ಒಡವೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಬೆಂಗಳೂರು, ನವೆಂಬರ್ 24 : ಆಟೋ ಚಾಲಕರೆಂದರೆ ಒಂದಕ್ಕೆ ಡಬಲ್ ಮೀಟರ್ ಹಾಕಿ ದುಡ್ಡು ಪೀಕುವವರು, ಕರೆದ ಕಡೆ ಬರದೆ ತಕರಾರು ಮಾಡುವರು ಹೀಗೆ ನಾನಾ ರೀತಿಯ ಅಭಿಪ್ರಾಯಗಳಿವೆ.
ಆದರೆ ಈ ಅಭಿಪ್ರಾಯಗಳ ಮಧ್ಯೆ ಆಗಾಗ ಆಟೊದವರ ಪ್ರಾಮಾಣಿಕತೆ, ಸಮಾಜ ಸೇವೆ ಉದಾಹರಣೆಗಳು ದೊರಕಿ ಆಟೋ ಚಾಲಕರ ಬಗೆಗಿನ ಸಾಮಾನ್ಯ ಅಭಿಪ್ರಾಯವನ್ನು ಪುನರ್ ವಿಮರ್ಶಿಸುವಂತೆ ಮಾಡುತ್ತದೆ. ಅಂತಹುದೇ ಒಂದು ಉದಾಹರಣೆ ಇಲ್ಲಿದೆ ನೋಡಿ...
ಬೆಂಗಳೂರಿನಲ್ಲೇ ಆಟೋ ಓಡಿಸಿಕೊಂಡಿರುವ ಮಹಮ್ಮದ್ ಇಕ್ಬಾಲ್, ಪ್ರಯಾಣಿಕರೊಬ್ಬರು ಆಟೊದಲ್ಲೇ ಮರೆತು ಹೋಗಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ತುಂಬಿದ್ದ ಬ್ಯಾಗ್ ಅನ್ನು ಕಮಿಷನರ್ ಕಚೇರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸೆಪ್ಟೆಂಬರ್ 30 ರಂದು ಚೆನ್ನೈ ಮೂಲದ ಸುನಿಲ್ ಕಮಾರ್ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಇಕ್ಬಾಲ್ ಅವರ ಆಟೋದಲ್ಲಿ ಸುನಿಲ್ ಕುಮಾರ್ ಕುಟುಂಬ ಪ್ರಯಾಣ ಮಾಡಿದ್ದರು ಗಡಿಬಿಡಿಯಲ್ಲಿದ್ದ ಸುನೀಲ್ ಕುಮಾರ್ ಕುಟುಂಬ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಹೋಗಿದ್ದರು. ನಂತರ ಬ್ಯಾಗಿಗೆ ತಡಕಾಡಿ ಕೊನೆಗೆ ಜೀವನ ಭೀಮಾನಗರದಲ್ಲಿ ಪ್ರಕರಣ ದಾಖಲಿಸಿದ್ದರು.
ಮರುದಿನ ಇಕ್ಬಾಲ್ ಆಟೋ ಓಡಿಸುವಾಗ ಈ ಬ್ಯಾಗ್ ಗಮನಿಸಿದ್ದಾರೆ. ತಕ್ಷಣ ಬ್ಯಾಗ್'ಅನ್ನು ಕಮಿಷನರ್ ಕಚೇರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಒಡವೆಗಳನ್ನ ಕಳೆದುಕೊಂಡವರಿಗೆ ಮಾಹಿತಿ ತಿಳಿಸಿ ಇಕ್ಬಾಲ್ ಸಮ್ಮುಖದಲ್ಲಿ ಹಣ ವಾಪಸ್ ನೀಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications