ಬೆಂಗಳೂರು: ಅಧಿಕ ಹಣ ವಸೂಲಿ ಆರೋಪ ಸುಳ್ಳು ಎಂದ ರ್‍ಯಾಪಿಡೋ

ಬೆಂಗಳೂರು, ಅಕ್ಟೋಬರ್ 08: ಬೆಂಗಳೂರಿನಲ್ಲಿ ಪ್ರಯಾಣ ದರವನ್ನು ಹೆಚ್ಚು ವಸೂಲಿ ಮಾಡುತ್ತಿವೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ರ್‍ಯಾಪಿಡೋ ಸಂಸ್ಥೆ ತಳ್ಳಿ ಹಾಕಿದೆ. ಅಲ್ಲದೇ ಕಾನೂನು ವ್ಯಾಪ್ತಿಯಲ್ಲಿ ನಾವು ನಗರದಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದೆ.

ಸರ್ಕಾರ ನಿಗದಿಡಪಡಿಸಿದ ಹಣಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಆನ್ ಡಿಮ್ಯಾಂಡ್ ಟ್ರಾನ್ಸಪೊರ್ಟೇಶನ್ ಟೆಕ್ನಾಲಜಿ ಕಾಯ್ದೆ 2016ರ ಪ್ರಕಾರ ಮುಂದಿನ ಮೂರು ಓಲಾ, ಉಬರ್, ರ್‍ಯಾಪಿಡೋ ಸೇವೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸೇವೆಗಳು ಅಕ್ರಮ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ರ್‍ಯಾಪಿಡೋ ಕಂಪನಿ ತನ್ನ ಕಾರ್ಯ ಮುಂದುವರಿಸುವುದಾಗಿ ಹೇಳಿದೆ. ಈ ಆದೇಶದಿಂದ ರಾಜ್ಯ ಸರ್ಕಾರ ಹಾಗೂ ಓಲಾ, ಊಬರ್, ರ್‍ಯಾಪಿಡೋ ಕಂಪನಿಗಳ ಮಧ್ಯದ ದೀಘಗಾಕಲದ ಜಗಳ ಮತ್ತೆ ಮುಂದುವರಿದಿದೆ.

ನಿಗದಿತ ಸಮಯದೊಳಗೆ ಉತ್ತರಿಸುತ್ತೇವೆ

ನಿಗದಿತ ಸಮಯದೊಳಗೆ ಉತ್ತರಿಸುತ್ತೇವೆ

ನಗರ ಸಾರಿಗೆ ಸೇವೆಯಲ್ಲಿ ಸಂಪೂರ್ಣ ನಿಯಂತ್ರಣ ಹೊಂದಿರುವ ರಾಜ್ಯ ಸಾರಿಗೆ ಇಲಾಖೆ ನಿರ್ಧಾರದಿಂದ ಗ್ರಾಹಕರು ಮತ್ತು ಆಪ್ ಆಧಾರಿತವಾಗೆ ಸೇವೆ ನೀಡುವ ನಮ್ಮಂತಹ ಕಂಪನಿಗಳಿಗೂ ಹಿನ್ನಡೆ ಉಂಟಾಗುತ್ತದೆ. ಈ ಬಾರಿ ಅಕ್ರಮ ಎಂಬ ವಿಚಾರದಲ್ಲಿ ರ್‍ಯಾಪಿಡೋ ಸಂಸ್ಥೆಯೆ ಮೊದಲಿಗೆ ಪ್ರಸ್ತಾಪವಾಗಿದೆ.
ಕ್ಯಾಬ್ ಅಗ್ರಿಗೇಟರ್ ಎಕ್ಸ್‌ಪ್ರೆಸ್ ಮೊಬಿಲಿಟಿಗೆ ಆಟೋ ರಿಕ್ಷಾ ಸರ್ವಿಸ್ ಅಗ್ರಿಗೇಟರ್‌ಗಳಿಗೆ ಕಮಿಷನರ್, ರಸ್ತೆ ಸಾರಿಗೆ ಮತ್ತು ಸುರಕ್ಷತೆ, ಕರ್ನಾಟಕ ಸಾರಿಗೆ ಇಲಾಖೆಯಿಂದ ನೀಡಲಾದ ಸೂಚನೆಯಡಿ ಬೆಂಗಳೂರಿನಾದ್ಯಂತ ರ್‍ಯಾಪಿಡೋ ಸೇವೆ ನೀಡುತ್ತಿದೆ. ಹೆಚ್ಚುವರಿ ಹಣ ವಸೂಲಿ ಮಾಡಲಾಗಿಲ್ಲ. ಹೀಗಿದ್ದರು ರಸ್ತೆ ಸಾರಿಗೆ ಪ್ರಾಧಿಕಾರದಿಂದ ನೋಟಿಸ್ ನೀಡಲಾಗಿದೆ. ಇದಕ್ಕೆ ನಿಗದಿತ ಸಮಯದೊಳಗೇ ನಾವು ಉತ್ತರಿಸುತ್ತೇವೆ ಎಂದು ರ್‍ಯಾಪಿಡೋ ಸಂಸ್ಥೆ ತಿಳಿಸಿದೆ.

ಹೆಚ್ಚುವರಿ ಹಣ ವಸೂಲಿ ಸುಳ್ಳು: ರ್‍ಯಾಪಿಡೋ

ಹೆಚ್ಚುವರಿ ಹಣ ವಸೂಲಿ ಸುಳ್ಳು: ರ್‍ಯಾಪಿಡೋ

ರ್‍ಯಾಪಿಡೋ ಆಟೋ, ಟ್ಯಾಕ್ಸಿ ದರದಲ್ಲಿ ಹೆಚ್ಚುವರಿ ಹಣ ವಿಧಿಸಲಾಗುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು. ಕಂಪನಿಯು ನಿಗದಿಪಡಿಸಿದ ದರಗಳು ರಾಜ್ಯ ಸರ್ಕಾರ ಸೂಚಿಸಿದ ದರಕ್ಕೆ ಅನುಗುಣವಾಗಿಯೇ ಇವೆ. ಹೆಚ್ಚುವರಿ ದರ ವಿಧಿಸಿಲ್ಲ ಎಂದು ರ್‍ಯಾಪಿಡೋ ಕಂಪನಿ ವಕ್ತಾರರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿನ ನಮ್ಮ ಆಟೋಗಳು, ಟ್ಯಾಕ್ಸಿಗಳ ಸೇವೆಗಳ ಮೇಲೆ ಹೊರಿಸಲಾಗಿರುವುದು ಸುಳ್ಳು ಆರೋಪಗಳು, ಅವು ಸತ್ಯವಲ್ಲ. ಇಂತಹ ಆರೋಪಗಳು ನಿತ್ಯ ನಮ್ಮ ಸೇವೆ ಅವಲಂಬಿಸಿರುವ ಸಾವಿರಾರು ಪ್ರಯಾಣಿಕರ ಮೇಲೂ ಬೀರುತ್ತದೆ. ಅಲ್ದಲೇ ನಿತ್ಯದ ಜೀವನೋಪಾಯಕ್ಕೆ ರ್‍ಯಾಪಿಡೋ ಕಂಪನಿ ಆಟೋ, ಟ್ಯಾಕ್ಸಿ ಅವಲಂಬಿಸಿರುವ ಸಿಬ್ಬಂದಿಗೂ ಸಾಕಷ್ಟು ಆರ್ಥಿಕ ತೊಂದರೆ ಉಂಟಾಗುತ್ತದೆ. ಬೆಂಗಳೂರಿನ ಸಾರ್ವಜನಿಕರಿಗೆ ಸುರಕ್ಷಿತ, ಅನುಕೂಲಕರ ಪ್ರಯಾಣ ಸೇವೆ ಒದಗಿಸುವ ಗುರಿ ರ್‍ಯಾಪಿಡೋ ಹೊಂದಿದೆ ಎಂದು ಕಂಪನಿ ಪುನರಚ್ಚರಿಸಿದೆ.

ನಿಯಮ ಅನುಸರಣೆ ಕುರಿತು ವರದಿ ನೀಡಿ

ನಿಯಮ ಅನುಸರಣೆ ಕುರಿತು ವರದಿ ನೀಡಿ

ಅಪ್ಲಿಕೇಶನ್ ಆಧಾರಿತ ಆಟೋ ಸೇವೆಗಳು ಕೇವಲ ಎರಡು ಕಿ.ಮೀ. ಸೇವೆಗೂ ವಿಪರಿತವಾಗಿ ಹಣ ಪಡೆಯುತ್ತವೆ. ಹೆಚ್ಚಿನ ದರ ಪ್ರಯಾಣಿಕರಿಗೆ ವಿಧಿಸುತ್ತವೆ ಎಂದು ಹಲವರು ಹೇಳಿದ್ದಾರೆ. ಹೀಗಾಗಿ ಇದು ನಿಯಮ ಬಾಹಿರವಾಗಿದ್ದು ಸರ್ಕಾರ ನಿಗದಿಪಡಿಸಿದ ನಿಯಮ ಅನುಸರಣೆ ಕುರಿತು ಮೂರು ದಿನಗಳಲ್ಲಿ ವರದಿ ನೀಡಬೇಕು. ಅಲ್ಲಿಯವರೆಗೆ ರಾಜ್ಯ ಸರ್ಕಾರ ಓಲಾ, ಊಬರ್, ರ್‍ಯಾಪಿಡೋ ಸೇವೆ ನಿಲ್ಲಿಸಿ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಸದ್ಯ ರ್‍ಯಾಪಿಡೋ ಪ್ರತಿಕ್ರಿಯಿಸಿದೆ.

100ರೂ.ವರೆಗೂ ಕಂಪನಿಗಳು ವಸೂಲಿ

100ರೂ.ವರೆಗೂ ಕಂಪನಿಗಳು ವಸೂಲಿ

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಟೋ ದರವನ್ನು ಮೊದಲ ಎರಡು ಕಿ.ಮೀ ಸೇವೆಗೆ 30 ರೂ. ಪಡೆಯುವಂತೆ ಸೂಚಿಸಿದೆ. ಆ ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿಯಂತೆ ವಿಧಿಸಲಾಗುತ್ತದೆ. ಆದರೆ ಈ ಮೂರು ಕಂಪನಿಗಳ ಆಟೋ ಸೇವೆಗಳಿಗೆ ಕನಿಷ್ಠ ದರವಾದ ನಂತರ 100 ರೂಪಾಯಿಯನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದಕ್ಕೆ ಸಾರಿಗೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿದೆ.
ಅದಲ್ಲದೇ ಓಲಾ, ಉಬರ್ ಸಂಸ್ಥೆಗಳು ಆಟೋ ಸೇವೆ ನೀಡಲು ಮುಂಚಿತವಾಗಿ ಸಾರಿಗೆ ಇಲಾಖೆಯಿಂದ ಪಡವಾನಗಿ ಪಡೆಯಬೇಕು. ಆದರೆ ಯಾವುದೇ ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+