ಗಿನ್ನಿಸ್ ದಾಖಲೆ ಮುರಿಯುವುದೆ ಯೋಧರ ಬೆಲ್ಟ್ ಬಕ್ಕಲ್?
ಬೆಂಗಳೂರು, ಡಿಸೆಂಬರ್ 10 : ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ, ಹಾಗೆ ಮುರಿಯುವ ದಾಖಲೆಗಳನ್ನು, ಹೊಸದಾಗಿ ನಿರ್ಮಾಣವಾಗುವುದನ್ನು ನೋಡುವುದೆಂದರೆ ಅದೊಂದು ಐತಿಹಾಸಿಕ ಕ್ಷಣದಲ್ಲಿ ಸಾಕ್ಷಿಯಾದಂತೆ. ಇಂತಹ ಕ್ಷಣವೊಂದು ನವಯುಗ್ ಮಿಲಿಟರಿಯ ಇ-ಕಾಮರ್ಸ್ ಪೋರ್ಟಲ್ ಉದ್ಘಾಟನೆಯ ವೇಳೆ ಲಭಿಸಿದೆ.
ಹೆಬ್ಬಾಳದ ಮಾನ್ಯತಾ ಟೆಕ್‌ಪಾರ್ಕ್ ಸಮೀಪದ ವೈಟ್ ಆರ್ಚರ್ಡ್ ಕನ್‌ವೆನ್‌ಷನ್ ಸೆಂಟರ್‌ನಲ್ಲಿ ಗುರುವಾರ, ಡಿ.10ರಂದು ನಡೆದ ಎಂಎಸ್‌ಎಂಇ ಡಿಫೆನ್ಸ್ ಎಕ್ಸ್‌ಪೊ-2015ರಲ್ಲಿ ಬೃಹದಾಕಾರದ ಟೋಪಿ, ಗಜಗಾತ್ರದ ಏಪ್ರನ್ (ಅಡುಗೆ ಶುಚಿಯಾಗಿರಲು ಧರಿಸುವ ಉಡುಗೆ, ಹೊರವಸ್ತ್ರ), ಬೆಲ್ಟ್‌ನ ಬೃಹದಾಕಾರದ ಬಕಲ್, ಭಾರೀ ಆಕಾರದ ಮೊಸಾಯಿಕ್ ಈ ನಾಲ್ಕು ವಿಭಾಗಗಳಲ್ಲಿ ಗಿನ್ನೆಸ್ ದಾಖಲೆ ಪ್ರಯತ್ನಗಳು ನಡೆದವು.
ಗಿನ್ನೆಸ್ ದಾಖಲೆಯ ಪ್ರಯತ್ನಗಳೆಂದರೆ ಅಲ್ಲೊಂದು ದೊಡ್ಡ ಕೌತುಕವೇ ನೆಲೆಸಿರುತ್ತದೆ. ಅದಕ್ಕೆ ಸಾಕ್ಷಿಯಾಗಲು ನೂರಾರು ಕಣ್ಣುಗಳು ಎದುರು ನೋಡುತ್ತಿರುತ್ತವೆ. ಈ ಪ್ರಯತ್ನ ಡಿಫೆನ್ಸ್ ಎಕ್ಸ್‌ಪೋದಲ್ಲೇ ಆಯೋಜನೆಗೊಂಡಿರುವುದು ವಿಶೇಷ.
ದೇಶವನ್ನು ಕಾಯುವ ಯೋಧರಿಗೆ ಗೌರವ ಸೂಚಿಸುವುದಕ್ಕಾಗಿ ಇದನ್ನು ಆಯೋಜಿಸಲಾಗಿತ್ತು ಎನ್ನುತ್ತಾರೆ ಕಾರ್ಯಕ್ರಮಗಳ ಸಂಘಟಕ ನವಯುಗ ಸಂಸ್ಥೆಯ ಪ್ರವರ್ತಕ ನರೇಂದ್ರ ಪಾಲ್ ಸಿಂಗ್. [ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು]

ಏನಿದೆ ಈ ಇ-ಕಾಮರ್ಸ್ ಪೋರ್ಟಲ್‌ನಲ್ಲಿ
ಇದೀಗ ಸಂಸ್ಥೆಯು ಇ-ಕಾಮರ್ಸ್ ಪೋರ್ಟಲ್ ಆರಂಭಿಸುತ್ತಿದ್ದು, ಇನ್ನು ಮುಂದೆ ಒಂದೇ ಒಂದು ಕ್ಲಿಕ್‌ನಲ್ಲಿ ಸೈನಿಕರು ಇರುವ ಸ್ಥಳಕ್ಕೆ ಅಗತ್ಯವಾದ ವಸ್ತುಗಳ ಪೂರೈಕೆ ಸಾಧ್ಯವಾಗಲಿದೆ.

ಒಂದೇ ಕ್ಲಿಕ್‌ನಲ್ಲಿ ಯೋಧರಿಗೆ ಎಲ್ಲ ಸರಕು ಲಭ್ಯ
ಕೇವಲ ಒಂದೇ ಒಂದು ಕ್ಲಿಕ್‌ನಲ್ಲಿ ಯೋಧರಿಗೆ ಅಗತ್ಯವಿರುವ ಎಲ್ಲಾ ಸರಕುಗಳನ್ನು, ಸೌಲಭ್ಯಗಳನ್ನು ಒದಗಿಸುವ ಜಗತ್ತಿನ ಮೊದಲ ಕಂಪೆನಿ ಎಂಬ ಹೆಗ್ಗಳಕೆಗೆ ನವಯುಗ್ ಮಿಲಿಟರಿ ಸಂಸ್ಥೆ ಪಾತ್ರವಾಗಿದೆ.

ಮರುಭೂಮಿಯಲ್ಲೇ ಇರಲಿ, ಹಿಮಾಲಯದಲ್ಲೇ ಇರಲಿ
ಸೈನಿಕರು ರಾಜಸ್ಥಾನದ ಮರುಭೂಮಿಯಲ್ಲಿರಲಿ, ಕಾಶ್ಮೀರದ ಹಿಮಾಚ್ಛಾದಿತ ಪರ್ವಗಳಲ್ಲಿರಲಿ, ಜಗತ್ತಿನ ಯಾವದೇ ಮೂಲೆಯಲ್ಲಿ ಸೇವೆ ಸಲ್ಲಿಸುತ್ತಿರಲಿ, ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

1973ರಿಂದಲೇ ಕಾರ್ಯನಿರತ ಕಂಪನಿ
ಭಾರತದ ಯೋಧರು ಎಲ್ಲೇ ಇರಲಿ, ಅವರಿಗೆ ಸಮವಸ್ತ್ರ ಮತ್ತು ಇತರ ಪರಿಕರಗಳನ್ನು ಒದಗಿಸುವ ಕಾರ್ಯವನ್ನು ನವಯುಗ್ ಮಿಲಿಟರಿ ಕಂಪೆನಿ 1973ರಿಂದ ಈ ಕಾರ್ಯದಲ್ಲಿ ತೊಡಗಿದೆ.












Click it and Unblock the Notifications