತಾಯ್ತನದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಸಾಂಪ್ರದಾಯಿಕ ದಿರಿಸು ಧರಿಸಿ ರಾಂಪ್ ಮೇಲೆ ನಡೆಯಲೂ ಅವಕಾಶ ಕಲ್ಪಿಸಲಾಯಿತು. ನಂತರ ಮ್ಯೂಸಿಕ್ ಥೆರಪಿ ತರಗತಿಗಳು ಮತ್ತು ರುಚಿಕರ ಆಹಾರ ಅವರಿಗೆ ಸಿದ್ಧಪಡಿಸಲಾಗಿತ್ತು. ಗರ್ಭಿಣಿಯರಿಗೆ ಮಕ್ಕಳ ಸುರಕ್ಷತೆ ಕುರಿತು ಸಲಹೆಗಳನ್ನು ನೀಡಲಾಯಿತು ಮತ್ತು ಅವರೆಲ್ಲರಿಗೂ ವಿಶೇಷ ಉಡುಗೊರೆ ನೀಡಲಾಯಿತು.

ಗರ್ಭಿಣಿಯರಿಗೆ 'ಮಾತೃಪೂರ್ಣ' ಭಾಗ್ಯ ನೀಡಿದ ಸಿದ್ದರಾಮಯ್ಯ!

ಬರ್ಥ್ ರೈಟ್ ರೈನ್ ಬೋ ಆಸ್ಪತ್ರೆಯಲ್ಲಿ ಸೀಮಂತ

ಬರ್ಥ್ ರೈಟ್ ರೈನ್ ಬೋ ಆಸ್ಪತ್ರೆಯಲ್ಲಿ ಸೀಮಂತ

ಎಲ್ಲ ಮಹಿಳೆಯರಿಗೂ ತಾಯಿಯಾಗುವುದು ದೇವರ ಅಮೂಲ್ಯ ಉಡುಗೊರೆ. ಆದ್ದರಿಂದ ಬರ್ಥ್ ರೈಟ್ ಬೈ ರೈನ್ ಬೋ ಹಾಸ್ಪಿಟಲ್ ಈ ವಿನೂತನ ಸೀಮಂತ ಕಾರ್ಯಕ್ರಮ ಆಯೋಜಿಸಿ ತಾಯ್ತನದ ನಿರೀಕ್ಷೆಯಲ್ಲಿರುವ ಮಹಿಳೆಯರ ಜೊತೆ ಒಂದು ದಿನ ಸಂಭ್ರಮಿಸಿ ಅವರ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಿತ್ತು. ಈ ಉಪಕ್ರಮದಲ್ಲಿ ಅವರ ಹೆರಿಗೆ ಕುರಿತಾದ ಅವರಿಗೆ ಸೂಕ್ಷ್ಮ ಅನುಮಾನಗಳನ್ನೂ ಆಸ್ಪತ್ರೆಯ ಪ್ರಸೂತಿ ತಜ್ಞರೊಂದಿಗೆ ಚರ್ಚಿಸುವ ಮೂಲಕ ಪರಿಹರಿಸಿತು.

ಮಗು ಹುಟ್ಟಿದ ನಂತರ ತಾಯಿಯ ಕರ್ತವ್ಯ

ಮಗು ಹುಟ್ಟಿದ ನಂತರ ತಾಯಿಯ ಕರ್ತವ್ಯ

ಸ್ತನ್ಯಪಾನ ಕುರಿತು ಕೌನ್ಸೆಲ್ಲಿಂಗ್, ಮಮ್ಮಿ ಮೇಕೋವರ್ಸ್, ಫನ್ ಗೇಮ್ಸ್ ಮತ್ತು ಹೆರಿಗೆ ಕುರಿತು ಸಲಹೆಗಳು, ದಂಪತಿಗಳ ಫೋಟೋ ಸೆಷನ್ ಹಾಗೂ ದಂಪತಿಗಳಿಗೆ ವಿವಿಧ ಆಟಗಳನ್ನು ಆಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮ ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಸ್ತ್ರೀರೋಗ ತಜ್ಞರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸಿತು. ಅಲ್ಲದೆ ಅವರ ಆಸ್ಪತ್ರೆವಾಸದ ಸಂದರ್ಭದಲ್ಲಿ ಅವರ ನೆರವಿಗೆ ಬರುವ ಆರೈಕೆ ತಂಡವನ್ನೂ ಭೇಟಿ ಮಾಡಿದರು. ಕಾರ್ಯಕ್ರಮವು ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಆಸ್ಪತ್ರೆಯು ಮನೆಯಲ್ಲಿರುವ ಭಾವನೆಯನ್ನು ತಂದಿತು.

ಸಾಂಪ್ರದಾಯಿಕ ಫ್ಯಾಷನ್ ಶೋ

ಸಾಂಪ್ರದಾಯಿಕ ಫ್ಯಾಷನ್ ಶೋ

ಸಾಂಪ್ರದಾಯಿಕ ಫ್ಯಾಷನ್ ಶೋನಲ್ಲಿ ಭಾಗವಹಿಸಿದ ಮೂವರು ವಿಜೇತರಿಗೆ ಹೆರಿಗೆಯ ಸಂದರ್ಭದಲ್ಲಿ ಅವರ ಆಸ್ಪತ್ರೆವಾಸ ಉನ್ನತೀಕರಿಸುವ ಸೂಟ್ ರೂಂ ಪಡೆಯುವ ಅವಕಾಶ ಲಭಿಸಿತು.

ಮಾಧ್ಯಮದೊಂದಿಗೆ ಮಾತನಾಡಿದ ನೀಲಂ ಪಂಡಿತ ವಜಿರ್, `ಗರ್ಭಧಾರಣೆಯ ಸಂದರ್ಭದಲ್ಲಿ ಪೋಷಕರಿಂದ ದೂರವಿರುವುದು ಬಹಳ ಕಷ್ಟ. ಆದರೆ ರೈನ್ ಬೋ ಆಸ್ಪತ್ರೆಯ ಪ್ರೀತಿ ಮತ್ತು ಆರೈಕೆ ನನ್ನ ಜೀವನದ ಈ ಅತ್ಯಂತ ಪ್ರೀತಿಪಾತ್ರ ಸಮಯದಲ್ಲಿ ನನಗೆ ಆ ಖಾಲಿತನ ಕಡಿಮೆ ಮಾಡಿದೆ' ಎಂದರು.

ರೈನ್ ಬೋ ಆಸ್ಪತ್ರೆಯ ವೈದ್ಯರ ಕೆಲಸ ಶ್ಲಾಘನೀಯ

ರೈನ್ ಬೋ ಆಸ್ಪತ್ರೆಯ ವೈದ್ಯರ ಕೆಲಸ ಶ್ಲಾಘನೀಯ

`ನಾನು ಇದನ್ನು ಪ್ರದರ್ಶನ ಎಂದು ಭಾವಿಸಿಲ್ಲ. ಆದರೆ ಇದು ರೈನ್ ಬೋ ತಂಡದೊಂದಿಗೆ ಆನಂದದ ಅನುಭವವಾಗಿದೆ. ಮರೆಯಲಾಗದ ಕ್ಷಣಗಳ ಮೂಲಕ ಆನಂದಿಸಲು ಅವಕಾಶ ಕಲ್ಪಿಸಿದ ರೈನ್ ಬೋಗೆ ನನ್ನ ಕೃತಜ್ಞತೆಗಳು ಎಂದು ಮಾಧವಿ ಬಾಬು ಸಂತಸ ವ್ಯಕ್ತಪಡಿಸಿದರು.

ಮ್ಯೂಸಿಕ್ ಥೆರಪಿ

ಮ್ಯೂಸಿಕ್ ಥೆರಪಿ

ಮ್ಯೂಸಿಕ್ ಥೆರಪಿ ತರಗತಿಗಳು ಮತ್ತು ರುಚಿಕರ ಆಹಾರ ಅವರಿಗೆ ಸಿದ್ಧಪಡಿಸಲಾಗಿತ್ತು. ಗರ್ಭಿಣಿ ಸ್ತ್ರೀಯರಿಗೆ ಮಕ್ಕಳ ಸುರಕ್ಷತೆ ಕುರಿತು ಸಲಹೆಗಳನ್ನು ನೀಡಲಾಯಿತು ಮತ್ತು ಅವರೆಲ್ಲರಿಗೂ ವಿಶೇಷ ಉಡುಗೊರೆ ನೀಡಲಾಯಿತು.

ಕೆಲ ಮಹಿಳೆಯರಿಗೆ ಈ ಸೀಮಂತ ಕಾರ್ಯಕ್ರಮ ಅತ್ಯಂತ ವಿಶೇಷವಾಗಿತ್ತು. ಏಕೆಂದರೆ ಕೆಲವರಿಗೆ ಸೀಮಂತ ಆಚರಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಆಸ್ಪತ್ರೆಯೇ ಈ ಮಹಿಳೆಯರಿಗೆ ಸಂತೋಷಕರ, ಆರೋಗ್ಯಕರ ಹೆರಿಗೆಗೆ ಅವರನ್ನು ಸಜ್ಜುಗೊಳಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A different experience for the hundreds of expectant mothers at the Birth Right by Rainbow Hospital in Bengaluru.The women were treated to one of their gifts as they were part of the official baby shower organized by the hospital itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more