Azim Premji: ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಗೆ ‘ನೋ’ ಎಂದ ವಿಪ್ರೋ ಸಂಸ್ಥಾಪಕ!
ಕರ್ನಾಟಕ ಐಟಿ ತವರು ಎಂಬ ಬಿರುದು ಪಡೆದಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಪ್ರಪಂಚದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದೆ. ಹತ್ತಾರು ಸಾವಿರ ಐಟಿ ಕಂಪನಿಗಳು ಇಲ್ಲೇ ಹುಟ್ಟಿದ್ದು, ಈಗಲೂ ಬೆಂಗಳೂರಿನ ಹೆಸರು ಜಗತ್ತಿನಾದ್ಯಂತ ರಾರಾಜಿಸುತ್ತಿದೆ. ಆದರೆ ಇಷ್ಟೆಲ್ಲಾ ಹೆಸರು ಮಾಡಿರುವ ನಮ್ಮ ಬೆಂಗಳೂರಿಗೆ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಂಡು ಸಮಸ್ಯೆ ಸರಿ ಮಾಡಲು ಒದ್ದಾಡುತ್ತಿದೆ ಕರ್ನಾಟಕ ರಾಜ್ಯ ಸರ್ಕಾರ. ಇಂತಹ ಸಮಯದಲ್ಲೇ ಟ್ರಾಫಿಕ್ ತಲೆನೋವು ಬಗೆಹರಿಸುವ ಪ್ರಯತ್ನ ಒಂದು ದಿಢೀರ್ ಫ್ಲಾಪ್ ಆಗಿದೆ...
ಹೌದು, ಬೆಂಗಳೂರಿನ ಯಾವುದೇ ಮೂಲೆಗೆ ಹೋದರೂ ಅಲ್ಲಿ ಟ್ರಾಫಿಕ್ ಜಾಮ್.. ಟ್ರಾಫಿಕ್ ಜಾಮ್.. ಅಂತಾ ಜನರು ಒದ್ದಾಡುತ್ತಿರುತ್ತಾರೆ. ಅದೇ ರೀತಿ ಬೆಂಗಳೂರಿನ ಮತ್ತೊಂದು ಬಹುಮುಖ್ಯ ಭಾಗದಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಬೆಂಗಳೂರು ಹೊರ ವರ್ತುಲ ರಸ್ತೆ ಕಾರಿಡಾರ್ ನಿರ್ಮಾಣ ಆಗುತ್ತಿದೆ. ಆದರೆ ಇಬ್ಬಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿಯೇ ಈ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಸರ್ಜಾಪುರದಲ್ಲಿ ವಿಪ್ರೋ ಕ್ಯಾಂಪಸ್ ಒಳಗೆ ಸಾರ್ವಜನಿಕರ ವಾಹನ ಓಡಾಟಕ್ಕೆ ಅವಕಾಶ ನೀಡಲು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು. ಈಗ ಅದಕ್ಕೆ ರೀಪ್ಲೇ ಕೊಟ್ಟಿದ್ದಾರೆ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಅವರು.

ಸಿದ್ದರಾಮಯ್ಯ ಮನವಿಗೆ ಒಪ್ಪದ ವಿಪ್ರೋ
ಅಂದಹಾಗೆ ಸೆಪ್ಟೆಂಬರ್ 19ಕ್ಕೆ ಅಜೀಂ ಪ್ರೇಮ್ ಜಿ ಅವರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು. ಇಬ್ಬಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ನಿಯಂತ್ರಣ ಮಾಡಲು ವಿಪ್ರೋ ಕ್ಯಾಂಪಸ್ ಒಳಗೆ ಸಾರ್ವಜನಿಕರ ವಾಹನ ಓಡಾಟಕ್ಕೆ ಅವಕಾಶ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದರು. ಖುದ್ದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಈ ಪತ್ರವನ್ನು ಬರೆದಿದ್ದು ಭಾರಿ ಗಮನ ಸೆಳೆದಿತ್ತು. ತಜ್ಞರ ಪ್ರಕಾರ ಈ ಒಪ್ಪಂದದ ಮೂಲಕ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಶೇಕಡಾ 30 ರಷ್ಟು ಕಡಿಮೆ ಮಾಡಬಹುದು ಎಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರ ಮನವಿ ತಿರಸ್ಕರಿಸಿದ್ದಾರೆ ಅಜೀಂ ಪ್ರೇಮ್ ಜಿ ಅವರು. ಅಲ್ಲದೇ ಇದಕ್ಕೆ ಸ್ಪಷ್ಟವಾದ ಕಾರಣವನ್ನು ಕೂಡ ನೀಡಿದ್ದಾರೆ.
ಕರ್ನಾಟಕ ಸರ್ಕಾರದಿಂದ ಪರ್ಯಾಯ ಮಾರ್ಗ?
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಕ್ರಿಯೆ ನೀಡಿ ಪತ್ರ ಬರೆದಿರುವ ಅಜೀಂ ಪ್ರೇಮ್ ಜಿ ಅವರು, ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುವ ವಿಶೇಷ ಆರ್ಥಿಕ ವಲಯ ಅಂದ್ರೆ SEZ ಆದ ಸರ್ಜಾಪುರ ಕ್ಯಾಂಪಸ್, ಆಡಳಿತ ಅನುಸರಣೆಗೆ ಕಟ್ಟುನಿಟ್ಟಾದ, ಮಾತುಕತೆಗೆ ಒಳಪಡದ ಪ್ರವೇಶ ನಿಯಂತ್ರಣ ಮಾನದಂಡಕ್ಕೆ ಬದ್ಧವಾಗಿ ಇದೆ ಎಂದಿದ್ದಾರೆ. ಅಲ್ಲದೆ ಖಾಸಗಿ ಆಸ್ತಿಯ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡುವುದು ಸುಸ್ಥಿರ ಪರಿಹಾರ ಅಲ್ಲ ಎಂದು ಕೂಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈಗ ಕರ್ನಾಟಕ ಸರ್ಕಾರ ಪರ್ಯಾಯ ಮಾರ್ಗ ಹುಡಕಬೇಕಿದೆ.












Click it and Unblock the Notifications