Atul Subhash Suicide Case: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಇದೇ ಕಾರಣನಾ, ತಾಯಿ ಹೇಳಿದ್ದೇನು ?
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೃತಕ ಬುದ್ಧಿಮತ್ತೆ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣವು ಇದೀಗ ರಾಷ್ಟ್ರದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಅತುಲ್ ಅವರು ಸಾವು ಹಲವು ಪ್ರಶ್ನೆಗಳನ್ನು ಮೂಡಿಸಿದ್ದು, ಈ ಕೇಸ್‌ನಲ್ಲಿನ ವಿಷಯಗಳು ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೀಗ ಅತುಲ್ ಅವರ ತಾಯಿ ಸಹ ಮಗನ ಸಾವಿನ ಬಗ್ಗೆ ಮಾತನಾಡಿದ್ದು ಗಂಭೀರವಾದ ಆರೋಪ ಮಾಡಿದ್ದಾರೆ. ಟೆಕ್ಕಿ ಅವರ ಆತ್ಮಹತ್ಯೆ ಪ್ರಕರಣವು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ವಿಷಯದ ಬಗ್ಗೆ ದೇಶದಾದ್ಯಂತ ಸಹ ಕಳವಳ ವ್ಯಕ್ತವಾಗಿದೆ. ಟೆಕ್ಕಿ ಅವರ ಸಾವಿನ ಬಗ್ಗೆ ಗಂಭೀರ ಆರೋಪಗಳು ಸಹ ಕೇಳಿ ಬಂದಿವೆ.
ಬೆಂಗಳೂರಿನ ಪ್ರತಿಷ್ಠಿತ ಟೆಕ್ ಕಂಪನಿಯೊಂದರಲ್ಲಿ ಅತುಲ್ ಅವರು ಕೆಲಸ ಮಾಡುತ್ತಿದ್ದರು. ಇಲ್ಲಿನ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ವಿಭಾಗದಲ್ಲಿ ಅವರು ತೊಡಗಿದ್ದರು. ಆದರೆ, ಈಚೆಗೆ ಬೆಂಗಳೂರಿನ ಮಂಜುನಾಥ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಆತ್ಮಹತ್ಯೆಗೆ ಅವರ ಪತ್ನಿ ಹಾಗೂ ಕುಟುಂಬದವರೇ ಕಾರಣ ಎಂದು ಅತುಲ್ ಅವರ ಕುಟುಂಬದವರು ದೂರಿದ್ದಾರೆ. ಈ ನಡುವೆ ಟೆಕ್ಕಿ ಅವರ ತಾಯಿ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ಅತುಲ್ ಸುಭಾಷ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಸುದೀರ್ಘ 26 ಪುಟಗಳ ಡೆತ್‌ನೋಟ್‌ವೊಂದನ್ನು ಬರೆದಿದ್ದರು. ಅಲ್ಲದೆ ಡೆತ್ ನೋಟ್‌ಗಳನ್ನು ಇ-ಮೇಲ್ ಮೂಲಕ ಎನ್‌ಜಿಒ, ಸುಪ್ರೀಂ ಹೈಕೋರ್ಟ್, ಅವರ ಆಫೀಸ್ ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸಿದ್ದರು. ಅದರಲ್ಲಿ ಅವರ ಹೆಂಡತಿ ಹಾಗೂ ಆಕೆಯ ಕುಟುಂಬದವರಿಂದ ಆಗಿದ್ದ ಮಾನಸಿಕ ಕಿರುಕುಳದ ಬಗ್ಗೆ ವಿವರಿಸಿದ್ದರು ಎನ್ನಲಾಗಿದೆ.
ನನ್ನ ಮಗನಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಅವರ ತಾಯಿ ದುಃಖ ತೊಡಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಮೂರ್ಛೆ ಹೋಗಿದ್ದಾರೆ. ಅವರ ದುಃಖ ಮುಗಿಲು ಮುಟ್ಟಿದೆ. ನನ್ನ ಮಗನಿಗೆ ತುಂಬಾನೇ ಚಿತ್ರಹಿಂಸೆ ಕೊಡಲಾಗಿದೆ. ಅವನು ನಮ್ಮ ಬಳಿ ಏನು ಹೇಳಿಕೊಳ್ಳುತ್ತಿರಲಿಲ್ಲ. ನಮ್ಮಿಂದ ಎಲ್ಲವನ್ನೂ ಅವನು ಮುಚ್ಚಿಟ್ಟಿದ್ದ ಇದೀಗ ಅವನೇ ಇಲ್ಲ ಎಂದಿದ್ದಾರೆ.
ಅತುಲ್ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದು ಕೊಲೆಗೆ ಸಮಾನವಾದ ಕೃತ್ಯ. ನನ್ನ ಮಗನನ್ನು ಚಿತ್ರಹಿಂಸೆ ನೀಡಿ ಈ ರೀತಿ ಮಾಡಿ (ಆತ್ಮಹತ್ಯೆ)ಕೊಳ್ಳುವಂತೆ ಮಾಡಲಾಗಿದೆ ಎಂದಿದ್ದಾರೆ ಅತುಲ್ ಕುಟುಂಬದವರು. ಆದರೆ, ಅತುಲ್ ಕುಟುಂಬದ ಆರೋಪಗಳನ್ನು ಅವರ ಪತ್ನಿ ಹಾಗೂ ಪತ್ನಿಯ ಕುಟುಂಬದವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ದೂರು ದಾಖಲು ತನಿಖೆ ಚುರುಕು: ಟೆಕ್ಕಿ ಅತುಲ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇದೀಗ ನಾಲ್ವರ ಮೇಲೆ ದೂರು ದಾಖಲಾಗಿದೆ. ಅತುಲ್ ಸುಭಾಷ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಮೇಲೆ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಅವರ ಪತ್ನಿಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಕುಟುಂಬದ ಸುಶೀಲ್ ಸಿಂಘಾನಿಯಾ ಎನ್ನುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಈ ವಿಷಯ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಅತುಲ್ ಸುಭಾಷ್ ಉತ್ತರ ಪ್ರದೇಶ ಮೂಲದರು. ಅತುಲ್ ಹಾಗೂ ನಿಕಿತಾ ಸಿಂಘಾನಿಯಾ ಅವರು 2019ರಲ್ಲಿ ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಅತುಲ್ ಸುಭಾಷ್ ವಿರುದ್ಧ ಪತಿ ನಿಕಿತಾ ಅವರು ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಆರೋಪದ ಮೇಲೆ ಸುಳ್ಳು ದೂರು ದಾಖಲಿಸಿದ್ದರು ಎಂದು ದೂರಲಾಗಿದೆ ಎನ್ನಲಾಗಿದೆ.
ಅಲ್ಲದೇ ಮಗನನ್ನು ನೋಡಲು ಬಿಡುತ್ತಿರಲಿಲ್ಲ 30 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ 3 ಕೋಟಿ ರೂಪಾಯಿ ಕೊಡು, ಇಲ್ಲದಿದ್ದರೆ ಬದುಕಬೇಡ ಎಂದೆಲ್ಲಾ ಹೇಳಿ ಕಿರುಕುಳ ನೀಡಲಾಗಿತ್ತಿ ಎಂದು ಹೇಳಲಾಗಿದೆ. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದಿದ್ದ ಅತುಲ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ದೂರಿನಲ್ಲಿ ಹೇಳಿರುವುದು ವರದಿಯಾಗಿದೆ ಎನ್ನಲಾಗಿದೆ.












Click it and Unblock the Notifications