ಆಟೋ ಸಂಚಾರಕ್ಕೆ ಮೊದಲು ಮುಂಜಾಗ್ರತೆಗೆ ಹೀಗೆ ಮಾಡಿ...
ಬೆಂಗಳೂರು, ಜ. 21: ಆಟೋ ಸಂಚಾರ ಬೆಂಗಳೂರಿನಲ್ಲಿ ಅನಿವಾರ್ಯ. ಆಟೋಗಳು ಮುಷ್ಕರ ಹೂಡಿದರೆ ಸಂಚಾರಕ್ಕಾಗಿ ಪರದಾಡಬೇಕಾಗುತ್ತದೆ. ಆದರೆ, ಈ ಸಂದರ್ಭ ಅವಘಡಗಳು ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ಮುಂಜಾಗ್ರತೆಗಾಗಿ ಜನರು ಕೈಗೊಳ್ಳಬೇಕಾಗದ ಕ್ರಮಗಳ ಕುರಿತು ಪೊಲೀಸರು ಸಲಹೆ ನೀಡಿದ್ದಾರೆ.
ಏನು ಮಾಡಬೇಕು? : ಸಂಚಾರಕ್ಕಾಗಿ ಆಟೋ ರಿಕ್ಷಾ ಬಳಸುವಾಗ ಅದರ ನೋಂದಣಿ ಸಂಖ್ಯೆ, ಟ್ರಾಫಿಕ್ ಪೊಲೀಸ್ ಸ್ಟಿಕ್ಕರ್ ಹಾಗೂ ಡಿಸ್‌ಪ್ಲೇ ಕಾರ್ಡ್‌ನಲ್ಲಿರುವ ಯಾವುದಾದರೊಂದನ್ನು ನೆನಪಿಟ್ಟುಕೊಳ್ಳಿ. ಕ್ಯಾಮರಾ ಸಹಿತ ಮೊಬೈಲ್ ಹೊಂದಿರುವವರು ಫೋಟೊ ಕೂಡ ತೆಗೆದಿಟ್ಟುಕೊಳ್ಳಬಹುದು. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?]

ಸಂಚಾರದ ನಂತರ ಪ್ರಯಾಣಿಕರು ತಮ್ಮ ವಸ್ತುಗಳನ್ನು ಮರೆತುಬಿಟ್ಟಿದ್ದರೂ ಉಪಯೋಗಕ್ಕೆ ಬರುತ್ತದೆ. ಅಲ್ಲದೆ, ಆಟೋದವರು ನಿಗದಿತ ಹಣಕ್ಕಿಂತ ಹೆಚ್ಚು ಕೇಳಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ ಆಟೋ ಕಂಡುಹಿಡಿಯುವುದು ಸುಲಭವಾಗುತ್ತದೆ.












Click it and Unblock the Notifications