ನಿಮ್ಮ ಮುಂದೆ ಮತ್ತೊಮ್ಮೆ ಬರಲಿದೆ ವಾಲಿವಧೆ: ನೋಡಿ ಬನ್ನಿ

ಬೆಂಗಳೂರು, ಮೇ 10: ಅವಿರತ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿ ಆಧಾರಿತ ವಾಲಿವಧೆ ನಾಟಕವನ್ನು ಮೇ 19ರಂದು ಸಂಜೆ 5.30ಕ್ಕೆ ಚೌಡಯ್ಯ ಮೆಮೊರಿಯಲ್‌ಹಾಲ್‌ನಲ್ಲಿ ಆಯೋಜಿಸಿದೆ.

ಈ ಶತಮಾನದ ಮೇರು ಕೃತಿಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯು ರಾಮಾಯಣಕ್ಕೆ ಹೊಸ ನೋಟ ಹಾಗೂ ಹೊಸ ಭಾಷ್ಯವೊಂದನ್ನು ಕಟ್ಟಿಕೊಟ್ಟಿದ್ದಲ್ಲದೆ ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟಿತು. ಈ ಕೃತಿಗೆ ಗೌರವಾರ್ಪಣವಾಗಿ ಅವಿರಿತ ಪ್ರತಿಷ್ಠಾನವು ಶ್ರೀ ರಾಮಾಯಣ ದರ್ಶನಂ ಪ್ರಸಂಗವೊಂದರ ಮನರಂಜನೀಯ ದೃಶ್ಯ ರೂಪಕವಾದ ವಾಲಿವಧೆ ನಾಟಕವನ್ನು ಆಯೋಜಿಸಿದೆ.

ಈ ನಾಟಕವು ಮಕ್ಕಳನ್ನು ತಲ್ಲೀನರಾಗಿಸಿ, ಪ್ರೌಢರನ್ನು ಭಾವುಕವಾಗಿಸುವ ಅತ್ಯಂತ ವಿಶಿಷ್ಟ ಹಾಗೂ ನವಿರಾದ ನಾಟಕವಾಗಿದೆ. ಶೇಷಗಿರಿ ಹಳ್ಳಿಯ ರೈತಾಪಿ ಜನ ತಾವೇ ಕಟ್ಟಿಕೊಂಡ ಶ್ರೀ ಗಜಾನನ ಯುವಕ ಮಂಡಲಿ ಮೂಲಕ, ಎಂ. ಗಣೇಶ ಉಡುಪಿ ಅವರ ನಿದೇರ್ಶನದಲ್ಲಿ ನಾಟಕವನ್ನು ಪ್ರಯೋಗಿಸಲಾಗುತ್ತಿದೆ. ಟಿಕೆಟ್ ದರ 249 ರೂಗಳಿದೆ.

Aviratha presents Vaali Vadhe play performance on May 19

ಏನು- ವಾಲಿವಧೆ ನಾಟಕ
ಎಲ್ಲಿ- ಚೌಡಯ್ಯ ಮೆಮೊರಿಯಲ್‌ಹಾಲ್‌
ಯಾವಾಗ-ಮೇ 19
ಸಮಯ-ಸಂಜೆ 5.30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+