B-Khata Update: ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವರು
ಬೆಂಗಳೂರು, ಮೇ 14: ನಕ್ಷೆ, ಮಂಜೂರಾತಿ, ಭೂ ಪರಿವರ್ತನೆ ಇಲ್ಲದೇ ಕಂದಾಯ ನಿವೇಶನಗಳಲ್ಲಿ ಕಟ್ಟಡ ಕಟ್ಟಿಕೊಂಡವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ರೀತಿಯ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿ-ಖಾತಾ ನೀಡಿ ಸಕ್ರಮಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಹೊಸ ಅಪ್ಡೇಟ್ ನೀಡಿದ್ದಾರೆ.
ಈ ಹಿಂದೆ ಒಂದು ಬಿ-ಖಾತಾ ಪಡೆಯಲು ಒಂದು ಬಾರಿ ಅವಕಾಶ ನೀಡಲಾಗಿತ್ತು. ಇಂತಿಷ್ಟು ನಿಗದಿತ ಶುಲ್ಕ ಕಟ್ಟಿದರೆ ಬಿ-ಖಾತಾ ಪಡೆಯಬಹುದಾಗಿತ್ತು. ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇ 10 ರವರೆಗೆ ಬಿ ಖಾತೆ ಪಡೆದುಕೊಳ್ಳಲು ಮೊದಲು ಅನುಮತಿ ನಿಡಲಾಗಿತ್ತು. ಇದೀಗ ಅದನ್ನು ವಿಸ್ತರಣೆ ಮಾಡಲಾಗಿದೆ.

ಹೌದು, ಕರ್ನಾಟಕದಲ್ಲಿನ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಅನಧಿಕೃತ ನಿವೇಶನಗಳು ಬಿ. ಖಾತಾ ನೀಡುವ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ನಿಗದಿತ ಶುಲ್ಕ ಪಾವತಿಸಿ ಸೂಕ್ತ ಕಟ್ಟಡಗಳ ಮಾಲೀಕರು ಬಿ-ಖಾತಾ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರದ ಆಸ್ತಿಗಳಿಗೆ ಬಿ-ಖಾತೆ ನೀಡಲಾಗುತ್ತದೆ. ಇನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳನ್ನು ಅಪಾರ ಸಂಖ್ಯೆಯಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಹೀಗಾಗಿ ಅವುಗಳಿಗೆ ಇ-ಖಾತೆ ನೀಡಲಾಗುತ್ತದೆ. ಸದ್ಯ ಬಿ-ಖಾತೆ ನೀಡುವ ಅವಧಿ ವಿಸ್ತರಣೆ ಮಾಡುವ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ.

2 ಲಕ್ಷ ಬಿ-ಖಾತಾ ವಿತರಣೆ
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳು ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 30 ಲಕ್ಷಕ್ಕೂ ಹೆಚ್ಚಿನ ಅನಧಿಕೃತ ನಿವೇಶನ, ಕಟ್ಟಡಗಳ ಇವೆ ಎಂದು ಸರ್ಕಾರ ಅಂದಾಜು ಮಾಡಿದೆ. ಈಗಾಗಲೇ ನಾಗರಿಕ ಸಂಸ್ಥೆಗಳಿಗೆ ಒಳಪಡದ, ಭೂ ಪರಿವರ್ತನೆ ಮಾಡಿಕೊಳ್ಳದ ಸುಮಾರು 2 ಲಕ್ಷ ಕಟ್ಟಡ ನಿವೇಶನಗಳಿಗೆ ಬಿ-ಖಾತಾ ನೀಡಲಾಗಿದೆ. ಸದ್ಯ ಈವರೆಗೆ 10 ಲಕ್ಷ ಅರ್ಜಿಗಳು ಬಿ-ಖಾತೆ ನೀಡುವಂತೆ ಕೋರಿ ಸಲ್ಲಿಕೆ ಆಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಸರ್ಕಾರಿ ವ್ಯಾಪ್ತಿಯಲ್ಲಿ ಒಳಪಡದ ಆಸ್ತಿಗಳನ್ನು, ಕಟ್ಟಡಗಳನ್ನು ಖರೀದಿಸುವವರನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜಿಪಿಎ ಹಾಗೂ ಇತರ ಒಪ್ಪಂದ ಮಾಡಿಕೊಂಡು ಖರೀದಿಸಿರುವ ನಾಗರಿಕರಿಗೂ ಬಿ-ಖಾತಾ ವಿತರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಬಿ-ಖಾತಾ ವಿತರಣೆ ಆಗಸ್ಟ್ ಅಂತ್ಯದವರೆಗೆ ವಿತರಣೆ ಆಗಲಿದೆ.












Click it and Unblock the Notifications